ಬಿಜೆಪಿ ಕಚೇರಿಯಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಸ್ಮರಣೆ: ರಾಷ್ಟ್ರದ ಏಕತೆಗೆ ಅವರ ತ್ಯಾಗ ಪ್ರೇರಣೆ ಎಂದ ಗೋವಿಂದ ಕಾರಜೋಳ.

ಚಿತ್ರದುರ್ಗ ಜೂ. 23

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಜನಸಂಘದ ಸಂಸ್ಥಾಪಕರಾದ ಸ್ವರ್ಗೀಯ ಶ್ರೀ ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿವಸವನ್ನು ಮಂಗಳವಾರ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಆಚರಣೆ ಮಾಡಲಾಯಿತು.

ಈ ಸಮಯದಲ್ಲಿ ಶ್ಯಾಮ ಪ್ರಸಾದ ಮುಖರ್ಜಿಯವರ ಭಾವಚಿತ್ರಕ್ಕೆ ಸಂಸದರಾದ ಗೋವಿಂದ ಕಾರಜೋಳ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿ, ದೇಶದ ಏಕತೆ, ಅಖಂಡತೆ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದ್ದ ಮಹಾನ್ ಚಿಂತಕರಾದ ಶ್ಯಾಮ ಪ್ರಸಾದ ಮುಖರ್ಜಿ ಅವರ ತ್ಯಾಗ ಮತ್ತು ಆದರ್ಶಗಳು ಸದಾ ನಮ್ಮೆಲ್ಲರಿಗೂ ಪ್ರೇರಣೆಯಾಗಿವೆ. “ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಪ್ರಧಾನ, ಎರಡು ಧ್ವಜ ಇರಲು ಸಾಧ್ಯವಿಲ್ಲ” ಎಂಬ ಅವರ ಸಂಕಲ್ಪ ರಾಷ್ಟ್ರದ ಏಕೀಕರಣಕ್ಕೆ ದಿಕ್ಸೂಚಿಯಾಯಿತು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಉಪಾಧ್ಯಕ್ಷರಾದ ಡಾ. ಸಿದ್ದಾರ್ಥ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ಜಿಲ್ಲಾ ಕಾರ್ಯದರ್ಶಿ ರಜನಿ, ಶಂಭು, ಶಿವು, ಬಸಮ್ಮ, ಬಸಣ್ಣ, ನಗರ ಕಾರ್ಯದರ್ಶಿ ಸತೀಶ್ ಆಚಾರ್, ವಿರೇಶ್, ಕಿರಣ್, ತಿಪ್ಪೇಸ್ವಾಮಿ, ಕವಿತಾ, ಶಿಲ್ಪ, ಯಶೋಧ ಸೇರಿದಂತೆ ಇತರರು ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *