ಚಿತ್ರದುರ್ಗ ಜು.05
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಶ್ರೀ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಚಿತ್ರದುರ್ಗ ಕ್ರಿಕೆಟ್ ಕ್ಲಬ್(ರಿ). ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್(ರಿ). ವತಿಯಿಂದ ಜೂ.26ರಿಂದ ಜುಲೈ 5ರವರೆಗೆ ನಡೆದ ಒನಕೆ ಓಬವ್ವ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‍ನ ಪಂದ್ಯಾವಳಿಯಲ್ಲಿ ತುಮಕೂರು ಅರೇನಷಲ್ಸ್ ತಂಡ ಪ್ರಥಮ ಸ್ಥಾನ ಗಳಿಸಿದರೆ ದ್ವೀತಿಯ ಸ್ಥಾನವನ್ನು ಸಾಗರದ ನೆಕ್ಸ್‍ಜೆನ್ ತಂಡ ಗಳಿಸಿದೆ. ಪ್ರಥಮ ತಂಡಕ್ಕೆ ಒಂದು ಲಕ್ಷ, ದ್ವಿತೀಯ ಸ್ಥಾನಕ್ಕೆ 50,000 ರೂಗಳನ್ನು ನೀಡಲಾಯಿತು.

ಪಂದ್ಯದ ಪುರುಷ ತ್ತೋಮ ಪ್ರಶಸ್ತ್ರಿಯನ್ನು ಪವನಗೌಡ, ಉತ್ತಮ ಆಟಗಾರ ಪ್ರಶಸ್ತ್ರಿಯನ್ನು ಅಬ್ದುಲ್ ಹಸನ ಖಾಲಿದ್ ಉತ್ತಮ ಬೌಲರ್‍ರಾಗಿ ರಾಜೇಂದ್ರ ಹಾಗೂ ಆಲ್ ರೌಂಡರ್ ಆಟಗಾರರಾಗಿ ಪ್ರತೀಮ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ರಾದ ಶ್ರೀ ಬಸವಕುಮಾರ್ ಶ್ರೀಗಳು ಮಾನವನಿಗೆ ಕ್ರೀಡೆ ಎನ್ನುವುದು ಬಹಳ ಮುಖ್ಯವಾಗಿದೆ, ಉತ್ತಮವಾದ ಆರೋಗ್ಯವನ್ನು ಪಡೆಯಲು ಕ್ರೀಡೆ, ವ್ಯಾಯಾಮ ಮುಖ್ಯವಾಗಿದೆ. ಕ್ರೀಡೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ, ಸೋತವರು ಮುಂದಿನ ಪಂದ್ಯಾವಳಿಯಲ್ಲಿ ಗೆಲುವನ್ನು ಸಾಧಿಸಲು ತಯಾರಾಗಬೇಕಿದೆ ಅದೇ ರೀತಿ ಗೆದ್ದವರು ಸಹಾ ಬೀಗದೇ ಮತ್ತಷ್ಟು ಪಂದ್ಯಗಳನ್ನು ಗೆಲಲ್ಲು ಅಭ್ಯಾಸವನ್ನು ಮಾಡುವುದರ ನಿರಂತರಾಗಬೇಕಿದೆ. ಶ್ರೀಮಠವೂ ಸಹಾ ಕ್ರೀಡೆಗೆ ಪ್ರೋತ್ಸಾಹವನ್ನು ನೀಡುತ್ತದೆ. ನಮ್ಮಲ್ಲಿನ ಕ್ರೀಡಾ ಪಟುಗಳು ಚನ್ನಾಗಿ ಅಭ್ಯಾಸವನ್ನು ಮಾಡಿ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಆಟವನ್ನು ಆಡುವುದರ ಮೂಲಕ ಚಿತ್ರದುರ್ಗಕ್ಕೆ ಹೆಸರನ್ನು ತರಬೇಕೆಂದು ತಿಳಿಸಿದರು.

ಕ್ರಿಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಹೊಂದಬಹುದಾಗಿದೆ, ಚಿತ್ರದುರ್ಗ ಕ್ರಿಕೆಟ್ ಕ್ಲಬ್(ರಿ). ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್(ರಿ).ವತಿಯಿಂದ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಈ ರೀತಿಯಾದ ಪಂದ್ಯಾವಳಿಗಳನ್ನು ನಡೆಸುತ್ತಾ ಬರಲಾಗಿದೆ, ಕ್ರೀಡೆಯಲ್ಲಿ ಭಾಗವಹಿಸಿ ಆಡುವುದರ ಮೂಲಕ ದೇಹ ಹಾಗೂ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಚಿತ್ರದುರ್ಗ ಕ್ರಿಕೆಟ್ ಕ್ಲಬ್‍ನ ಕಾರ್ಯದರ್ಶಿ ಆಶೋಕ್, ಚಿತ್ರದುರ್ಗ ಕ್ರಿಕೆಟ್ ಕ್ಲಬ್‍ನ ಅಧ್ಯಕ್ಷರಾದ ರಮೇಶ್.ಟಿ, ಹಿರಿಯ ಆಟಗಾರರಾದ ಭಾಸ್ಕರ್, ರವಿಕುಮಾರ್, ಖಾನ್, ತಿಪ್ಪೇರುದ್ರಸ್ವಾಮಿ, ಅರ್ಜುನ, ಕಮಲ್ ಯಾದವ್, ಮಲ್ಲಿಕಾರ್ಜನ್ ಗುರುಮೂರ್ತಿ, ಪೈಲಟ್ ನಾಗರಾಜ್, ವಿಜಯಕುಮಾರ್ ಮ,ಂಜುನಾಥ್ ಗುಪ್ತ, ಸೇರಿದಂತೆ ಇತರರು ಭಾಗವಹಿಸಿದ್ದರು.
ಈ ಪಂದ್ಯಾವಳಿಯಲ್ಲಿ ಒಳ್ಳಾರಿ, ಚಿತ್ರದುರ್ಗ, ತುಮಕೂರು, ಸಾಗರ, ಹೊಸದುರ್ಗ, ಬೆಂಗಳೂರು ಕಡೆಗಳಿಂದ ತಂಡಗಳು ಭಾಗವಹಿಸಿದ್ದವು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: