ಚಿತ್ರದುರ್ಗ ಜು. 25
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್.
ಚಿತ್ರದುರ್ಗ ಜಿಲ್ಲಾ ಮತ್ತು ತಾಲ್ಲೂಕು ಸವಿತಾ ಸಮಾಜದ ಜಂಟಿ ಆಶ್ರಯದಲ್ಲಿ ನಗರದ ಶ್ರೀ ಬರಗೆರಮ್ಮ ದೇವಿಗೆ ಶನಿವಾರ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ, ಸಮಾಜದ ಶ್ರಮಿಕ ಬಂಧುಗಳಿಗೆ ಕಾರ್ಮಿಕ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಮಿಕ ಕಾರ್ಡ್ಗಳನ್ನು ವಿತರಿಸಿ ಮಾತನಾಡಿದ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಎನ್.ಡಿ. ಕುಮಾರ್ ಕಾರ್ಮಿಕ ಕಾರ್ಡ್ನ ಮಹತ್ವ ಹಾಗೂ ಅದರಿಂದ ಲಭ್ಯವಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಅಪಘಾತದಿಂದ ಅಂಗವಿಕಲತೆ: ಕೆಲಸದ ವೇಳೆಯಲ್ಲಿ ಅಥವಾ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆಯಾದರೆ ಆರ್ಥಿಕ ಸಹಾಯಧನ.ಅಸಹಜ/ಅಪಘಾತ ಮರಣ: ನೋಂದಾಯಿತ ಕಾರ್ಮಿಕರು ಅಪಘಾತದಲ್ಲಿ ಅಥವಾ ಅಸಹಜವಾಗಿ ಮರಣ ಹೊಂದಿದರೆ ಅವರ ವಾರಸುದಾರರಿಗೆ/ಕುಟುಂಬಕ್ಕೆ ಪರಿಹಾರ ಧನ ಮತ್ತು ಅಂತಿಮ ಸಂಸ್ಕಾರಕ್ಕಾಗಿ ಧನಸಹಾಯ ದೂರೆಯುತ್ತದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷರಾದ ಪಲ್ಲವಿ ಪ್ರಸನ್ನ “ನಮ್ಮ ಸವಿತಾ ಸಮಾಜವು ಸಂಘಟಿತವಾಗಿ ಬೆಳೆಯಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಸಮಾಜದ ಪ್ರತಿಯೊಬ್ಬ ಬಂಧುವಿನ ಸುಖ-ದುಃಖಗಳಲ್ಲಿ ಭಾಗಿಯಾಗುವುದು ಮತ್ತು ಅವರ ಹಕ್ಕುಗಳನ್ನು ತಲುಪಿಸುವುದು ನಮ್ಮ ಒಕ್ಕೂಟದ ಮುಖ್ಯ ಉದ್ದೇಶ. ಸಮಾಜದ ಒಗ್ಗಟ್ಟು ಮತ್ತು ಕಲ್ಯಾಣಕ್ಕಾಗಿ ನಮ್ಮ ಸಂಘಟನೆ ಸದಾ ಶ್ರಮಿಸಲಿದೆ,” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಡಿನಲ್ಲಿ ಸಮೃದ್ಧವಾಗಿ ಮಳೆ-ಬೆಳೆಯಾಗಿ ಸುಭಿಕ್ಷೆ ನೆಲೆಸಲಿ ಎಂದು ಪ್ರಾರ್ಥಿಸಿ ಶ್ರೀ ಬರಗೆರಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಆರ್ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಆರ್ ನಾಗರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಾಮಣ್ಣ ಜಿ ಎನ್ ಸಂತೋಷ್, ತಾಲೂಕು ಕಾರ್ಯಾಧ್ಯಕ್ಷ ರಂಜಿತ್, ತಾಲೂಕು ಪ್ರತಿನಿಧಿ ಅರುಣ್ ರಾಜು ತಾಲೂಕು ಸಂಘಟನಾ ಕಾರ್ಯದರ್ಶಿ ಕುಮಾರ್ ತಾಲೂಕು ಕಾರ್ಯದರ್ಶಿ ಅನಿಲ್ ಜಿಲ್ಲಾ ಮತ್ತು ತಾಲ್ಲೂಕು ಸವಿತಾ ಸಮಾಜದ ಆಡಳಿತ ಮಂಡಳಿಯ ಸದಸ್ಯರು, ಮುಖಂಡರು ಹಾಗೂ ಸಮಾಜದ ಬಂಧುಗಳು ಭಾಗವಹಿಸಿದ್ದರು.