ಜಿಲ್ಲಾಧ್ಯಕ್ಷರ ಆಯ್ಕೆ ವೇಳೆ ಚಿತ್ರದುರ್ಗ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ: ಕಾರ್ಯಕರ್ತರು-ನಾಯಕರ ನಡುವೆ ವಾಗ್ವಾದ.

ಚಿತ್ರದುರ್ಗ ಜು. 31

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸಂಘಟನ್ ಶ್ರೀಜನ್ ಅಭಿಯಾನ್ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಅಧ್ಯಕ್ಷರ ಆಯ್ಕೆಯ ಸಂಬಂಧ ನಡೆಯಬೇಕಿದ್ದ ಸಭೆಯು ಗೊಂದಲದ ಗೂಡಾಗಿ ಪರಿಣಮಿಸಿತು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು, ಮಾಜಿ ಸಂಸದರು, ಮಾಜಿ ಮಂತ್ರಿಗಳು ಹಾಗೂ ಎಐಸಿಸಿ ಚಿತ್ರದುರ್ಗ ಜಿಲ್ಲಾ ಸಂಘಟನ್ ಶ್ರೀಜನ್ ಅಭಿಯಾನ ಉಸ್ತುವಾರಿಗಳಾದ ರಿಪುನ್ ಬೋರಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆಯ ಸಂಬಂಧ ಸಭೆಯನ್ನು ಕರೆಯಲಾಗಿತ್ತು.

ಈಗಾಗಲೇ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ 60 ಜನ ತಮ್ಮ ಹೆಸರುಗಳನ್ನು ನೀಡಲಾಗಿತ್ತು. ಆದರೆ ಇವರಲ್ಲಿ ಒಬ್ಬರನ್ನು ಮಾತ್ರ ಅಧ್ಯಕ್ಷರನ್ನಾಗಿ ಮಾಡಬೇಕಿದೆ ಈ ಹಿನ್ನಲೆಯಲ್ಲಿ ನಡೆದ ಸಭೆಯಲ್ಲಿ ಸಭೆ ಪ್ರಾರಂಭವಾಗಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡುತ್ತಿದ್ದಾಗ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಟಿ.ಜಗದೀಶ್‍ರವರ ಬೆಂಬಲಿಗರ ಗುಂಪು ಕಟ್ಟಿಕೊಂಡು ಅವರ ಭಾವಚಿತ್ರದ ಫಕ್‍ಕಾರ್ಡಗಳನ್ನು ಹಿಡಿದು ಅವರಿಗೆ ಜೈಕಾರ ಕೂಗುತ್ತಾ ಸಭೆಯನ್ನು ಪ್ರವೇಶ ಮಾಡಿತು ಈ ಸಮಯದಲ್ಲಿ ಅಧ್ಯಕ್ಷರು ಇಲ್ಲಿ ಯಾರಿಗೂ ಸಹಾ ಜೈಕಾರ ಕೂಗುವುದು, ಫೆಕ್‍ಕಾರ್ಡಗಳನ್ನು ಹಿಡಿದು ಬರುವುದು ಬೇಡ ಇಲ್ಲಿ ಎಲ್ಲರು ಒಂದೇ ಎಂದಾಗ ಗುಂಪಿನಲ್ಲಿ ಕೆಲವರು ನಮ್ಮವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿ ಎಂದು ಏರು ಧ್ವನಿಯಲ್ಲಿ ಕೂಗಿದರು, ಇದೆ ರೀತಿ ಬೇರೆಯವರು ಸಹಾ ಇದಕ್ಕೆ ಧ್ವನಿಯನ್ನುಗೂಡಿಸಿದರು.

ಈ ಸಮಯದಲ್ಲಿ ಸಂಘಟನ್ ಶ್ರೀಜನ್ ಅಭಿಯಾನ್ ಕೆಪಿಸಿಸಿ ಉಸ್ತುವಾರಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ವಿ ಎಸ್ ಉಗ್ರಪ್ಪ ರವರು ಗುಂಪು ಕಟ್ಟಿಕೊಂಡು ಬಂದವರನ್ನು ಬಿಜೆಪಿ ಬೆಂಬಲಿಗರು ಎಂದು ಹೇಳಿದರು, ಇದರಿಂದ ಕೆರಳಿದ ಕಾರ್ಯಕರ್ತರು ನಾವು ಕಟ್ಟಾ ಕಾಂಗ್ರೆಸ್ ನವರು ನಮ್ಮ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ, ಎಂದು ಹೇಳುತ್ತಾ ವೇದಿಕೆಯತ್ತ ಬರುವುದಕ್ಕೆ ಪ್ರಯತ್ನ ಮಾಡಿದರು.

ಈ ಮಧ್ಯದಲ್ಲಿ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷರಾದ ಕೆ.ಎಂ.ಹಾಲಸ್ವಾಮಿ ಇವರನ್ನು ತಡೆಯವ ಕಾರ್ಯವನ್ನು ಮಾಡಿ ಸಮಾಧಾನ ಮಾಡುವ ಕಾರ್ಯವನ್ನು ಮಾಡಿದರು ಆದರೂ ಸಹಾ ಸುಮ್ಮನಾಗದ ಅವರು ನಮ್ಮನ್ನು ಯಾವ ರೀತಿಯಲ್ಲಿ ಬಿಜೆಪಿ ಬೆಂಬಲಿಗರು ಎಂದರು, ಇಲ್ಲಿ ಕಾರ್ಯಕರ್ತ ಅಭಿಪ್ರಾಯವನ್ನು ಕೇಳಲು ಸಭೆಯನ್ನು ಕರೆಯಲಾಗಿದೆ ಆದರೆ ಇಲ್ಲಿ ಕಾರ್ಯಕರ್ತರಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಘೋಷಣೆಗಳನ್ನು ಕೂಗಿದರು ಇದರಿಂದ ಉಗ್ರಪ್ಪರವರು ಇವರಿಗೆ ನೋಟಿಸ್ ನೀಡಿ ಎಂದು ಅಧ್ಯಕ್ಷರಿಗೆ ಸೂಚಿಸಿದರು. ಇದೇ ರೀತಿ ಅಧ್ಯಕ್ಷರು ಸಹಾ ನೀವು ಇದೆ ರೀತಿ ವರ್ತಿಸಿದರೆ ನೋಟಿಸ್ ನೀಡಲಾಗುತ್ತದೆ ಎಂದು ಸೂಚಿಸಿದರು.

ಈ ಮಧ್ಯೆ ಬಿ.ಟಿ.ಜಗದೀಶ್ ರವರು ಕಾರ್ಯಕರ್ತರ ಮಧ್ಯದಲ್ಲಿ ನುಸಳಿ ವೇದಿಕೆಯತ್ತ ತೆರಳಿ ರಿಪುನ್ ಬೋರಾರವರನ್ನು ಬೇಟಿ ಮಾಡಿ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಪಾರದರ್ಶಕತೆ ಇರಬೇಕಿದೆ, ಇಲ್ಲಿ ಎಲ್ಲರ ಅಭೀಪ್ರಾಯವನ್ನು ಸಂಗ್ರಹ ಮಾಡಿ ಅಂತಿಮವಾಗಿ ಕೆಪಿಸಿಸಿ ಹಾಗೂ ಏಐಸಿಸಿಗೆ ಹೆಸರನ್ನು ಕಳುಹಿಸುವಂತೆ ಮನವಿ ಮಾಡಿದರು.

ಈ ಮಧ್ಯೆ ಚಳ್ಳಕೆರೆ ಹಾಗೂ ಮೊಳಕಾಲ್ಮೂರಿನಿಂದ ಸಭೆಗೆ ಬಂದಂತಹ ಕಾರ್ಯಕರ್ತರು ನಮ್ಮ ಉರಿಗೆ ಬಂದಾಗ ನಮ್ಮ ತಾಲ್ಲೂಕಿನಿಂದಲೂ ಸಹಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೆಸರನ್ನು ನೀಡಲಾಗಿತ್ತು ಆದರೆ ಪಟ್ಟಿಯಲ್ಲಿ ಅವರ ಹೆಸರನ್ನು ಓದಲಿಲ್ಲ ಇದ್ದಲ್ಲದೆ ನಮ್ಮ ಬಳಿ ಬಂದಾಗ ಆರು ಜನರಿಗೆ ಮತವನ್ನು ಹಾಕಬೇಕು ಎಂದು ಹೇಳಲಾಗಿತ್ತು ಆದರೆ ಈಗ ಒಬ್ಬರ ಹೆಸರನ್ನು ಮಾತ್ರ ಹೇಳಬೇಕು ಎನ್ನಲಾಗುತ್ತಿದೆ ಇದು ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ ಎಂದಾಗ ಶ್ರೀಮತಿ ಸೌಗಂಧಿಕಾ ರಘುನಾಥ್‍ರವರು ಅಂದು ಆಗ ಹೇಳಲಾಗಿತ್ತು ಆದರೆ ಈಗ ಕೆಪಿಸಿಸಿ ಇಂದ ಒಬ್ಬರ ಹೆಸರನ್ನು ಮಾತ್ರ ಹೇಳಬೇಕು ಈ ರೀತಿಯಾದ ನಿರ್ದೆಶನ ಬಂದಿದೆ ಅಲ್ಲದೆ ನಾವು ಇಲ್ಲಿಗೆ ಬಂದಾಗ ಆಧ್ಯಕ್ಷ ಸ್ಥಾನಕ್ಕೆ 8 ರಿಂದ 10 ಹೆಸರು ಬರಬಹುದೆಂದು ನಿರೀಕ್ಷೆ ಮಾಡಲಾಗಿತ್ತು ಆದರೆ ಇಲ್ಲಿ 60 ಜನರ ಹೆಸರು ಬಂದಿದೆ ಈ ಹಿನ್ನಲೆಯಲ್ಲಿ ಈ ರೀತಿ ಮಾಡಲಾಗಿದೆ ಎಂದು ಸಮಾಧಾನ ಪಡಿಸಿದರು. ಇಷ್ಠಾದರು ಆವರು ಸಮಾಧಾನವಾಗದಿದ್ಧಾಗ ಡಿಸಿಸಿ ಪ್ರಧಾನ ಕಾರ್ಯದರ್ಶಿ, ಕೆ. ಪಿ. ಸಂಪತ್ ಕುಮಾರ್ ಅವರ ಬಳಿ ಹೋಗಿ ಸಮಾಧಾನ ಮಾಡಿ ಸಭೆ ಮುಂದುವರೆಯುವಂತೆ ಮಾಡಿದರು.

Leave a Reply

Your email address will not be published. Required fields are marked *