ಪದವೀಧರರ ಕ್ಷೇತ್ರ ಚುನಾವಣೆ: ಚಿತ್ರದುರ್ಗ ಜಿಲ್ಲೆಗೆ ನವೀನ್ ಹಾಗೂ ರಘುಚಂದನ್ ನೇಮಕ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 6
ಮುಂಬರುವ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಾರ್ಟಿವತಿಯಿಂದ ಕ್ಷೇತ್ರ ಸಂಯೋಜಕರು ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ರವರು ಆದೇಶವನ್ನು ಹೊರಡಿಸಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಕ್ಷೇತ್ರ ಸಂಯೋಜಕರಾಗಿ ಎಸ್.ಕೇಶವಪ್ರಸಾದ್, ಜಿಲ್ಲಾ ಉಸ್ತುವಾರಿಗಳಾಗಿ ಚಿತ್ರದುರ್ಗ ಜಿಲ್ಲೆಗೆ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಹಾಗೂ ದೇವರಾಜು ವಿದ್ಯಾ ಸಂಸ್ಥೆಯ ಸಿಇಓ ರಘುಚಂದನ್‍ರವರನ್ನು ನೇಮಕ ಮಾಡಿ ಆದೇಶವನ್ನು ನೀಡಿದ್ದಾರೆ.

ಇದೇ ರೀತಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದ ಉಳಿದ ನಾಲ್ಕು ಜಿಲ್ಲೆಗಳಿಗೂ ಸಹಾ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *