ಪ್ರತಿಯೊಂದು ದಿನವೂ ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ಇಂದಿನ ಪಂಚಾಂಗ, ಶುಭಾಶುಭ ಸಮಯ ಹಾಗೂ ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಇಂದಿನ ಭವಿಷ್ಯದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಇಂದಿನ ಪಂಚಾಂಗ
- ಶಕೆ ಮತ್ತು ಸಂವತ್ಸರ: ಶಾಲೀವಾಹನ ಶಕೆ ೧೯೪೯, ಪರಾಭವ ಸಂವತ್ಸರ
- ಆಯನ ಮತ್ತು ಋತು: ಉತ್ತರಾಯಣ, ಗ್ರೀಷ್ಮ ಋತು
- ಮಾಸ: ಅಧಿಕ ಜ್ಯೇಷ್ಠ (ಚಾಂದ್ರಮಾನ), ವೃಷಭ (ಸೌರಮಾನ)
- ನಕ್ಷತ್ರ: ಕೃತ್ತಿಕಾ (ಮಹಾನಕ್ಷತ್ರ), ಉತ್ತರಾಫಲ್ಗುಣೀ (ನಿತ್ಯನಕ್ಷತ್ರ)
- ವಾರ ಮತ್ತು ಪಕ್ಷ: ಸೋಮವಾರ, ಶುಕ್ಲ ಪಕ್ಷ
- ತಿಥಿ, ಯೋಗ, ಕರಣ: ನವಮೀ, ವ್ಯಾಘಾತ, ತೈತಿಲ
- ಸೂರ್ಯೋದಯ ಮತ್ತು ಸೂರ್ಯಾಸ್ತ: ಬೆಳಿಗ್ಗೆ 05:56 – ಸಂಜೆ 06:46
ಶುಭಾಶುಭ ಕಾಲಗಳು:
- ರಾಹು ಕಾಲ: ಬೆಳಿಗ್ಗೆ 07:33 ರಿಂದ 09:09 ರವರೆಗೆ
- ಯಮಗಂಡ ಕಾಲ: ಬೆಳಿಗ್ಗೆ 10:45 ರಿಂದ ಮಧ್ಯಾಹ್ನ 12:21 ರವರೆಗೆ
- ಗುಳಿಕ ಕಾಲ: ಮಧ್ಯಾಹ್ನ 01:58 ರಿಂದ 03:34 ರವರೆಗೆ
ದ್ವಾದಶ ರಾಶಿಗಳ ಇಂದಿನ ಭವಿಷ್ಯ
ಮೇಷ ರಾಶಿ
ಆತುರದ ನಿರ್ಧಾರಗಳು ಬೇಡ, ಇದರಿಂದ ತೊಂದರೆ ಅನುಭವಿಸಬೇಕಾಗಬಹುದು. ಸಂಗಾತಿಯೊಂದಿಗೆ ಉತ್ತಮ ಸಂವಹನ ಇರುತ್ತದೆ. ಇತರರ ಬಗ್ಗೆ ಅಸೂಯೆ ಪಡುವುದು ಬೇಡ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ವಿಶ್ರಾಂತಿಗೆ ಆದ್ಯತೆ ನೀಡಿ. ದಿನದ ಅಂತ್ಯದಲ್ಲಿ ಸಿಹಿಸುದ್ದಿಯೊಂದು ಕಾದಿದೆ. ಮಾನಸಿಕವಾಗಿ ಕಾಡುವ ನಕಾರಾತ್ಮಕ ಚಿಂತನೆಗಳನ್ನು ದೂರವಿಡಿ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ ತರುವಿರಿ.
ವೃಷಭ ರಾಶಿ
ನಿಮ್ಮ ಮೃದು ಮಾತುಗಳಿಗೆ ಪ್ರಶಂಸೆ ದೊರೆಯಲಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಜಾಹೀರಾತು ರಂಗದವರಿಗೆ ಹೊಸ ಯೋಜನೆಗಳು ಸಿಗುವ ಸಾಧ್ಯತೆ ಇದೆ. ಕೋಪ ಹಾಗೂ ಅಹಂಕಾರವನ್ನು ಬದಿಗೊತ್ತಿ, ಶಾಂತಿಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ನೀವು ಸಂತೋಷವಾಗಿರುವುದರಿಂದ ಕೈಹಾಕುವ ಎಲ್ಲ ಕೆಲಸಗಳಲ್ಲೂ ಯಶಸ್ಸನ್ನು ಪಡೆಯುತ್ತೀರಿ.
ಮಿಥುನ ರಾಶಿ
ಮಂದಗತಿಯ ಕೆಲಸಗಳು ಬೇಸರ ತರಿಸಬಹುದು. ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳಾಗುವ ಲಕ್ಷಣಗಳಿವೆ. ಆರೋಗ್ಯದ ಸಮಸ್ಯೆಯಿಂದ ಪ್ರಮುಖ ಕೆಲಸವೊಂದು ಮುಂದೂಡಲ್ಪಡಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಬಹುದು. ಮೌಲ್ಯಯುತವಾದ ವಸ್ತುವನ್ನು ಪಡೆಯುವ ಬಯಕೆ ಈ ದಿನ ಈಡೇರಬಹುದು. ವಸ್ತುಗಳನ್ನು ಕಳೆದುಕೊಳ್ಳುವ ಭೀತಿ ಇರುವುದರಿಂದ ಎಚ್ಚರಿಕೆ ಇರಲಿ. ಯಾವುದೇ ಉದ್ವೇಗಕ್ಕೆ ಒಳಗಾಗುವುದು ಬೇಡ.
ಕರ್ಕಾಟಕ ರಾಶಿ
ಮಕ್ಕಳು ಹಾಗೂ ಸ್ನೇಹಿತರಿಂದ ಶುಭ ವಾರ್ತೆ ಕೇಳುವಿರಿ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು, ಹಿರಿಯರ ಮಾರ್ಗದರ್ಶನ ಪಡೆಯಿರಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸ್ತವ್ಯ ಇರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿ ತೋರಿಸದ ಕಾರಣ ಬೇಸರವಾಗಬಹುದು. ಭಾವನಾತ್ಮಕ ನಿರ್ಧಾರಗಳು ನಿಮಗೆ ಮುಳುವಾಗುವ ಸಾಧ್ಯತೆ ಇದೆ.
ಸಿಂಹ ರಾಶಿ
ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ವಿಷಯದಲ್ಲಿ ದುರಾಸೆ ಬೇಡ. ತಾಳ್ಮೆ ಮತ್ತು ಸತ್ಯವೇ ನಿಮ್ಮ ಇಂದಿನ ಅಸ್ತ್ರ. ಸಂಜೆಯ ವೇಳೆಗೆ ಆರ್ಥಿಕ ನಷ್ಟಗಳು ಸರಿದೂಗಲಿವೆ. ನಿರಾಶೆ ಕೊನೆಗೊಂಡು ಆಲೋಚನೆಯಲ್ಲಿ ಸಕಾರಾತ್ಮಕತೆ ಬರಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ, ಆದರೆ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ಅಗತ್ಯ. ನಿಮ್ಮ ಉದ್ಯಮಕ್ಕೆ ಹೊಸ ದಿಕ್ಕು ಸಿಗುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಆಪ್ತರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಹಾಗೂ ಮಾನಸಿಕ ನೆಮ್ಮದಿ ಇರುತ್ತದೆ. ವೃತ್ತಿಜೀವನದಲ್ಲಿ ಕೀರ್ತಿ ಹೆಚ್ಚಲಿದೆ. ಪರರ ವಸ್ತುಗಳ ಮೇಲೆ ವ್ಯಾಮೋಹ ಬೇಡ, ಆಸೆಗಳನ್ನು ಹಿಡಿತದಲ್ಲಿಡಿ. ವ್ಯಾಪಾರದಲ್ಲಿ ಹೊಸ ಹೂಡಿಕೆಗೆ ಅವಸರ ಮಾಡದಿರಿ. ವಿರೋಧಿಗಳಿಗೆ ನಿಮ್ಮ ಬೆಳವಣಿಗೆ ನುಂಗಲಾರದ ತುತ್ತಾಗಲಿದೆ. ನಿಮ್ಮ ನೇರ ಮಾತುಗಳು ಕೆಲವರಿಗೆ ಇಷ್ಟವಾಗದಿರಬಹುದು.
ತುಲಾ ರಾಶಿ
ಖರ್ಚು-ವೆಚ್ಚಗಳು ನಿಯಂತ್ರಣದಲ್ಲಿರಲಿವೆ. ಆಪ್ತರೊಂದಿಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ. ಆರೋಗ್ಯ ಸುಧಾರಿಸಲಿದೆ. ಕೆಲವು ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಭೋಗದ ವಿಧಾನಗಳು ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣ ಮಾಡುವ ಮಾತುಕತೆ ನಡೆಯಲಿದೆ.
ವೃಶ್ಚಿಕ ರಾಶಿ
ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದೆ. ಮಕ್ಕಳ ಪ್ರಯತ್ನಗಳಿಗೆ ತಕ್ಕ ಫಲ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇರುತ್ತದೆ. ಕುಟುಂಬದ ಕೀರ್ತಿಯನ್ನು ಹೆಚ್ಚಿಸುವಿರಿ. ಮಾತಿನ ಮೇಲೆ ಸಂಪೂರ್ಣ ಹಿಡಿತವಿರಲಿ, ಇಲ್ಲವಾದರೆ ಆರ್ಥಿಕ ಹಾಗೂ ಮಾನಸಿಕ ನಷ್ಟ ಕಟ್ಟಿಟ್ಟ ಬುತ್ತಿ.
ಧನು ರಾಶಿ
ಕೆಲಸದ ಸ್ಥಳದಲ್ಲಿ ಚುರುಕುತನ ಮೂಡಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಹೊಸ ಮನೆ ಕಟ್ಟುವ ಕನಸಿಗೆ ಮರುಜೀವ ಸಿಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಿದ್ದರೂ, ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಒಡನಾಟವಿಟ್ಟುಕೊಳ್ಳಿ. ನಕಾರಾತ್ಮಕ ಆಲೋಚನೆಗಳಿಂದ ನಿಮ್ಮ ಸಮಯ ಹಾಳಾಗಬಹುದು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ.
ಮಕರ ರಾಶಿ
ಬದಲಾವಣೆಯ ಹಂಬಲ ನಿಮ್ಮಲ್ಲಿ ಹೆಚ್ಚಾಗಲಿದೆ. ಪ್ರೀತಿಯ ವಿಚಾರದಲ್ಲಿ ಸ್ನೇಹಿತರ ಬೆಂಬಲ ಸಿಗಲಿದೆ. ಕೆಲವು ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಆದಾಯದಲ್ಲಿ ಹೆಚ್ಚಳ ಮತ್ತು ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಲಾಭ ತಂದುಕೊಡಲಿವೆ. ಕೌಟುಂಬಿಕ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ.
ಕುಂಭ ರಾಶಿ
ಇಂದು ಆರ್ಥಿಕವಾಗಿ ಸ್ವಲ್ಪ ಒತ್ತಡ ಎದುರಾದರೂ, ಅದು ತಾತ್ಕಾಲಿಕ. ಕೆಲಸದಲ್ಲಿ ಹಿರಿಯರಿಂದ ಮೆಚ್ಚುಗೆ ಪಡೆಯುವಿರಿ. ಮನೆತನದ ಪ್ರತಿಷ್ಠೆಗೆ ಯೋಗ್ಯ ರೀತಿಯಲ್ಲಿ ವರ್ತಿಸುವಿರಿ. ಸಂಬಂಧಗಳಲ್ಲಿ ಸ್ಪಷ್ಟತೆ ಇಟ್ಟುಕೊಳ್ಳಿ. ಮನೆ ಮತ್ತು ವಾಹನ ಸಂಬಂಧಿತ ಕೆಲಸಗಳಿಗೆ ಇದು ಅನುಕೂಲಕರ ದಿನ. ಅನಗತ್ಯ ವ್ಯಕ್ತಿಗಳ ಭೇಟಿಯಿಂದ ತೊಂದರೆ ಎದುರಿಸಬೇಕಾಗಬಹುದು.
ಮೀನ ರಾಶಿ
ನಿಮ್ಮ ಬಹುದಿನಗಳ ಕನಸೊಂದು ನನಸಾಗುವ ಸಮಯವಿದು. ಮೌನವಾಗಿರುವುದು ಹಲವು ವಿವಾದಗಳನ್ನು ತಪ್ಪಿಸುತ್ತದೆ. ಸಣ್ಣ ವಿಷಯಗಳಿಗೂ ಕೋಪಗೊಳ್ಳುವುದನ್ನು ಬಿಟ್ಟು ಪರಿಹಾರದತ್ತ ಗಮನ ಹರಿಸಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಳೆಯ ಅನುಭವಗಳನ್ನು ನೆನಪಿಸಿಕೊಳ್ಳಿ. ಸ್ವಂತ ವ್ಯಾಪಾರ, ವ್ಯವಹಾರ ಮತ್ತು ಕೌಟುಂಬಿಕ ಒತ್ತಡಗಳು ಇಂದು ನಿವಾರಣೆಯಾಗಲಿವೆ.