ಬಿಸಿಯೂಟ ತಯಾರಕರ ಬಾಕಿ ವೇತನ ಬಿಡುಗಡೆಗೆ ಆಗ್ರಹ: ಚಿತ್ರದುರ್ಗದಲ್ಲಿ ಪ್ರತಿಭಟನೆ.

ಚಿತ್ರದುರ್ಗ ಆ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸ ಬೇಕು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರಿಗೆ ಮನವಿ ಮಾಡಲಾಯಿತು.

ನಗರದ ದಾವಣಗೆರೆ ರಸ್ತೆಯಲ್ಲಿನ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂಈ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಬಿಸಿಯೂಟ ತಯಾರಕರು ಮತ್ತು ಸಹಾಯಕಿರು ದಾರಿಯುದ್ದಕ್ಕೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.

ಕಳೆದ 25 ವರ್ಷಗಳಿಂದÀ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರುಗಳಿಗೆ ಕಳೆದ ಎರಡು ತಿಂಗಳ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡ ಬೇಕು.ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ಬಿಸಿಊಟ ತಯಾರಕರನ್ನು ಅಡುಗೆ ಕೆಲಸದಿಂದ ಬಿಡುಗಡೆಗೊಳಿಸಿದಲ್ಲಿ ಅಂತಹ ಬಿಸಿಊಟ ತಯಾರಕರಿಗೂ ಇಡುಗಂಟು ಹಣ ಕೊಡಬೇಕು. ಬಿಸಿಊಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೆ ತರಬೇಕು. ಬಿಸಿಊಟ ತಯಾರಕರನ್ನು ಸ್ಕೀಮ್ ವರ್ಕರ್ಸ್ ಎನ್ನುವುದನ್ನು ಬದಲಾಯಿಸಿ ಅವರನ್ನು ಕಾರ್ಮಿಕರೆಂದು ಘೋಷಿಸಬೇಕು. ನಿವೃತ್ತ ಬಿಸಿಊಟ ತಯಾರಕರಿಗೆ ಪೆನ್ಷನ್ ಕೊಡದೆ ಇರುವುದರಿಂದ ಈಗ ಜಾರಿಯಾಗಿರುವ ಇಡುಗಂಟು ಹಣ 40 ಸಾವಿರದ ಬದಲಾಗಿ 2 ಲಕ್ಷ ರೂಪಾಯಿಗಳನ್ನು ಕೊಡಬೇಕು ಎಂದು ಆಗ್ರಹಿಸಲಾಯಿತು.

ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ1/- ರೂಪಾಯಿಗೆ ಏರಿಸಬೇಕು. ಹೆಚ್ಚುವರಿ ಕೆಲಸ ಆಗಿ ಜಾರಿಯಾಗಿರುವ, ಶಾಲೆಗಳಲ್ಲಿ ಮೊಟ್ಟೆ ಸುಲಿದ ಕೆಲಸಕ್ಕೆ ಇದುವರೆಗೂ ರಾಜ್ಯದಲ್ಲಿ 95 ಬಿಸಿಊಟ ತಯಾರಕರಿಗೆ ಮೊಟ್ಟೆ ಸುಲಿದ ಹಣ ಕೊಟ್ಟಿರುವುದಿಲ್ಲ. ಆದ್ದರಿಂದ ಶಾಲೆಗಳಲ್ಲಿ ಮೊಟ್ಟೆ ಸುಲಿದ ಹಣವನ್ನು ಆ ಶಾಲೆಯ ಮುಖ್ಯ ಅಡುಗೆಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿರಿ, ಆ ಶಾಲೆಯಲ್ಲಿರುವ ಎಲ್ಲಾ ಅಡುಗೆಯವರು ಆ ಹಣವನ್ನು ಸಮನಾಗಿ ತೆಗೆದುಕೊಳ್ಳುವರು. ನೂರು ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ ಎರಡು ಜನ ಅಡುಗೆಯವರಿಗೆ ಕೆಲಸದ ಹೊರೆ ಭಾರವಾಗುತ್ತಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನೂರರ ವರೆಗೆ ಇದ್ದಲ್ಲಿ ಅಂತಹ ಶಾಲೆಯಲ್ಲಿ ಮೂರು ಜನ ಅಡುಗೆಯವರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿ ತಿಂಗಳು ಐದನೇ ತಾರೀಖಿನಂದು ಬಿಸಿಊಟ ತಯಾರಕರಿಗೆ ಗೌರವ ಧನ ಅವರ ಬ್ಯಾಂಕ್ ಖಾತೆಗೆ ಜಮಾ ಆಗಬೇಕು, ಬಿಸಿಯೂಟ ತಯಾರಕರಿಗೆ 10 ಲಕ್ಷ ಮರಣ ಪರಿಹಾರ ಜಾರಿಗೊಳಿಸಿ.ಬಿಸಿಯೂಟ ತಯಾರಕರಿಗೆ ಶಾಲೆಗಳಲ್ಲಿ ಆಗುವ ಅಪಘಾತದ ಆಸ್ಪತ್ರೆಯ ವೆಚ್ಚಕ್ಕೆ ಒಂದು ಲಕ್ಷ ರೂಪಾಯಿ ಕೊಡಬೇಕು ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಪಬ್ಲಿಕ್ಶಾ ಲೆಗಳನ್ನು ತೆರೆದಲ್ಲಿ, ಹಾಲಿ ಬಿಸಿಯೂಟ ಯೋಜನೆಯಲ್ಲಿ ಅಡುಗೆ ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದೇ ಅವರೆಲ್ಲರಿಗೂ ಕೆಲಸ ಕೊಡ ಬೇಕು. ಬಿಸಿಯೂಟ ತಯಾರಿಕರಿಗೆ ಕಲ್ಯಾಣ ಮಂಡಳಿಯನ್ನು ಜಾರಿಗೆ ತಂದು ಆ ಮೂಲಕ ಅವರಿಗೆ ಸವಲತ್ತುಗಳನ್ನುಕೊಡಬೇಕು ಎಂದು ಆಗ್ರಹಿಸಲಾಯಿತು.

ಈ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚಿಸಲು ಶಿಕ್ಷಣ ಸಚಿವರಾದ ನಿಮ್ಮ ನೇತೃತ್ವದಲ್ಲಿ ಅಧಿಕಾರಿಗಳ ಒಟ್ಟಿಗೆ ಕೂಡಲೇ ಸಭೆ ಕರೆಯಬೇಕಾಗಿ ಮನವಿ ಮಾಡಲಾಯಿತು.

ಈ ಪ್ರತಿಭಟನೆಯ ನೇತೃತ್ವವನ್ನು ಗೌರವಾಧ್ಯಕ್ಷರಾದ ಕಾಂII ಜಿ ಸಿ ಸುರೇಶ್ ಬಾಬು, ಅಧ್ಯಕ್ಷರಾದ ಕಾಂII ಪರ್ವೀನ್ ಬಾನು, ಉಪಾಧ್ಯಕ್ಷರಾದ ಕಾಂII ಕಾಂತಮ್ಮ ಕಾಂII ರಜಿಯಾ ಕಾಂII ನಾಗಮ್ಮ ಕಾಂII ಗಿರಿಜಮ್ಮ, ಕಾಂII ತಿಪ್ಪಮ್ಮ, ಕಾಂII ಸತ್ಯ ಕೀರ್ತಿ ವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *