ಚಿತ್ರದುರ್ಗ ಜಿಲ್ಲಾ ಲಿಂಗಾಯಿತ ಶಿವಶಿಂಪಿ ಸಮಾಜದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಚಿತ್ರದುರ್ಗ ಜೂ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜಿಲ್ಲಾ ಲಿಂಗಾಯಿತ ಶಿವಶಿಂಪಿ ಸಮಾಜದವತಿಯಿಂದ, ಕುಲಗುರು ಶಿವದಾಸಿಮಯ್ಯನವರ ಜಯಂತೋತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಶಿವಶಿಂಪಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಲಿಂಗಾಯಿತ ಶಿವಶಿಂಪಿ ಸಮಾಜದ ಕಾರ್ಯದರ್ಶಿ ಮಲ್ಲಿಕಾರ್ಜನ್ ತಿಳಿಸಿದ್ದಾರೆ.

2023-24, 2024-25 ಮತ್ತು 2025-26 ಶೈಕ್ಷಣಿಕ ವರ್ಷದ ಸಾಲಿನಲ್ಲಿ ಶೇಕಡಾ 85ಕ್ಕಿಂತಲೂ ಹೆಚ್ಚು ಅಂಕಗಳಿಸಿ ಮೊದಲನೇ ಪ್ರಯತ್ನದಲ್ಲಿ ಪಾಸಾದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪರಸ್ಕಾರಕ್ಕೆ ಅರ್ಜಿಯನ್ನು ಕರೆಯಲಾಗಿದೆ.

ವಿದ್ಯಾರ್ಥಿಗಳು ಸ್ವ ವಿಳಾಸದ ಅರ್ಜಿಯೊಂದಿಗೆ ಅಂಕಪಟ್ಟಿ ಮತ್ತು ಆಧಾರ್ ಕಾರ್ಡಿನ ಜೆರಾಕ್ಸ ಪ್ರತಿ ಹಾಗೂ ಒಂದು ಪಾಸ್ ಪೋರ್ಟ ಸೈಜ್ ಭಾವಚಿತ್ರ, ದೂರವಾಣಿ ಸಂಖ್ಯೆಯೊಂದಿಗೆ ಅರ್ಜಿಯನ್ನು ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಲಿಂಗಾಯಿತ ಶಿವಶಿಂಪಿ ಸಮಾಜ, ಅನುಗ್ರಾಫಿಕ್ಸ್, ಧರ್ಮಶಾಲ ರಸ್ತೆ ಚಿತ್ರದುರ್ಗ.

ಅರ್ಜಿಯನ್ನು ದಿನಾಂಕ 10/7/2026 ರೊಳಗಾಗಿ ಸಲ್ಲಿಸತಕ್ಕದ್ದು ಹೆಚ್ಚಿನ ಮಾಹಿತಿಗಾಗಿ 9448930040 ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *