ಮಕ್ಕಳಿಗೆ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕು : ಉಪ ಪರಿಸರ ಅಧಿಕಾರಿ ಪಿ. ರಾಜೇಶ್.
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 06 ವಿಶ್ವ ಪರಿಸರದ ದಿನದ ಅಂಗವಾಗಿ ಈ ವರ್ಷ ಪ್ರಕೃತಿಯಿಂದ ಪ್ರೇರಿತ, ಹವಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಧ್ಯೇಯದೊಂದಿಗೆ ನಾವು ಕೆಲಸ ಮಾಡಬೇಕಿದೆ.
ಪ್ರಕೃತಿಯಿಂದ ನಾವು, ನಮ್ಮಿಂದ ಪ್ರಕೃತಿ ಇಲ್ಲ ಎಂಬ ಪ್ರಜ್ಞೆ ನಮಗಿರಬೇಕು. ಶಾಲಾ-ಕಾಲೇಜುಗಳಿಗೆ, ಮಕ್ಕಳಿಗೆ ಪರಿಸರದಿಂದ ಆಗುವ ಅನುಕೂಲಗಳ ಬಗ್ಗೆ, ನೀರು, ಗಾಳಿ, ನೆಲ, ಜಲಚರ ಪ್ರಾಣಿಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿಗಳಾದ ಪಿ ರಾಜೇಶ್ ತಿಳಿಸಿದರು.
ಚಿತ್ರದುರ್ಗ ನಗರದ ಗುರುಭವನ ಮುಂಬಾಗದ ಸರ್ಕಾರಿ ಉನ್ನತ ತರಬೇತಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಟ್ಟೆಯ ಚೀಲಗಳನ್ನ ವಿತರಿಸಿ ಮಾತನಾಡಿದ ಅವರು ಮಕ್ಕಳಿಗೆ ನೀರು ಎಲ್ಲಿಂದ ಬರುತ್ತದೆ ಎಂದರೆ ಈಗ ಸಂಪಿನಿಂದ ಬರುತ್ತದೆ, ನಲ್ಲಿಗಳಿಂದ ಬರುತ್ತದೆ ಎಂಬ ಸ್ಥಿತಿ ಉಂಟಾಗಿದೆ, ಅವರಿಗೆ ಕೆರೆಕಟ್ಟೆಗಳು, ನದಿ ಸಮುದ್ರಗಳ ಪರಿಚಯ ಮಾಡಿಕೊಡಬೇಕು, ಏಕ ಬಳಕೆ ಪ್ಲಾಸ್ಟಿಕ್ ಅನ್ನ ನಿಷೇಧ ಮಾಡಿಕೊಂಡು, ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು, ನೀರಿನ ಮಿತ ಬಳಕೆಯ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು, ಶಾಲೆಯ ಸುತ್ತಮುತ್ತ ಹಸೀರಕರಣಗೊಳಿಸಿಕೊಂಡು, ಉತ್ತಮ ವಾತಾವರಣದಲ್ಲಿ ಶಿಕ್ಷಣ ನೀಡಬೇಕು ಎಂದು ತಾವೇ ಓದಿದ ಶಾಲೆಯ ನೆನಪುಗಳನ್ನ ಮಾಡಿಕೊಂಡರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಚರಕದಿಂದ ಆಗುವ ಉಪಯೋಗಗಳನ್ನು ಮಕ್ಕಳಿಗೆ ತೋರಿಸಿಕೊಡಬೇಕು, ಗ್ರಾಮೀಣ ಉದ್ಯೋಗಗಳನ್ನ ಪುನಸ್ಥಾಪಿಸಬೇಕು, ಕೈಕಾಲುಗಳನ್ನು ಬಳಸಿ ದುಡಿಮೆ ಮಾಡುವುದನ್ನು ಹೇಳಿಕೊಟ್ಟರೆ, ಪರಿಸರ ಮಾಲಿನ್ಯ ಕಡಿಮೆಗೊಳಿಸಬಹುದು ಎಂದು ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.
ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಬೇದ್ರೆಯವರು ಮಾತನಾಡುತ್ತಾ ಹೆಚ್ಚುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ, ಮಾನವನ ಅತಿಯಾದ ಸುಖದ ಜೀವನಕ್ಕೆ ದಿನ ದಿನಕ್ಕೆ ಪರಿಸರ ನಾಶವಾಗುತ್ತಿದೆ, ಹಾಗಾಗಿ ಸರಳ ಜೀವನವನ್ನು ಅಳವಡಿಸಿಕೊಂಡು, ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನ ಬಳಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಚಿನ್ಮಯ ಮಯೂರ್ ಯೋಗ ಶಿಕ್ಷಣ ಸಾಂಸ್ಕೃತಿಕ ಸಂಸ್ಥೆಯ ಮುರಳಿ ಎಂ ಬಿ, ಮುಖ್ಯೋಪಾಧ್ಯಯರಾದ ಭಾರತಮ್ಮ, ಶಿಕ್ಷಕರಾದ ಸಂತೋಷ್ ವಿಜಯಲಕ್ಷ್ಮಿ, ಪ್ರಕಾಶ್, ಪ್ರಾಣಿ ದಯಾ ಸಂಸ್ಥೆಯ ಮಾನಸ ಹಾಜರಿದ್ದರು.