ಸಾಧನೆಗೆ ಇನ್ನೊಂದು ಹೆಸರೇ ಮೋದಿ: ಚಿತ್ರದುರ್ಗದಲ್ಲಿ ಬಿಜೆಪಿ ವತಿಯಿಂದ ಸಾಧನೆ ಪುಸ್ತಕಿಕೆ ವಿತರಣೆ.

ಚಿತ್ರದುರ್ಗ ಜೂ. 24

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

12 ವರ್ಷಗಳ ಮೋದಿ ಸಾಧನೆ ಪರ್ವದ ವಿರುದ್ಧದ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಲು ಮನೆ ಮನೆ ಹಾಗೂ ಮನಮನಗಳಿಗೆ ಮೋದಿ ಸರ್ಕಾರದ ಸಾಧನೆ ತಲುಪಿಸಲು ಅಂಕಿ ಅಂಶಗಳ ಸಾಕ್ಷಿ ಸಮೇತದ ಕಿರುಹೊತ್ತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು. ಮನೆಮನೆಗೆ ಹಂಚುವ ಕಾರ್ಯದ ಸಾಂಕೇತಿಕ ಉದ್ಘಾಟನೆಯನ್ನು ಧವಳಗಿರಿಯ ಶ್ರೀ ಕ್ಷಿಪ್ರ ಪ್ರಸಾದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಂಸದರಾದ ಗೋವಿಂದ ಕಾರಜೋಳರವರು ನೆರವೇರಿಸಿದರು.

ಬಡಾವಣೆಯ ನಾಗರೀಕರಾದ ಶ್ರೀ ಹೊರಕೆ ರಂಗಪ್ಪ, ಸಿದ್ದೇಶ್, ಹಾಗೂ ಷಣ್ಮುಖಪ್ಪನವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಪುಸ್ತಕಗಳನ್ನು ನೀಡಿ ಜಾಗೃತಿ ಮೂಡಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾದ ಕುಮಾರ ಸ್ವಾಮಿ, ಉಪಾಧ್ಯಕ್ಷರಾದ ಸಿದ್ಧಾರ್ಥ್ ಗುಂಡಾರ್ಪಿ, ನಗರಾಧ್ಯಕ್ಷರಾದ ಲೋಕೇಶ, ಮಂಜುನಾಥ್ ಮೊಳಕಾಲ್ಮೂರು, ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾದ ಕುಮಾರ ಸ್ವಾಮಿ ಹಾಗೂ ಬಡಾವಣೆಯ ಗುರುಮೂರ್ತಿ, ಸಿ ಜಿ ಶ್ರೀನಿವಾಸ್, ರಾಜಣ್ಣ, ಶಶಿಕಿರಣ್, ಶ್ರೀಕಾಂತ್, ತೇಜೋಮೂರ್ತಿ, ಹಿರಿಯರು ಜೊತೆಗೆ ಸಹಕರಿಸಿದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *