ಚಳ್ಳಕೆರೆ: “ಮಕ್ಕಳಿಗೆ ಮೊಟ್ಟೆ ಕೊಡಲು ಹಣವಿಲ್ಲ, ಸೋನಿಯಾ-ರಾಹುಲ್‌ಗೆ ಕೊಡಲು ಹಣವಿದೆ” – ರಾಜ್ಯ ಸರ್ಕಾರದ ವಿರುದ್ಧ ಬಿ. ಶ್ರೀರಾಮುಲು ಕಿಡಿ .

ಚಿತ್ರದುರ್ಗ ಜು. 27

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಸೋನಿಯಾ, ರಾಹುಲ್, ಖರ್ಗೆಗೆ ಕೊಡಲು ಹಣವಿದೆ ಮಕ್ಕಳಿಗೆ ಮೊಟ್ಟೆ, ಬುಕ್, ಬ್ಯಾಗ್, ಸಾಕ್ಸ್ ಕೊಡಲು ಹಣ ಇಲ್ಲ ಪ್ರವಾಸಿ ಮಂದಿರಗಳ ವಿದ್ಯುತ್ ಬಿಲ್ ಕಟ್ಟಲು ಹಣ ಇಲ್ಲ ಕೆಪಿಎಸ್ಸಿ, ಅಷ್ಟೇ ಅಲ್ಲ, ಎಸ್ಸಿ, ಎಸ್ಟಿ ನಿಗಮಗಳಲ್ಲಿ ಹಗರಣ ಮಾಡಿದ್ದಾರೆ ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿ ಕುಳಿತಿದ್ದಾರೆಂದು ಮಾಜಿ ಸಚಿವ ಬಿ ಶ್ರೀರಾಮುಲು ಕಿಡಿ ಕಾರಿದ್ದಾರೆ.

ಚಳ್ಳಕೆರೆಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ  ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀರಾಮುಲು ಮಾಧ್ಯಮದವರೊಂದಿಗೆ ಮಾತನಾಡಿ ರಾಜಕೀಯ ಕಲುಷಿತ ಆಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ 2028ಕ್ಕೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಶುದ್ಧವಿತ್ತಾ? ಡಿಕೆಶಿ ಸಿಎಂ ಆದ ಬಳಿಕ ರಾಜಕೀಯ ಕಲುಷಿತ ಆಯಿತಾ? ಡಿಕೆ ಶಿವಕುಮಾರ್ ಆಡಳಿತ ಸರಿಯಲ್ಲ ಎಂದು ಹೇಳಿದಂತಾಗುತ್ತದೆ ಬರಗಾಲ ವೇಳೆ ಯಾವನಾದ್ರೂ ಜಿಲ್ಲೆಯಲ್ಲಿದ್ದಾರೆಯೇ? ಚಳ್ಳಕೆರೆ, ಮೊಳಕಾಲ್ಮೂರಲ್ಲಿ ದೇವರ ಎತ್ತುಗಳಿವೆ ನೀರು ಮೇವಿಲ್ಲದೆ ದೇವರ ಎತ್ತುಗಳು ಸಾಯುತ್ತಿವೆ ಬರಗಾಲದಿಂದ ಜನ ಗುಳೆ ಹೋಗುತ್ತಿದ್ದಾರೆ ಸಿಎಂ ಡಿಕೆಶಿ ದೆಹಲಿ, ಬೆಂಗಳೂರು ಓಡಾಡ್ತಿದ್ದಾರೆ ಸಿಟಿ ರವಿ ವಿರುದ್ಧದ ಕೇಸ್ ಬಗ್ಗೆ ಮಾಹಿತಿ ಇಲ್ಲ ವಿಚಾರ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು. 

ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವಲ್ಲಿ ವ್ಯತ್ಯಯ ವಿಚಾರ ಸೋನಿಯಾ, ರಾಹುಲ್, ಖರ್ಗೆಗೆ ಕೊಡಲು ಹಣವಿದೆ ಮಕ್ಕಳಿಗೆ ಮೊಟ್ಟೆ, ಬುಕ್, ಬ್ಯಾಗ್, ಸಾಕ್ಸ್ ಕೊಡಲು ಹಣ ಇಲ್ಲ ಪ್ರವಾಸಿ ಮಂದಿರಗಳ ವಿದ್ಯುತ್ ಬಿಲ್ ಕಟ್ಟಲು ಹಣ ಇಲ್ಲ ಕೆಪಿಎಸ್ಸಿ, ಅಷ್ಟೇ ಅಲ್ಲ, ಎಸ್ಸಿ, ಎಸ್ಟಿ ನಿಗಮಗಳಲ್ಲಿ ಹಗರಣ ಮಾಡಿದ್ದಾರೆ ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿ ಕುಳಿತಿದ್ದಾರೆಂದು ಕಿಡಿ ಕಾರಿದ ಶ್ರೀರಾಮುಲು  ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಇಳಿಕೆ ಬಿಜೆಪಿ ಕಾಲದಲ್ಲಿ ಎಸ್ಟಿಗೆ ಶೇ.7 ಮೀಸಲಾತಿ ನೀಡದ್ದೆವು ರಾಜ್ಯ ಕಾಂಗ್ರೆಸ್ ಸರ್ಕಾರ ಶೇ.3ಕ್ಕೆ ಇಳಿಸಿದೆ ಎಂದು ಕಿಡಿ ಕಾರಿದರು. 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಕೆ ಟಿ ಕುಮಾರಸ್ವಾಮಿ ಸೇರಿ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *