ಸಂಸತ್ ಭವನಕ್ಕೆ ನುಗ್ಗುವ ಷಡ್ಯಂತ್ರ: ದೆಹಲಿ ಪ್ರತಿಭಟನೆ ಬಗ್ಗೆ ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ ಗಂಭೀರ ಆರೋಪ.

ಚಿತ್ರದುರ್ಗ ಜು. 22

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಧಮೇರ್‍ಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುವುದಕ್ಕಿಂತ ದೆಹಲಿಯ ಸಂಸತ್ ಭವನಕ್ಕೆ ನುಗ್ಗುವ ಷಡ್ಯಂತ್ರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಪ್ರತಿಭಟನೆಯ ಹಿಂದೆ ಇತ್ತು ಎಂದು ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಪ್ರತಿಭಟನೆಯಲ್ಲಿ ತುಕ್ಡೆ ಗ್ಯಾಂಗ್‍ಗಳು ಪಾಕಿಸ್ತಾನ್ ಜಿಂದಾಬಾದ್, ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಲಿ ಎಂದು ಘೋಷಣೆ ಕೂಗುವ ಅಗತ್ಯವೇನು ಎಂದು ಪ್ರಶ್ನಿಸಿದರು. ನಿನ್ನೆಯ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ವಿರೋಧ ಪಕ್ಷದ, ಎಡಪಂಥೀಯ ಅನೇಕ ಸಂಘಟನೆಗಳಿಗೆ ಸೇರಿದವರು ಹಾಗೂ ಸಮಾಜವಾದಿ ಸೇರಿದಂತೆ ಬೇರೆ ಬೇರೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ವಿರೋಧವಿಲ್ಲ. ಆದರೆ ಪೆÇಲೀಸರ ಮೇಲೆ ಹಲ್ಲೆ ಮಾಡುವ, ಹಿಂಸಾಚಾರ ನಡೆಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.

ವಿದ್ಯಾರ್ಥಿಗಳು ನ್ಯಾಯಯುತವಾಗಿ ಪ್ರತಿಭಟನೆ ಮಾಡಿದರೆ ನಾವು ವಿರೋಧ ಮಾಡುವುದಿಲ್ಲ. ಆದರೆ ದೆಹಲಿ ಪ್ರತಿಭಟನೆ ವೇಳೆ ಸಂಸತ್ತಿಗೆ ಎಸೆಯಲು ಕಲ್ಲುಗಳನ್ನು ತಂದಿದ್ದರು. ಇವು ಎಲ್ಲಿಂದ ಬಂದವು. 150 ಕ್ಕೂ ಹೆಚ್ಚು ಪೆÇಲೀಸರಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಅವರನ್ನು ಅಟ್ಟಾಡಿಸಿಕೊಂಡು ಪ್ರತಿಭಟನಾಕಾರರು ಹೊಡೆದಿದ್ದಾರೆ. ಈ ರೀತಿ ವಿದ್ಯಾರ್ಥಿಗಳು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಎಡಪಂಥೀಯ ಸಂಘಟನೆಗಳು, ಜೆಎನ್‍ಯುದಲ್ಲಿ ಸಕ್ರಿಯವಾಗಿರುವ ಎಡಪಂಥೀಯ ಸಂಘಟನೆಗಳು ಇಂತಹ ಹಿಂಸಾಚಾರದ ಪ್ರತಿಭಟನೆಯ ಹಿಂದಿವೆ ಎಂದು ಆಕ್ಷೇಪಿಸಿದರು.

ಪ್ರತಿಭಟನಾನಿರತ ಸಿಜೆಪಿ ಮುಖಂಡರನ್ನು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಕರೆದು ಮಾತನಾಡಿದ್ದಾರೆ. ಆದರೂ ಹೋರಾಟ ನಿಲ್ಲಿಸಿಲ್ಲ. ಇವರ ಉದ್ದೇಶ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಅಲ್ಲ. ಸಂಸತ್ತಿಗೆ ನುಗ್ಗುವುದೇ ಆಗಿತ್ತು ಎಂದು ಆರೋಪಿಸಿದರು. ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದು ತಪ್ಪು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಎಂಟು ಜನ ಕಿಂಗ್ ಪಿನ್ ಬಂಧವಾಗಿದೆ. ಮರು ಪರೀಕ್ಷೆಯನ್ನು ಸುಸೂತ್ರವಾಗಿ ಕಟ್ಟುನಿಟ್ಟಿನಲ್ಲಿ ನಡೆಸಲಾಗಿದೆ. ಮರು ಪರೀಕ್ಷೆಗೆ ಈ ಹಿಂದೆ ಎಂದೂ ಕೈಗೊಳ್ಳದ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಇವರು ಈಗ ಪ್ರತಿಭಟನೆ ನಡೆಸುವ ಉದ್ದೇಶವೇನು ಎಂದು ಕೇಳಿದರು.

ನಟ ಪ್ರಕಾಶ್ ರಾಜ್ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇವರೆಲ್ಲ ಮೋದಿಯವರಿಗೆ, ಭಾರತ ಮಾತೆಗೆ ಜೈ ಅಂದವರಲ್ಲ. ಪೆÇಲೀಸರು ಸರಿಯಾಗಿ ಕೆಲಸ ಮಾಡಿದ್ದರಿಂದ ಸಂಸತ್ತಿನ ಮೇಲಿನ ದಾಳಿ ನಡೆದಿಲ್ಲ ಮೋದಿ ಹಾಗೂ ಸಚಿವ ಧಮೇರ್‍ಂದ್ರ ಪ್ರಧಾನ್ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಕೇವಲ ಎನ್‍ಡಿಎ ಕಾಲದಲ್ಲಿ ಮಾತ್ರವೇ ಸೋರಿಕೆ ಆಗಿಲ್ಲ. ಯುಪಿಎ ಕಾಲದಲ್ಲೂ ಸೋರಿಕೆ ಆದಾಗ ಪ್ರತಿಭಟನೆ ಆಗಿಲ್ಲ. ಕಾಂಗ್ರೆಸ್ ಇದ್ದಾಗ ಸೋರಿಕೆಯಾದ ದೊಡ್ಡ ಪಟ್ಟಿಯೇ ಇದೆ. ಆಗ ಈ ತುಕ್ಡೆ ಗ್ಯಾಂಗ್ ಮತ್ತು ಎಡಪಂಥೀಯ ಸಂಘಟನೆಗಳು ಎಲ್ಲಿ ಹೋಗಿದ್ದವು. ಈಗ ಬೇಕಾದರೆ ಪ್ರತಿಭಟನೆ ಮಾಡಲಿ. ಆದರೆ ಕರ್ತವ್ಯ ನಿರತ ಪೆÇಲೀಸರ ಮೇಲೆ ಹಲ್ಲೆ ಮಾಡೋದು, ಸಂಸತ್ತಿಗೆ ನುಗ್ಗಲು ಹೋಗುವುದು ಸರಿ ಅಲ್ಲ ಎಂದು ಹೇಳಿದರು.

ತನಿಖೆ ಆಗಲಿ: ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಮಗ್ರ ತನಿಖೆ ಆಗಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿಯಬೇಕು ದೇಶದಲ್ಲಿ ಕಾಂಗ್ರೆಸ್ ಕಾಲಕ್ಕಿಂತ ವೈದ್ಯಕೀಯ ಸೀಟುಗಳು ಗಣನೀಯವಾಗಿ ಹೆಚ್ಚಳವಾಗಿವೆ. ಆಗ ತುಕ್ಡೆ ಗ್ಯಾಂಗ್‍ಗಳು ಸ್ವಾಗತ ಮಾಡಲಿಲ್ಲ. ವೈದ್ಯಕೀಯ ಕಾಲೇಜುಗಳೂ ಹೆಚ್ಚಳವಾಗಿವೆ. ವಿದ್ಯಾರ್ಥಿಗಳಿಗೆ ಕೆಲಸ ನೀಡುವ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಏನೇ ಮಾಡಿದರೂ ಯುಪಿಎ ಮತ್ತು ಮಿತ್ರ ಪಕ್ಷಗಳು, ಇಂಡಿ ಒಕ್ಕೂಟ, ಕಮ್ಯೂನಿಷ್ಟ ಪಕ್ಷಗಳು ವಿರೋಧ ಮಾಡುತ್ತಲೇ ಬಂದಿವೆ ಎಂದು ವಿವರಿಸಿದರು.

ನಿನ್ನೆಯ ಪ್ರತಿಭಟನೆ ವಿದ್ಯಾರ್ಥಿಗಳು ಮಾಡಿಲ್ಲ. ಬದಲಿಗೆ ಎಡಪಕ್ಷಗಳು, ಸಂಘಟನೆಗಳು ಮಾಡಿವೆ. ವಿದ್ಯಾರ್ಥಿಗಳ ಹೆಸರಲ್ಲಿ ಬೇರೆ ಬೇರೆ ಸಂಘಟನೆಗಳು ಬಂದು ಮೋದಿ ಸರ್ಕಾರಕ್ಕೆ ದಿಕ್ಕಾರ ಕೂಗಿವೆ. ದೇಶಕ್ಕೆ ಅವಹೇಳನ, ಇದು ದೇಶ ವಿರೋಧಿಗಳ ಹೋರಾಟ ಆಗಿದೆ. ಇದರ ಬಗ್ಗೆ ಕೇಂದ್ರ ಗಂಭೀರ ತನಿಖೆ ಮಾಡಬೇಕು ಎಂದು ತಿಳಿಸಿದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *