ಚಿತ್ರದುರ್ಗ ಆ. 9
ದೇಶ ಸ್ವಾತಂತ್ರ್ಯಗಳಿಸುವುದಕ್ಕೂ ಮುನ್ನಾ ಮಹಾತ್ಮಗಾಂಧಿಜಿಯವರ ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭ ಮಾಡಿದರೆ ಈಗ ಬಿಜೆಪಿಯವರೇ ಅಧಿಕಾರವನ್ನು ಬಿಟ್ಟು ತೊಲಗಿ ಎಂದು ಹೇಳುವಂತ ವಾತಾವರಣ ದೇಶದದಲ್ಲಿ ಸೃಷ್ಟಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತಾಜ್‍ಪೀರ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ 87ನೇ ಕ್ವಿಟ್ ಇಂಡಿಯಾ ಚಳುವಳಿಯ ದಿನಾಚರಣೆಯ ಅಂಗವಾಗಿ ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ ನಮ್ಮ ಜನರನ್ನು ಜೀತದಾಳುಗಳಾಗಿ ಇಟ್ಟುಕೊಂಡಿದ್ದರು ಇದನ್ನು ಕಂಡ ನಮ್ಮ ಮುಖಂಡರು ಬ್ರಿಟಿಷರ ದಾಸ್ಯದಿಂದ ನಮ್ಮ ದೇಶವನ್ನು ಬಿಡುಗಡೆ ಮಾಡಬೇಕೆಂದು ಪಣ ತೊಟ್ಟು ಹಲವಾರು ಬಾರಿ ಅವರ ಜೊತೆಯಲ್ಲಿ ಮಾತುಕಥೆಯನ್ನು ನಡೆಸಿದರ ಸಹಾ ಫಲ ಪ್ರದವಾಗದೇ ಇದ್ದಾಗ ಅಂತಿಮವಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭ ಮಾಡಲಾಯಿತು ಆಗ ಉದಯ ವಾಗಿದ್ದೆ ಕಾಂಗ್ರೆಸ್ ಇದರಲ್ಲಿ ದೇಶದ ಪ್ರತಿಯೊಬ್ಬರು ಸಹಾ ಭಾಗವಹಿಸುವುದರ ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಿಸಲು ಹೋರಾಟವನ್ನು ನಡೆಸಿದರು, ಇವರ ಹೋರಾಟದ ಫಲಾವಾಗಿ ಬ್ರಿಟಿಷರನ್ನು ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದರು.
ದೇಶ ವಿಭಜನೆ ಸಮಯದಲ್ಲಿ ಕೆಲವೊಂದು ಜನತೆ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿ ಪಾಕಿಸ್ತಾನ ಮತ್ತು ಭಾರತ ಎಂದು ಮಾಡಿ ಅದರಲ್ಲಿ ಮುಸ್ಲಿಂರು ಪಾಕಿಸ್ತಾನಕ್ಕೆ ಹಿಂದುಗಳು ಭಾರತಕ್ಕೆ ಎಂದು ಹೇಳಿದರು ಇದರಲ್ಲಿ ಭಾರತದಲ್ಲಿ ಹಲವಾರು ಮುಸ್ಲಿಂರು ಇಲ್ಲಿಯೇ ಉಳಿದುಕೊಂಡು ದೇಶಕ್ಕೆ ಅಭಿಮಾನ ತೋರಿಸಿದರು. ಈಗ ನಮಗೆ ಸಂವಿಧಾನ ರಕ್ಷಣೆಯನ್ನು ನೀಡಿದೆ, ಆದರೆ ಈಗ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿ, ಆರ್.ಎಸ್.ಎಸ್. ಸಂಘ ಪರಿವಾರಗಳು ಮಾಮಮಾರ್ಗದಿಂದ ಅಧಿಕಾರವನ್ನು ಹಿಡಿದು ಜನತೆಯ ಮಧ್ಯದಲ್ಲಿ ಧರ್ಮ ಜಾತಿಯ ಹೆಸರಿನಲ್ಲಿ ವಿಷ ಬೀಜವನ್ನು ಬಿತ್ತುತ್ತಿದ್ದಾರೆ. ಅಂದು ಮಹಾತ್ಮಗಾಂಧಿಯವರು ಬ್ರಿಟಿಷರೆ ಭಾರತವನ್ನು ಬಿಟ್ಟು ಹೋಗಿ ಎನ್ನುವ ಘೋಷಣೆಯಾದರೆ ಈಗ ಬಿಜೆಪಿಯವರೇ ಭಾರತದ ಅಧಿಕಾರದಿಂದ ತೊಲಗಿ ಎಂದು ಹೋರಾಟವನ್ನು ಮಾಡುವ ಅನಿವಾರ್ಯತೆ ಕಂಡು ಬರುತ್ತಿದೆ ಎಂದು ತಿಳಿಸಿದರು.
ವ್ಯಾಪಾರಕ್ಕೆಂದು ಭಾರತಕ್ಕೆ ಬಂದಿದ್ದ ಬ್ರಿಟೀಷರು ನಮ್ಮ ದೇಶದ ಜನರನ್ನ ಜೀತದ ಆಳುಗಳನ್ನಾಗಿ ಮಾಡಿಕೊಂಡಿದ್ದು ಎಲ್ಲಾ ರೀತಿಯ ಸ್ವಾತಂತ್ರ್ಯವನ್ನ ನಮ್ಮಿಂದ ಕಿತ್ತುಕೊಂಡಿದ್ದರು. ಆ ವೇಳೆ ಅನೇಕ ಹಿರಿಯರು ನಮ್ಮ ದೇಶವನ್ನ ಜೀತ ಪದ್ದತಿಯಿಂದ ಹೊರ ತರುವ ಬಗ್ಗೆ ಚಿಂತಿಸಿ ಒಳ್ಳೆಯ ಸರ್ಕಾರ ಒಳ್ಳೆಯ ಅಳ್ವಿಕೆ ತರುವ ಉದ್ದೇಶದಿಂದ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಪ್ರಾರಂಬಿಸಿದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಥಾಪನೆ ಆಗಿ ಸ್ವಾತಂತ್ರ್ಯ ಕೇಳಿದರೆ ಕೊಡುವುದಿಲ್ಲ. ಹೋರಾಟ ಮಾಡಿದರೆ ಮಾತ್ರ ಬ್ರಿಟಿಷರನ್ನ ಹೊರ ಹಾಕಿದರೆ ಮಾತ್ರ ಸ್ವಾತಂತ್ರ್ಯ ಸಿಗಲಿದೆ ಎಂದು ಯೋಚಿಸಿ ಆಗ ಭಾರತ ದೇಶದ ಪ್ರತಿಯೊಬ್ಬ ಭಾರತೀಯನು ಸಹ ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ಮಾಡಿದ್ದರಿಂದ ಬ್ರಿಟಿಷರಿಗೆ ಅರಿವಾಗಿ ದೇಶದ ಜನರೇ ಈ ರೀತಿ ಹೇಳುತ್ತಿದ್ದನ್ನ ಅರಿತು ಭಾರತ ದೇಶ ಬಿಟ್ಟು ಬ್ರಿಟಿಷರು ಹೋಗಿದ್ದು ಸ್ಮರಣೆ ಎಂದು ಎಂ ಕೆ ತಾಜ್‍ಪೀರ್ ಹೇಳಿದ್ದಾರೆ.
ಡಿಸಿಸಿ ಮಾಜಿ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ, 1942 ರಿಂದ ಪ್ರಾರಂಭವಾದ ಕ್ವಿಟ್ ಇಂಡಿಯಾ ಚಳುವಳಿ 1947ರ ದೇಶ ಸ್ವಾತಂತ್ರ್ಯಗೊಳ್ಳುವವರೆಗೂ ನಡೆಯಿತು. ಅಂದು ಬಹಿರಂಗವಾಗಿ ಬ್ರಿಟಿಷರ ವಿರುದ್ದ ಹೋರಾಟವನ್ನು ಮಾಡಿದರೆ ಈಗ ನಾವು ದೇಶದ ಅಂತರಿಕವಾಗಿ ಇರುವಂತ ಬಿಜೆಪಿಯ ವಿರುದ್ದ ಹೋರಾಟವನ್ನು ಮಾಡುವಂತ ವಾತಾವರಣ ಇಂದಿನ ದಿನದಲ್ಲಿ ನಿರ್ಮಾಣವಾಗಿದೆ. ಬಿಜೆಪಿಯವರು ದೇಶದಲ್ಲಿ ಅಂತರಿಕವಾಗಿ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಕಲಹವನ್ನು ಮಾಡುವುದರ ಮೂಲಕ ದೇಶದಲ್ಲಿ ಆಶಾಂತಿಯನ್ನು ನಿರ್ಮಾಣ ಮಾಡುತ್ತಿದೆ ಇದರ ಬಗ್ಗೆ ಕಾಂಗ್ರೆಸ್ ಎಚ್ಚೆತ್ತುಕೊಂಡು ಹೋರಾಟವನ್ನು ಮಾಡಿ ಜನತೆಯಲ್ಲಿ ಜಾಗೃತಿಯನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷದ ಓಬಿಸಿ ಘಟಕದ ಅಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಅಂದು ನಡೆದ ಕ್ವಿಟ್ ಇಂಡಿಯಾ ಚಳುವಳಿಯ ಮಾದರಿಯಲ್ಲಿ ಇಂದು ಅಂತಹದೊಂದು ಚಳುವಳಿಯಾಗಬೇಕಿದೆ. ಅಂದು ಬ್ರಿಟಿಷರೇ ದೇಶವನ್ನು ಬಿಟ್ಟು ಹೋಗಿ ಎಂದು ಹೇಳಲಾಗಿತ್ತು. ಆದರೆ ಇಂದು ಬಿಜೆಪಿಯವರೇ ಅಧಿಕಾರವನ್ನು ಬಿಟ್ಟು ಹೋಗಿ ಎಂದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಯುದ್ಧದ ಸಮಯದಲ್ಲಿ 1 ಲಕ್ಷ ಜನರ ಬಂಧನವಾಯಿತು 10 ಸಾವಿರ ಜನರ ಸಾವಾಯಿತು, ಕ್ವಿಟ್ ಇಂಡಿಯಾವನ್ನು ಈಗ ಹಲವಾರು ಜನ ಅದನ್ನು ವೈಭವಿಕರಿಸುತ್ತಿದ್ದಾರೆ, ಆದರೆ ಇದರ ಬಗ್ಗೆ ಗೂಗಲ್‍ನಲ್ಲಿ ನೋಡಿದೆ ನಿಜವಾದ ಸತ್ಯ ಗೋತ್ತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್ ಮೈಲಾರಪ್ಪ ಸೇವಾದಳ ಅಧ್ಯಕ್ಷ ಭೂತೇಶ್, ನಗರಾಧ್ಯಕ್ಷರಾದ ಲಕ್ಷ್ಮಿಕಾಂತ್, ಮಹಿಳಾ ಮುಖಂಡರಾದ ಮುನೀರ ಮುಕಾಂದರ್, ಮರುಳಾರಾಧ್ಯ, ಮುದಸಿರ್ ನವಾಜ್, ರಾಧಮ್ಮ ಚಾಂದಪೀರ್, ಕುಮಾರಗೌಡ ಹಾಗೂ ಪಕ್ಷದ ಕಾರ್ಯ ಕರ್ತರು ಹಾಜರಿದ್ದರು.