ಚಿತ್ರದುರ್ಗ ಆ. 04
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಕನ್ನಡ ಭಾಷೆ ನಮ್ಮ ನಿಮ್ಮೆಲ್ಲರ ಮನದಾಳದಲ್ಲಿ ಇರಬೇಕು ಯಾವುದೇ ಜಾತಿ ಮತ ಭೇದವಿಲ್ಲದೆ ಕರ್ನಾಟಕ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚದೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಪ್ರಾರಂಭಿಸಬೇಕು ಎಂದು ಪ್ರೊ| ರೂಪೇಶ್ ಪುತ್ತೂರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರೊಫೆಸರ್ ರೂಪೇಶ್ ಕುಮಾರ್ ಕನ್ನಡ ಉಳಿವಿಗಾಗಿ, ಕನ್ನಡಿಗರಿಗೆ ಉದ್ಯೋಗ ದೊರಕಬೇಕು, ಕನ್ನಡ ಶಾಲೆಗಳನ್ನು ಮುಚ್ಚದೆ ಅಭಿವೃದ್ದಿ ಪಡಿಸಬೇಕು ಎಂಬ ಅಂಶಗಳ ಕುರಿತು ಬೀದರ್ನಿಂದ ಬೆಂಗಳೂರಿಗೆ ಪಾದ ಯಾತ್ರೆ ಸಂದರ್ಭದಲ್ಲಿ ಚಿತ್ರದುರ್ಗ ನಗರಕ್ಕೆ ನಿನ್ನೆ ಸಂಜೆ ಆಗಮಿಸಿದ ಅವರನ್ನು ಚಿತ್ರದುರ್ಗ ಕೆಲ ನಾಗರೀಕರು ಡಿ.ಸಿ.ಕಚೇರಿಯ ಒನಕೆ ಓಬವ್ವ ವೃತ್ತದ ಬಳಿ ಸ್ವಾಗತ ಮಾಡಿದರು, ಈ ಸಂದರ್ಭದಲ್ಲಿ ಮಾತ ನಾಡಿದ ಅವರು ಶಿಕ್ಷಕರಿಗೆ ಶಿಕ್ಷಣದ ಕಾಳಜಿಯೊಂದಿಗೆ ಕನ್ನಡ ಭಾಷೆಯನ್ನು ಮಕ್ಕಳಿಗೆ, ಪೋಷಕರಿಗೆ ಮನವ ರಿಕೆ ಮಾಡಬೇಕಾಗಿದೆ ಇಡೀ ಭಾರತದಲ್ಲಿ ಜ್ಞಾನಪೀಠ ಪ್ರಶಸ್ತಿಗಳನ್ನು ಕರ್ನಾಟಕದಲ್ಲಿ ಎಂಟು ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿ ವಿತರಿಸಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್ ಸಗಂ ಪ್ರೊ|| ರೂಪೇಶ್ ಪುತ್ತೂರು ರವರು ಕನ್ನಡ ಭಾಷೆಯ ಅಭಿಮಾನದಿಂದ ಬೀದರ್ನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿರುವುದು ಅವಿಸ್ಮರಣೀಯ ಕೆಲವು ಕನ್ನಡ ಸಂಘಟನೆಗಳು ಪ್ರಚಾರಕ್ಕೆ ಸೀಮಿತವಾಗುತ್ತಾರೆ ಆದರೆ ಇವರು ಯಾವುದೇ ಪ್ರಚಾರವಿಲ್ಲದೆ ಕಠಿಣ ಪರಿಶ್ರಮದಿಂದ ಸ್ವಯಂ ಪ್ರೇರಣೆಯಿಂದ ಯಾವುದೇ ಅನುದಾನವಿಲ್ಲದೆ ಸಾವಿರಾರು ಕಿಲೋಮೀಟರ್ಗಳು ನಡೆದುಕೊಂಡು ಹೋಗುತ್ತಿರುವುದು ಆಶ್ಚರ್ಯ ಎಂದರು.
ಶ್ರೀಕಾಂತ್, ರಾಜ್ಯ ಪ್ರಶಸ್ತಿ ಪುರಸ್ಕøತರಾದ ಶಿಕ್ಷಕರಾದ ಮಹೇಶ್, ಪರಿಸರವಾದಿ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರೊ|| ರೂಪೇಶ್ ಪುತ್ತೂರ್ ಅವರಿಗೆ ಅಭಿಮಾನದಿಂದ ಗೌರವ ಪೂರಕ ಸನ್ಮಾನಿಸಿ ಗೌರವಿಸಲಾಯಿತು.