ಪೋಟೋ ಮತ್ತು ವರದಿ ವೇದಮೂರ್ತಿ
ಚಿತ್ರದುರ್ಗ: ಭೀಮಸಮುದ್ರ ಗ್ರಾಮದ ಶ್ರೀ ಭೀಮೇಶ್ವರ ಬಾಲ ವಿಕಾಸ ಕನ್ನಡ ಮಾಧ್ಯಮ ಶಾಲೆಯ ಸುಮಾರು 265 ವಿದ್ಯಾರ್ಥಿಗಳಿಗೆ ಉಚಿತವಾಗಿ ಪೆನ್ ಹಾಗೂ ಜ್ಯಾಮಿತಿ ಬಾಕ್ಸ್ (Geometry Box) ಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯ ಮೆರೆಯಲಾಗಿದೆ. ದಾನಿಗಳಾದ ಟಿ.ಜಿ. ಸಿದ್ದೇಶ್ ಅವರು ಶಾಲೆಯ ಮಕ್ಕಳಿಗೆ ಈ ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ಕೊಡುಗೆಯಾಗಿ ನೀಡಿದರು.
ಈ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಎ.ಎಂ. ಧನ್ಯ ಕುಮಾರ್ ಅವರು ಟಿ.ಜಿ. ಸಿದ್ದೇಶ್ ಅವರನ್ನು ಶಾಲು ಹೊದಿಸಿ, ಹೂವಿನ ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್, ಶಿಕ್ಷಕರಾದ ಸುಬ್ರಹ್ಮಣ್ಯ, ರಾಮು ಹಾಗೂ ಶಿಕ್ಷಕಿಯರಾದ ವೀಣಾ, ಅನ್ನಪೂರ್ಣಮ್ಮ, ಪೂರ್ಣಿಮಾ, ರಚನಾ, ವಿನೋದ ಮತ್ತು ವಾಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.