ಚಿತ್ರದುರ್ಗ ಮೇ. 21
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಇಂದು ನಾವುಗಳು ಬಳಕೆ ಮಾಡುತ್ತಿರುವ ಮೊಬೈಲ್, ಕಂಪ್ಯೂಟರ್, ಡಿಜಿಟಲಿಕರಣ, 18 ವರ್ಷಕ್ಕೆ ಮತದಾನ, ಆಡಳಿತದಲ್ಲಿ ವಿಕೇಂದ್ರೀಕರಣ ಎಲ್ಲವೂ ಸಹಾ ಮಾಜಿ ಪ್ರಧಾನ ಮಂತ್ರಿ ರಾಜೀವ ಗಾಂಧಿಯವರು ನೀಡಿದ ಕೂಡುಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ.ತಾಜ್ಪೀರ್ ತಿಳಿಸಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಮಾಜಿ ಪ್ರಧಾನ ಮಂತ್ರಿ ದಿ.ರಾಜೀವ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕಳೆದ 40 ವರ್ಷಗಳ ಹಿಂದೇಯೇ ನಮ್ಮ ದೇಶ 21ನೇ ಶತಮಾನಕ್ಕೆ ಕಾಲಿಡುವ ಮುನ್ನವೇ ಅದಕ್ಕೆ ಬೇಕಾದ ಸಿದ್ದತೆಯನ್ನು ಅವರ ತಮ್ಮ ಆಡಳಿತದಲ್ಲಿ ಮಾಡಿದ್ದರು. ನಮ್ಮ ದೇಶದ ಜನತೆಯ ಕೈಯಲ್ಲಿಯೂ ಸಹಾ ಮೋಬೈಲ್ ಇರಬೇಕು ಅವರು ಸಹಾ ಬೇರೆ ದೇಶದವರಂಎತ ಕಂಪ್ಯೂಟರ್ ಬಳಕೆಯನ್ನು ಮಾಡಬೇಕೆಂದು ಆಸೆಯನ್ನು ಪಟ್ಟಿದ್ದರು ಅದರಂತೆಯೇ ಸಹಾ ಅದು ಜಾರಿಯಾಗಲು ಬೇಕಾದ ನೆರವನ್ನು ನೀಡಿದ್ದರು. ಇದರಿಂದಾಗಿ ಈಗ ನಾವುಗಳು ಅವರ ನೀಡದ ಕೂಡುಗೆಯನ್ನು ಅನುಭವಿಸುತ್ತಿದ್ದೇವೆ ಎಂದರು.
ರಾಜೀವಗಾಂಧಿಯವರ ರಾಜಕೀಯಕ್ಕೆ ಬರಬೇಕೆಂದು ಬಂದವರಲ್ಲ ಅವರ ತಾಯಿಯವರಾದ ಇಂದಿರಾ ಗಾಂಧಿಯವರ ನಿಧನದಿಂದ ತೆರವಾದ್ ಸ್ಥಾನಕ್ಕೆ ಅವರು ಬರುವುದರ ಮೂಲಕ ದೇಸದ ಪ್ರಧಾನ ಮಂತ್ರಿ ಯಾಗಿ ಉತ್ತಮವಾದ ಆಡಳಿತವನ್ನು ನೀಡಿ ದೇಶದ ಪ್ರಗತಿಗೆ ಕಾರಣರಾದರು. ನಮ್ಮ ದೇಶವನ್ನು ಆಳಿದ ಪ್ರಧಾನಮಂತ್ರಿಗಳು ಒಂದೊಂದು ರೀತಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ದೇಶಕ್ಕೆ ನೀಡಿದ್ದಾರೆ, ದೇಶ ಸ್ವಾತಂತ್ರವಾದಾಗ ಆಹಾರ, ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿತ್ತು. ತದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಸಿರುಕ್ರಾಂತಿಯನ್ನು ಮಾಡಿದರೆ, ಇಂದಿರಾ ಗಾಂಧಿಯವರ ಬ್ಯಾಂಕು ಗಳನ್ನು ರಾಷ್ಟ್ರಿಕರಣ ಮಾಡುವುದರ ಮೂಲಕ ಬಡವರು ಸಹಾ ಬ್ಯಾಂಕ್ ಬಳಕೆ ಮಾಡುವಂತೆ ಮಾಡಿದರೆ. ರಾಜೀವಗಾಂಧಿಯವರು ದೇಶವನ್ನು 21ನೇ ಶತಮಾನದತ್ತ ಕೊಂಡ್ಯೂಯುವ ಕಾರ್ಯವನ್ನು ಮಾಡಿದ್ದಾರೆ ಎಂದು ತಾಜ್ಪೀರ್ ತಿಳಿಸಿದರು.
ರಾಜೀವಗಾಂಧಿಯವರು ಅಧಿಕಾರದಲ್ಲಿದ್ದಾಗ ಯುವ ಜನತೆ ನಮ್ಮಲ್ಲಿ ಹೆಚ್ಚಾಗಿ ಇತ್ತು ಇವರನ್ನು ನಮ್ಮ ದೇಶದ ಬೆಳವಣಿಗೆಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿ 21 ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ನೀಡುವುದರ ಮೂಲಕ ಅವರನ್ನು ಸಹಾ ದೇಶದ ಪ್ರಗತಿಯಲ್ಲಿ ಭಾಗಿದಾರರನ್ನಾಗಿ ಮಾಡಿದರು. ಆಡಳಿತವೂ ಒಂದು ಕಡೆಯಲ್ಲಿ ಕೇಂದ್ರೀಕೃತವಾಗಿತ್ತು ಅದನ್ನು ಅವರ ತಿದ್ದುಪಡಿಯನ್ನು ತರುವುದರ ಮೂಲಕ ಕೇಂದ್ರೀಕೃತವಾಗಿದ್ದ ಅಧಿಕಾರವನ್ನು ವಿಕೇಂದ್ರೀಕರಣ ಮಾಡುವುದರ ಮೂಲಕ ಸಾಮಾನ್ಯ ವ್ಯಕ್ತಿಯೂ ಸಹಾ ದೇಶದ ಪ್ರಗತಿಯಲ್ಲಿ ಭಾಗಿಯಾಗಬೇಕೆಂದು ಮಾಡಲಾಯಿತು. ರಾಜೀವಗಾಂಧಿಯವರ ಇನ್ನೂ ಬದುಕಿದ್ದರೆ ನಮ್ಮ ದೇಶ ಬಹಳ ವರ್ಷಗಳ ಹಿಂದೇಯೇ ಬೇರೆ ದೇಶಗಳಿಗೆ ಸೆಡ್ಡು ಹೊಡೆದು ಪ್ರಗತಿಯನ್ನು ಸಾಧಿಸುತ್ತಿತ್ತು ಎಂದರು.
ಗ್ಯಾರೆಂಟಿ ಪ್ರಾಧಿಕಾರ ಅಧ್ಯಕ್ಷರಾದ ಶಿವಣ್ಣ ಮಾತನಾಡಿ, ರಾಜೀವ ಗಾಂಧಿಯವರು ಆಗಲೇ ದೇಶವನ್ನು 21ನೇ ಶತಮಾನಕ್ಕೆ ತೆಗೆದುಕೊಂಡು ಹೋಗಬೇಕೆಂದು ಕನಸನ್ನು ಕಂಡದಿದ್ದರು, ಅದಕ್ಕೆ ಬೇಕಾದ ತಯಾರಿಯನ್ನು ಸಹಾ ಮಾಡಿದ್ದರು ಆದರೆ ತಮಿಳ ಉಗ್ರರ ಕೃತ್ಯಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು, ದೇಶದ ಪ್ರಧಾನ ಮಂತ್ರಿಯಾಗಿ ಉತ್ತಮವಾದ ಆಡಳಿತವನ್ನು ನೀಡಿದ್ದರು ಈಗಿನ ಪ್ರಧಾನ ಮಂತ್ರಿಯಂತೆ ನುಡಿ ಒಂದು ನಡೆ ಒಂದು ಎಂಬಂತೆ ಇರಲಿಲ್ಲ, ಅಚ್ಚಾದೀನ್ ಬರುತ್ತದೆ ಎಂದು ಹೇಳುತ್ತಾ ಜನರನ್ನು ದರ ಏರಿಕೆಯ ಸಮರದಲ್ಲಿ ನೂಕುತ್ತಿದ್ದಾರೆ. ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರೆಂಟಿಗಳಲ್ಲಿ ಬಡ ಜನತೆ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಲಕ್ಷಾಂತರ ಜನತೆಗೆ ಹಕ್ಕು ಪತ್ರಗಳನ್ನು ನೀಡಲಾಯಿತು. ಮುಂದಿನ ದಿನಮಾನದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಡಳಿತಕ್ಕೆ ಬರಲಿದೆ, ಇದಕ್ಕೆ ಈಗಿನಿಂದಲೇ ಸಿದ್ದತೆಯನ್ನು ಮಾಡಿಕೊಳ್ಳಬೇಕಿದೆ ಎಂದು ಪಕ್ಷದ ಕಾರ್ಯಕರ್ತ ರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಧ್ಯಕ್ಷ ಲಕ್ಷ್ಮೀಕಾಂತ, ಮುದಸಿರ್, ನೇತಾ, ರಾಮನಾಯ್ಕ್ ರವರಯು ರಾಜೀವಗಾಂಧಿಯವರ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಎಸ್.ಟಿ. ಘಟಕದ ಅಧ್ಯಕ್ಷ ಮಂಜುನಾಥ್, ಕಾರ್ಮಿಕ ಘಟಕದ ಅಧ್ಯಕ್ಷ ಸೈಯದ್ ಮೋಹಿದ್ದೀನ್, ಪೈಲಟ್, ಉಪಾಧ್ಯಕ್ಷ ರವಿಕುಮಾರ್, ಮುದಸಿರ್, ಸೇವಾದಳದ ಅಧ್ಯಕ್ಷ ಭೂತೇಶ್, ರಾಮನಾಯ್ಕ್, ಆರತಿ,ಮುನೀರಾ ಮುಕಾಂದರ್ ಸೇರಿದಂತೆ ಇತರರು ಭಾಗವಹಿಸಿದ್ದರು.