ಮಾಹಿತಿಗಿಂತ ಮೌಲ್ಯಯುತವಾದುದು ಗುರುವಿನ ಜ್ಞಾನ: ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಸಂದೇಶ.

ಚಿತ್ರದುರ್ಗ ಜು. 30

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಲೌಕಿಕ ಜ್ಞಾನ ಮತ್ತು ವಿಜ್ಞಾನ ಎಷ್ಟೇ ಬೆಳೆದಿದ್ದರೂ, ತಂತ್ರಜ್ಞಾನ ಹಾಗೂ ಆಧುನಿಕ ಮಾಧ್ಯಮಗಳ ಮೂಲಕ ಅಪಾರ ಮಾಹಿತಿ ಲಭ್ಯವಿದ್ದರೂ, ಆತ್ಮಜ್ಞಾನವನ್ನು ಪಡೆಯಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಸದ್ಗುರು ಶ್ರೀ ಶಿವಲಿಂಗಾನಂದ ಮಹಾ ಸ್ವಾಮಿಗಳವರ ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ಬುಧವಾರ ಸಂಜೆ ಆಶ್ರಮದ ಸಭಾಂಗಣದಲ್ಲಿ ನಡೆದ ಗುರು ಪೂರ್ಣಿಮಾದ ಸಾನೀಧ್ಯವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯನ ಜೀವನಕ್ಕೆ ಜ್ಞಾನ ದಾರಿದೀಪವಾಗಿದ್ದು, ಗುರುವೇ ಜ್ಞಾನದ ನಿಜವಾದ ಬೆಳಕು, . ಲೌಕಿಕ ಜ್ಞಾನ ಮತ್ತು ವಿಜ್ಞಾನ ಎಷ್ಟೇ ಬೆಳೆದಿದ್ದರೂ, ತಂತ್ರಜ್ಞಾನ ಹಾಗೂ ಆಧುನಿಕ ಮಾಧ್ಯಮಗಳ ಮೂಲಕ ಅಪಾರ ಮಾಹಿತಿ ಲಭ್ಯವಿದ್ದರೂ, ಆತ್ಮಜ್ಞಾನವನ್ನು ಪಡೆಯಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಗುರುವು ತೋರಿಸಿಕೊಟ್ಟ ಮಾರ್ಗದಿಂದ ಮಾತ್ರ ಮನುಷ್ಯನಿಗೆ ಮನಸ್ಸಿನ ದುಃಖ ನಿವಾರಣೆಯಾಗಿ ನಿಜವಾದ ಶಾಂತಿ ಲಭಿಸುತ್ತದೆ ಎಂದು ಹೇಳಿದರು.

ಈ ಬರಡಾದ ನಾಡಿನಲ್ಲಿ ಕಬೀರಾನಂದ ಸ್ವಾಮಿಗಳು ಹಾಗೂ ಪರಂಪರೆಯ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಜಾತಿ- ಮತಗಳ ಭೇದವೆಣಿಸದೆ ಸರ್ವರಿಗೂ ಸಮಾನವಾಗಿ ಜ್ಞಾನೋಪದೇಶ ನೀಡಿದ್ದಾರೆ. ಶ್ರೀ ವೇದವ್ಯಾಸರು ಧಾರೆ ಎರೆದ ಜ್ಞಾನ ಪರಂಪರೆಯನ್ನು ವೃದ್ಧಾಶ್ರಮಗಳಿಗೆ ದಾನ ನೀಡುವ ಶ್ರೀಸಾಮಾನ್ಯರು ಮತ್ತು ಸಾಧಕರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಪ್ರಶಂಸಿ ತಂತ್ರಜ್ಞಾನ ಎಷ್ಟೇ ಮುನ್ನಡೆದರೂ ಮಾನವನ ಆಂತರಿಕ ನೆಮ್ಮದಿಗೆ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಗುರುವಿನ ಅನುಗ್ರಹ ಮತ್ತು ಜ್ಞಾನವೇ ಏಕೈಕ ಮಾರ್ಗ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಶ್ರೀಗಳು ನೀಡಿದರು.

ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿಗಳಾದ ಹುರಳಿ ಬಸವರಾಜು ಮಾತನಾಡಿ, ಜ್ಞಾನದ ಹಾದಿ ತೋರುವ ಗುರುಗಳು, ಶಿಕ್ಷಕರು ಮತ್ತು ಮಾರ್ಗದರ್ಶಕರನ್ನು ಗೌರವಿಸುವ ಪವಿತ್ರ ಪರ್ವದಿನ ಗುರು ಪೂರ್ಣಿಮಾ ಆಷಾಢ ಮಾಸದ ಪೂರ್ಣಿಮೆಯಂದು ಆಚರಿಸಲಾಗುವ ಈ ಶ್ರೇಷ್ಠ ಹಬ್ಬವನ್ನು ಈ ಆಚರಿಸಲಾಗುತ್ತಿದೆ. ವೇದಗಳನ್ನು ವಿಂಗಡಿಸಿ, ಮಹಾಭಾರತವನ್ನು ರಚಿಸಿದ ಮಹರ್ಷಿ ವೇದವ್ಯಾಸರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ಇಂದಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಮಕ್ಕಳಿಗೆ ಬೇಕಾದ ಅಪಾರ ಮಾಹಿತಿ ಬೆರಳ ತುದಿಯಲ್ಲೇ ಸಿಗುತ್ತದೆ. ಆದರೆ, ಕೇವಲ ಮಾಹಿತಿಯನ್ನು ಪಡೆಯುವುದು ನಿಜವಾದ ಶಿಕ್ಷಣವಲ್ಲ. ವಿನಯ, ಶಿಸ್ತು, ಕೃತಜ್ಞತೆ ಮತ್ತು ಕರುಣೆಯನ್ನು ಮೈಗೂಡಿಸಿಕೊಳ್ಳುವುದೇ ನಿಜವಾದ ಜ್ಞಾನ. ಇಂತಹ ಶ್ರೇಷ್ಠ ಮೌಲ್ಯಗಳು ಪಠ್ಯಪುಸ್ತಕಗಳಿಗಿಂತ ಹೆಚ್ಚಾಗಿ ನಮಗೆ ದಾರಿ ತೋರಿಸುವ ಗುರುಗಳಿಂದ ಲಭ್ಯವಾಗುತ್ತವೆ. ಆದ್ದರಿಂದ, ಈ ಗುರು ಪೂರ್ಣಿಮೆಯ ಸಂದರ್ಭದಲ್ಲಿ ಮಕ್ಕಳಿಗೆ ಗುರುವಿನ ನೈಜ ಮೌಲ್ಯವನ್ನು ತಿಳಿಸಿಕೊಡುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಭದ್ರಾವತಿ ಸಿದ್ದಾರೂಢ ಮಠದ ಕಾರ್ಯದರ್ಶಿಗಳು, ಯೋಗ ಗುರುಗಳಾದ ಗೋವಿಂದಪ್ಪ ಮಾತನಾಡಿ, ಗು ಎಂದರೆ ಅಜ್ಞಾನ, ರು ಎಂದರೆ ಅದನ್ನು ಹೋಗಲಾಡಿಸುವವನು. ಅಜ್ಞಾನವೆಂಬ ಕತ್ತಲನ್ನು ಓಡಿಸಿ ಜ್ಞಾನದ ಬೆಳಕು ತೋರುವವರೇ ಗುರು ಕೇವಲ ಶಾಲಾ ಶಿಕ್ಷಕರು ಮಾತ್ರವಲ್ಲದೆ ತಂದೆ-ತಾಯಿ, ಅಜ್ಜ-ಅಜ್ಜಿ, ಕ್ರೀಡಾ ತರಬೇತುದಾರರು ಮತ್ತು ಸಂಗೀತ ಗುರುಗಳೂ ಸಹ ನಮಗೆ ನೈಜ ಮಾರ್ಗದರ್ಶಕರು ಕೇವಲ ಪರೀಕ್ಷೆಯ ಅಂಕಗಳಷ್ಟೇ ಅಲ್ಲದೆ ಪ್ರಾಮಾಣಿಕತೆ, ವಿನಯ, ಶಿಸ್ತು ಮತ್ತು ಕರುಣೆಯಂತಹ ಗುಣಗಳು ಜೀವನದಲ್ಲಿ ಅತ್ಯಂತ ಮುಖ್ಯವಾಗಿದೆ. ಗುರುಗಳಿಗೆ ನೀಡುವ ಅತ್ಯುತ್ತಮ ಗೌರವ ಎಂದರೆ ಸದಾ ಕುತೂಹಲದಿಂದ ಹೊಸದನ್ನು ಕಲಿಯುವುದು ಮತ್ತು ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸುವುದು ಎಂದರು.

ಕಾರ್ಯಕ್ರಮದಲ್ಲಿ ಲೇಖಕರಾದ ಕಣಜನಹಳ್ಳಿ ನಾಗರಾಜ್, ಸಮಾಜ ಸೇವಕರಾದ ನಾಗರಾಜ್ ಸಗಂ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಓಂಕಾರ್, ಶ್ರೀಮತಿ ರೂಪ ಜನಾರ್ಧನ್, ಭದ್ರಾವತಿ ಸಿದ್ದಾರೂಢ ಮಠದ ರಾಮಮೂರ್ತಿ, ಸಿದ್ದವ್ವನಹಳ್ಳಿ ಪರಮೇಶ್, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜ£,À ಯೋಗಿಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಸುಬ್ರರಾಯ್ ಭಟ್ಟರು ವೇಧ ಘೋಷ ಮಾಡಿದರೆ ಶಿಕ್ಷಕಿ ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರು, ಪ್ರಶಾಂತ್ ಸ್ವಾಗತಿಸಿದರು, ದೈಹಿಕ ಶಿಕ್ಷಕರಾದ ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿರೂಪಾಕ್ಷಪ್ಪ ಮತ್ತು ಸಂಗಡಿಗರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕೊನೆಯಲ್ಲಿ ಶ್ರೀ ಸದ್ಗುರು ಶ್ರೀ ಶಿವಲಿಂಗಾ ನಂದ ಮಹಾ ಸ್ವಾಮಿಗಳವರಿಗೆ ಕೀರೀಟ ಪೂಜೆಯನ್ನು ನಡೆಸಲಾಯಿತು.

Leave a Reply

Your email address will not be published. Required fields are marked *