ಚಿತ್ರದುರ್ಗ| ಛಲವಾದಿ ಗುರುಪೀಠಕ್ಕೆ ಕಾರು ದಾನ: ಸಮಾಜ ಸಂಘಟನೆಗೆ ಭಕ್ತನ ವಿಶೇಷ ಕೊಡುಗೆ.

ಚಿತ್ರದುರ್ಗ ಜು. 22

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಛಲವಾದಿ ಗುರುಪೀಠಕ್ಕೆ ಭಕ್ತರೊಬ್ಬರು ತಮ್ಮಇನೋವಾ ಕಾರನ್ನು ಗುರುಗಳಿಗೆ ದಾನವಾಗಿ ನೀಡಿದ್ದಾರೆ. ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವೃತ್ತದಲ್ಲಿರುವ ಒನಕೆ ಓಬವ್ವ ವೃತ್ತದ ಪ್ರತಿಮೆಯ ಬಳಿ ಇಂದು ನಡೆದ ಸರಳ ಸಮಾರಂಭದಲ್ಲಿ ಶ್ರೀಮಠದ ಭಕ್ತರಾದ ಅರವಿಂದ ಈಶ್ವರ ಪಾಟೀಲ್ ರವರ ಬೆಂಗಳೂರಿನಲ್ಲಿ ಐಟ ಕಂಪನಿ ಹಾಗೂ ಬೆಳಗಾವಿಯಲ್ಲಿ ಸಣ್ಣದಾದ ಕೈಗಾರಿಕೆಯನ್ನು ನಡೆಸುತ್ತಿದ್ದು ನಮ್ಮ ಸಮುದಾಯದ ಗುರುಗಳು ಸಮಾಜವನ್ನು ಸಂಘಟಿಸಲು ಬಸ್‍ಗಳಲ್ಲಿ ಪ್ರಯಾಣ ಮಾಡುವುದು ಬೇಡ ಎಂದು ಛಲವಾದಿ ಗುರುಪೀಠಕ್ಕೆ ಕಾರನ್ನು ಕೂಡುಗೆಯಾಗಿ ನೀಡಿದ್ದಾರೆ.

ನಮ್ಮ ಸಮುದಾಯದವರಿಗೆ ಸೇರಿದಂತೆ ಬೇರೆ ಸಮುದಾಯದವರಿಗೂ ಸಹಾ ಉದ್ಯೋಗವನ್ನು ನೀಡುವ ಹಂಬಲವನ್ನು ಹೊಂದಿದ್ದು ಈಗ ಇರುವ ಐಟಿ ಕಂಪನಿಯ 132 ಉದ್ಯೋಗಿಗಳನ್ನು 1000 ಜನಕ್ಕೆ ಏರಿಸಬೇಕೆಂಬ ಆಭಿಲಾಷೆಯನ್ನು ಹೊಂದಲಾಗಿದೆ, ನಮ್ಮವರು ಸರ್ಕಾರಿ ಉದ್ಯೋಗವನ್ನು ಕಾಯದೇ ಸ್ವಯಂ ಆಗಿ ಕೆಲಸವನ್ನು ಮಾಡುತ್ತಾ ಬೇರೆಯವರಿಗೆ ಉದ್ಯೋಗವನ್ನು ನೀಡುವಂತರಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಛಲವಾದಿ ಗುರುಪೀಠ ಶ್ರೀ ಬಸವನಾಗ್ತಿ ದೇವ ಶ್ರೀಗಳು, ನ್ಯಾಯಾವಾದಿ ಪ್ರತಾಪ್ ಜ್ಯೋಗಿ, ನವೀನ್, ಪ್ರಸನ್ನ, ಪ್ರಸಾದ್, ಗೋವಿಂದರಾಜು, ವಿಜಯ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *