ಚಿತ್ರದುರ್ಗ:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮೈಕ್ರೋ ಸಮುದಾಯದ ಮುಖಂಡ ಗುರುರಾಜ್ ಶೆಟ್ಟಿ ಹಾಗೂ ಒಬಿಸಿ ನಾಯಕರ ಮೇಲೆ ಮಾಡಲಾಗಿರುವ ಪಕ್ಷವಿರೋಧಿ ಆರೋಪಗಳನ್ನು ನಿರಾಕರಿಸಲಾಗಿದ್ದು, ಅವರಿಗೆ ನೀಡಲಾಗಿರುವ ನೋಟಿಸ್‍ಗಳ ಕುರಿತು ಹರಿಪ್ರಸಾದ್ ಅವರ ಗಮನಕ್ಕೆ ತರಲು ನಿರ್ಧರಿಸಲಾಗಿದೆ. ಯಾವುದೇ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗದಿದ್ದರೂ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಓಬಿಸಿ ಘಟಕದ ಅಧ್ಯಕ್ಷ ಎನ್.ಡಿ. ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸಂಘಟನ್ ಶ್ರೀಜನ್ ಅಭಿಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರ ಮೇಲೆ ವಿನಾ ಕಾರಣ ನೋಟಿಟ್ ನೀಡಿರುವುದು ಸರಿಯಲ್ಲ, ಮೈಕ್ರೋ ಸಮುದಾಯದ ನಾಯಕರಾದ ಗುರುರಾಜ್ ಶೆಟ್ಟಿ ಅವರು ಯಾವುದೇ ಪಕ್ಷವಿರೋಧಿ ಚಟುವಟಿಕೆಗಳನ್ನು ನಡೆಸಿಲ್ಲ ಹಾಗೂ ಯಾವುದೇ ರೀತಿಯ ಪಕ್ಷವಿರೋಧಿ ಹೇಳಿಕೆಗಳನ್ನೂ ನೀಡಿಲ್ಲ ಸೌಗಂಧಿಕಾ ರವರು ಗುರುರಾಜ್ ಶೆಟ್ಟಿ ಅವರು ಮಾತನಾಡಿರುವುದನ್ನು ತಪ್ಪಾಗಿ ಗ್ರಹಿಸಿ, ನೋಟಿಸ್ ನೀಡಲಾಗಿದೆ ಎಂದು ಆಕ್ಷೇಪಿಸಲಾಯಿತು. ಮೈಕ್ರೋ ಸಮುದಾಯದ ನಾಯಕರಿಗೂ ರಾಜಕೀಯವಾಗಿ ಬೆಳೆಯುವ ಮತ್ತು ತಮ್ಮ ಧ್ವನಿಯನ್ನು ಎತ್ತುವ ಹಕ್ಕಿದೆ. ಆದರೆ ಅವರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದ್ದು, ಈ ವಿಚಾರದಲ್ಲಿ ಹಿರಿಯ ನಾಯಕರು ಸೂಕ್ತ ಅಭಯ ಮತ್ತು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.
ಸೌಗಂಧಿಕಾ ಅವರಿಗೆ ಪಕ್ಷದ ವ್ಯವಸ್ಥೆ ಮತ್ತು ನಿಯಮಗಳ ವ್ಯಾಪ್ತಿಯಲ್ಲೇ ಮುಂದುವರಿಯುವಂತೆ ಅವರು ಮನವಿ ಮಾಡಿ, ಇದೇ ವೇಳೆ, ಒಬಿಸಿ ಮುಖಂಡರಾದ ಜಗದೀಶ್ ಮತ್ತು ಗೀತಾನಂದಿನಿ ಗೌಡ ಅವರಿಗೂ ಸಹ ನೋಟಿಸ್ ನೀಡಲಾಗಿದೆ ಎಂಬ ವಿಷಯವನ್ನು ಪ್ರಸ್ತಾಪಿಸಿ ಗುರುರಾಜ್ ಶೆಟ್ಟಿ, ಜಗದೀಶ್ ಹಾಗೂ ಗೀತಾನಂದಿನಿ ಗೌಡ ಈ ಮೂವರೂ ಯಾವುದೇ ಪಕ್ಷವಿರೋಧಿ ಕೆಲಸಗಳನ್ನು ಮಾಡಿಲ್ಲ. ಆದ್ದರಿಂದ ಈ ಎಲ್ಲಾ ವಿಷಯಗಳನ್ನು ಹರಿಪ್ರಸಾದ್ ಅವರ ಗಮನಕ್ಕೆ ತರಲಾಗುವುದು ಎಂದು ಡಿ.ಕೆ. ಹರಿಪ್ರಸಾದ್ ರವರ ಆಪ್ತ ಎನ್.ಡಿ.ಕುಮಾರ್ ತಿಳಿಸಿದರು.
ಪಕ್ಷದ ಹಿರಿಯ ನಾಯಕರು ಈ ಮುಖಂಡರಿಗೆ ಸೂಕ್ತ ಭರವಸೆ ಮತ್ತು ಪ್ರೋತ್ಸಾಹವನ್ನು ನೀಡಬೇಕು. ಸಣ್ಣ ಸಣ್ಣ ಸಮುದಾಯಗಳ ನಾಯಕರನ್ನು ಕಡೆಗಣಿಸದೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಒತ್ತಾಯಿಸಿದ್ದಾರೆ.