ಚಿತ್ರದುರ್ಗ ಜು. 25
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಗೃಹ ಮಂಡಳಿಯ ಮಾಜಿ ಅಧ್ಯಕ್ಷರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿಯವರ ಹುಟ್ಟು ಹಬ್ಬವನ್ನು ಶನಿವಾರ ಅವರ ನಿವಾಸದಲ್ಲಿ ಅಸಂಖ್ಯಾತ ಅಭೀಮಾನಿಗಳ ಸಮ್ಮುಖ ದಲ್ಲಿ ಆಚರಿಸಲಾಯಿತು.
ಚಿತ್ರದುರ್ಗ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ಕೈಯಲ್ಲಿ ಶಾಲು, ಹೂವಿನ ಹಾರ, ಬೊಕ್ಕೆ, ಕೇಕ್ನ್ನು ಹಿಡಿದುಕೊಂಡು ಬಂದು ತಮ್ಮ ನಾಯಕರಿಗೆ ಹಾಕುವುದರ ಮೂಲಕ ಕೇಕ್ನ್ನು ಕಟ್ ಮಾಡಿಸುವುದರ ಮೂಲಕ ಸಂತೋಷವನ್ನು ಪಟ್ಟಿದ್ದಾರೆ. ಇಂದು ಬೆಳ್ಳಿಗ್ಗೆಯಿಂದಲೇ ಅವರ ನಿವಾಸಕ್ಕೆ ಜನ ಆಗಮಿಸುವುದರ ಮೂಲಕ ತಿಪ್ಪಾರೆಡ್ಡಿಯವರ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದರು. ಸಂಸದ ಗೋವಿಂದ ಕಾರಜೋಳ ರವರು ಸಹಾ ತಿಪ್ಪಾರೆಡ್ಡಿಯವರ ಮನೆಗೆ ಭೇಟಿಯನ್ನು ನೀಡಿ ಅವರಿಗೆ ಶಾಲು, ಹಾರವನ್ನು ಹಾಕುವುದರ ಮೂಲಕ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ,ಜಿಲ್ಲಾಧ್ಯಕ್ಷರಾದ ಕೆ.ಟಿ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್ ಡಾ.ಸಿದ್ದಾರ್ಥ ಗುಡಾರ್ಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಾಳೆಕಾಯಿ ರಾಮದಾಸ್, ಮಾಜಿ ತಹಶೀಲ್ದಾರರಾದ ರಘುಮೂರ್ತಿ, ಗ್ರಾಮಾಂತರ ಅಧ್ಯಕ್ಷರಾದ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಗಳಾದ ರೇಖಾ, ಜಿಲ್ಲಾ ವಾಕ್ತಾರರಾದ ನಾಗರಾಜ್ ಬೇದ್ರೆ, ಜಿಲ್ಲಾ ಸಹವಕ್ತಾರರಾದ ನವೀನ್ ಚಾಲುಕ್ಯ, ನಗರ ಪ್ರಧಾನ ಕಾರ್ಯದರ್ಶಿಗಳಾದ ಲೀಲಾವತಿ ಬಸವೇಶ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್, ದಿಶಾ ಸಮಿತಿ ಸದಸ್ಯ ಭರತ್, ಯುವ ಮೋರ್ಚಾ ನಗರಧ್ಯಕ್ಷರಾದ ಡಾ.ವಸಂತ್ ಆಚಾರ್, ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಸಿದ್ದೇಶ ಯಾದವ್ ಸೇರಿದಂತೆ ಅಸಂಖ್ಯಾತ ಅಭಿಮಾನಿಗಳು ಉಪಸ್ಥಿತರಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j