ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026ಕ್ಕೆ ಚಾಲನೆ
ಚಿತ್ರದುರ್ಗ ಜೂ. 15
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ದೇಶದಲ್ಲಿ ಮನಮೋಹನಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಪರಿಸ್ಥಿತಿ ಯಾವ ರೀತಿ ಇತ್ತು ಈಗ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದಾಗ ದೇಶದ ಪರಿಸ್ಥಿತಿ ಯಾವ ರೀತಿಯಲ್ಲಿದೆ ಎಂಬುದನ್ನು ಮತದಾರರಿಗೆ ತಿಳಿಸುವಂತ ಕಾರ್ಯದ ಜೊತೆಗೆ ರಾಜ್ಯ ಸರ್ಕಾರದ ದುರಾಳಿತವನ್ನು ಸಹಾ ತಿಳಿಸುವಂತ ಕಾರ್ಯವನ್ನು ಮಾಡುವಂತೆ ಪ್ರಶಿಕ್ಷಣಾರ್ಥಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಕರೆ ನೀಡಿದರು.

ಶಿವಮೊಗ್ಗ ನಗರದ ಹೊರಹೊಲಯದ ಹೋಟೆಲ್ ಮಲ್ನಾಡ್ಶೈರ್ನಲ್ಲಿ ಹಮ್ಮಿಕೊಳ್ಳಗಿದ್ದ ಇಂದಿನಿಂದ 2 ದಿನಗಳು ಪಂಡಿತ್ ದೀನದಾಯಳ್ ಉಪಾಧ್ಯಯ ಪ್ರಶಿಕ್ಷಣ ಮಹಾಭಿಯಾನ-2026 ಚಿತ್ರದುರ್ಗ ಜಿಲ್ಲಾ ಪ್ರಶಿಕ್ಷಣ ವರ್ಗದ ಕಾರ್ಯಾಗಾರವನ್ನು ಗಿಡಕ್ಕೆ ನೀರನ್ನು ಹಾಕಿ, ತಾಯಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ರವರ ಸೂಚನೆಯಂತೆ ಇಡೀ ದೇಶದ್ಯಾಂತ ಮಂಡಲ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರಿಗೆ ಪ್ರಶಿಕ್ಷಣ ನೀಡುವಂತೆ ಆದೇಶ ನೀಡಿರುತ್ತಾರೆ. ಮುಂದುವರಿದು RSS 100 ವರ್ಷಗಳು ಪೂರೈಸಿದ ಈ ಸಂದರ್ಭದಲ್ಲಿ ನಾವುಗಳು ಸಂಘಟತ್ಮಕವಾಗಿ ನಾವು ತೊಡಗಿಸಿಕೊಳ್ಳಬೇಕು.
ಈ ಹಿಂದೆ 2014 ರ ಮುಂಚೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ 2ಉ ಸ್ಪೆಕ್ಟ್ರಂ, ಕಾಮನ್ ವೇಲ್ತ್, ಕಲ್ಲಿದ್ದಲು ಹಗರಣ ಸೇರಿದಂತೆ ಸಾಕಷ್ಟು ಭ್ರಷ್ಟಾಚಾರಗಳಿಂದ ಕೂಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಿತಿ ಯಾವ ರೀತಿಯಲ್ಲಿತ್ತು ಎಂಬುದು ಎಲ್ಲರಿಗೂ ಗೊತ್ತು. ಮೋದಿಜೀಯವರು ಪ್ರಧಾನಿ ಆದಮೇಲೆ ಭ್ರಷ್ಟಾಚಾರ ರಹಿತ ಆಡಳಿತವನ್ನು ಓಆಂ ನೇತೃತ್ವದಲ್ಲಿ 3 ಬಾರಿ ಪ್ರಧಾನಿಯಾಗಿ ಅಧಿಕಾರ ಮಾಡುತ್ತಾ ಭಾರತವನ್ನು ವಿಶ್ವದಲ್ಲಿ 4ನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣ ಮಾಡಿರುವ ಹೆಮ್ಮೆಗೆ ಪಾತ್ರರಾಗಿರುತ್ತಾರೆ ಎಂದರು.
ನರೇಂದ್ರ ಮೋದಿಜೀಯವರಿಗೆ ವಿಶ್ವದ್ಯಾಂತ 25 ದೇಶಗಳು ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಹಾಲಿ ಓಆಂ ನೇತೃತ್ವದ 23 ರಾಜ್ಯಗಳಲ್ಲಿ ಆಡಳಿತವಿದ್ದು, ಕೇಂದ್ರ ಸರ್ಕಾರದಲ್ಲಿ 25 ಹಿಂದುಳಿದ ವರ್ಗದ ಸಚಿವರಿದ್ದು 20 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಚಿವರಿದ್ದು ಸುಮಾರು 25 ವರ್ಷಗಳ ಕಾಲ ಸಂವಿಧಾನಿಕ ಅತ್ಯುನ್ನತ ಸ್ಥಾನದಲ್ಲಿ ಆಡಳಿತ ನಡೆಸಿದ ಹೆಗ್ಗಳಿಕೆ ಮೋದಿಯವರದ್ದು ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಚಿತ್ರದುರ್ಗ ಲೋಕಸಭಾ ಸಂಸದರಾದ ಗೋವಿಂದ ಎಂ ಕಾರಜೋಳ ಪ್ರಶಿಕ್ಷಣಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡುತ್ತ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಪಕ್ಷ ಬಿಜೆಪಿ, ನಮ್ಮ ಪಕ್ಷ ತಾಯಿಯಿದ್ದಾಗೆ – ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು. ಕಳೆದ ಮೂರು ಅವಧಿಯ ಶ್ರೀ ನರೇಂದ್ರ ಮೋದಿಜೀಯವರ ಸರ್ಕಾರದ ಜನಪರ ಕಲ್ಯಾಣದ ಯೋಜನೆಗಳಾದ ಜನ – ಧನ್, ಮುದ್ರಾ, ಕಿಸಾನ್ ಸನ್ಮಾನ್ ಅಯುಷ್ಮಾನ್ ಭಾರತ್, ಫಸಲ್ ಭೀಮ್ ಯೋಜನೆ, ಜಲ್ – ಜೀವನ್ ಮಿಷನ್, ಉಜ್ವಲ್ ಯೋಜನೆ ಸೇರಿದಂತೆ ನೂರಾರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡುವಂತೆ ಕರೆ ನೀಡಿ ಜೊತೆಯಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ದುರಾಡಳಿತವನ್ನು ಪ್ರಚಾರ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಎಂ ಚಂದ್ರಪ್ಪ, ವಿಧಾನಸಭಾ ಪರಿಷತ್ ಸದಸ್ಯರಾದ ಕೆ ಎಸ್ ನವೀನ್, ವಿಧಾನಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್ ರವಿ ಕುಮಾರ್ ಮಾಜಿ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ ಪ್ರಶಿಕ್ಷಣ ಅಭಿಯಾನದ ರಾಜ್ಯ ಸಂಚಾಲಕರು ವಿಧಾನಪರಿ ಷತ್ ಸದಸ್ಯರಾದ ಡಿ ಎಸ್ ಅರುಣ್ ಕುಮಾರ್, ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ ಟಿ ಕುಮಾರಸ್ವಾಮಿ ಮುಖಂಡರಾದ ಮೇಘರಾಜ್, ಏ ಮುರುಳಿ, ಟಿ ಜಿ ನರೇಂದ್ರನಾಥ್, ಲಿಂಗಮೂರ್ತಿ, ಪ್ರಧಾಕಾರ್ಯದರ್ಶಿ ಗಳಾದ ಮಾಧುರಿ ಗಿರೀಶ್, ವೆಂಕಟೇಶ್ ಯಾದವ್, ಜಿ ಹೆಚ್ ಮೋಹನ್ ಕುಮಾರ್, ಡಾ. ಪಿ ಎಂ ಮಂಜುನಾಥ, ಸೇರಿದಂತೆ 120 ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
