ಚಿತ್ರದುರ್ಗ|ಮತದಾರರ ಪಟ್ಟಿಯಲ್ಲಿ ಅಕ್ರಮ, ಸಂವಿಧಾನಕ್ಕೆ ಅಪಮಾನ: ಬಿಜೆಪಿ ವಿರುದ್ಧ ಪರಮೇಶ್ವರ ನಾಯ್ಕ ವಾಗ್ದಾಳಿ.

ಚಿತ್ರದುರ್ಗಜೂ. 24

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಬಿಜೆಪಿ ಅಧಿಕಾರದ ದಾಹ ಅವರ ವಿಶೇಷ ಕಾನೂನು ತಂದಿದ್ದಾರೆ, ಅಂಬೇಡ್ಕರ್ ನೀಡಿರುವ ಸಂವಿಧಾನದ ಕ್ಕೆ ಅಪಮಾನ ಮಾಡುತ್ತಿದ್ದಾರೆ, ಮತದಾನ ಪ್ರಕ್ರಿಯೇಯನ್ನು ಬುಡಮೇಲ್ ಮಾಡುತ್ತಿದ್ದಾರೆ, ಪರೋಕ್ಷವಾಗಿ ಚುನಾವಣೆಯ ಷಡ್ಯತರ ಮಾಡಿದ್ದಾರೆ ಎಂದು ಮಾಜಿ ಸಚಿವರಾದ ಚಿತ್ರದುರ್ಗ ಜಿಲ್ಲಾ SIR ವೀಕ್ಷಕರಾದ ಪಿ. ಟಿ. ಪರಮೇಶ್ವರ ನಾಯ್ಕ ರವರು ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಪಕ್ಕ ಇರುವ ಲಿಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಬಿಜೆಪಿ ಪಕ್ಷದ ಕೈಗೊಂಬೆಯಾಗಿದೆ. ಅದರಂತೆ ಈಡಿ ಸಿಐಡಿ ಸೇರಿದಂತೆ ಸಂವಿಧಾನಿಕ ಸಂಸ್ಥೆಗಳು ಸಹ ಬಿಜೆಪಿಯ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ.ಬಿಜೆಪಿಯವರ ಷಡ್ಯಂತ್ರದಿಂದ ಬಲಿಷ್ಠ ರಾಷ್ಟ್ರಗಳಾದ ಮಹಾರಾಷ್ಟ್ರ ಹಾಗೂ ಕರ್ನಾಟಕವನ್ನು ತಮ್ಮ ಅದೀನಕ್ಕೆ ತೆಗೆದುಕೊಳ್ಳಬೇಕೆಂದು ಮೋದಿಯವರು ಹೊರಟಿದ್ದಾರೆ.

ಬಿಜೆಪಿಯವರು ಪರೋಕ್ಷವಾಗಿ ಅಧಿಕಾರ ಹಿಡಿಯಲು ನಡೆಸುವ ಷಡ್ಯಂತ್ರವಾಗಿದೆ. ಇತ್ತೀಚೆಗೆ ನಡೆದ ಬಿಹಾರ ಹಾಗೂ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸುಮಾರು ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟು ಚುನಾವಣೆಯಲ್ಲಿ ಗೆದ್ದಿದ್ದಾರೆ.ಹಾಲಿ ಮುಖ್ಯಮಂತ್ರಿಗಳನ್ನು ಸೋಲಿಸಿ ಅಧಿಕಾರ ಹಿಡಿಯುವ ಷಡ್ಯಂತ್ರ ನಡೆಸಿದ್ದಾರೆ.. ಮತದಾರರನ್ನು ಡಿಲೀಟ್ ಮಾಡಿ ಗೆಲ್ಲುವುದು ಯಾವ ನ್ಯಾಯ…? ಬಿಜೆಪಿಯವರಿಗೆ ಈ ದೇಶದ ರೈತರ, ದಲಿತರ, ಮಹಿಳೆಯರ ಹಿತ ಬೇಕಾಗಿಲ್ಲ.. ಅವರಿಗೆ ಅಧಿಕಾರ ಬೇಕು.. ನಾವು ಜಾಗೃತರಾಗದೆ ಹೋದರೆ ನಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷ ಎಸ್‍ಐಆರ್ ಅನ್ನು ಒಂದು ಆಂದೋಲನದ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕು… ಎಸ್‍ಐಆರ್ ಎಂಬ ಭೂತವನ್ನು ಹೋಗಲಾಡಿಸಲು ಸನ್ನದ್ಧರಾಗಬೇಕಾಗಿದೆ.ಎಸ್‍ಐಆರ್ ಪ್ರಕ್ರಿಯೆಯಲ್ಲಿ ಬಿಹಾರ ರಾಜ್ಯದಲ್ಲಿ 47 ಲಕ್ಷ, ತಮಿಳುನಾಡಿನಲ್ಲಿ 74 ಲಕ್ಷ, ಗುಜರಾತ್ ನಲ್ಲಿ 12 ಲಕ್ಷ, ಪಶ್ಚಿಮ ಬಂಗಾಳದಲ್ಲಿ 96 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಗಿಟ್ಟಿದ್ದಾರೆ.ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಬಿಎಲ್‍ಎ-2 ಗಳು ಜವಾಬ್ದಾರಿ ತೆಗೆದುಕೊಂಡು ಈ ಪ್ರಕ್ರಿಯೆಯಲ್ಲಿ ತೊಡಗಿ ಮತ ಪಟ್ಟಿಯಲ್ಲಿ ಯಾರನ್ನು ಬಿಡದೇ ಮತ ಪಟ್ಟಿಯಲ್ಲಿ ಸೇರಿಸುವ ಕೆಲಸ ಮಾಡಬೇಕಾಗಿದೆ ಬಿಎಲ್‍ಓಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡುತ್ತಾರೆ. ಅಕ್ರಮ ವಲಸಿಗರು ಎಂದು ಹೇಳುವ ಬಿಜೆಪಿಯವರು ಬಿಹಾರದಲ್ಲಿ ಕೇವಲ ಮೂರು ಜನರನ್ನು ಮಾತ್ರ ಪತ್ತೆಹಚ್ಚಿದರು.. ಅದು ಏನು ಹೇಳುತ್ತಾರಲ್ಲ ಗುಡ್ಡ ಬಗೆದು ಇಲಿ ಹಿಡಿದರಂತೆ ಅನ್ನುವ ರೀತಿ ಆಗಿದೆ.ಮುಂದಿನ ಎರಡು ವರ್ಷ ಚುನಾವಣೆ ವರ್ಷ ಆಗಿರುವುದರಿಂದ ನಿಮ್ಮ ನಾಯಕತ್ವವನ್ನು ಬೆಳೆಸಿಕೊಳ್ಳಲಿಕ್ಕೆ ಇದು ಒಂದು ಅವಕಾಶ ನೀವು ಈ ಪ್ರಕ್ರಿಯೆ ಯನ್ನು ಯಶಸ್ವಿಗೊಳಿಸಿ ಎಸ್‍ಐಆರ್ ಎಂಬ ಪೆಡಂಭೂತವನ್ನು ಎದುರಿಸಿ ಸಂವಿಧಾನ ಉಳಿಸಲು ಕೈಜೋಡಿಸೋಣ ಎಂದು ಪರಮೇಶ್ವರ ನಾಯ್ಕ ತಿಳಿಸಿದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *