ಚಿತ್ರಕಲೆ ಮೂಲಕ ಸಾಧನೆ: ಶೃತಿ ಹೆಗಡೆಗೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ಲಾಘನೆ.

ಚಿತ್ರದುರ್ಗ ಸೆ. 07

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಹೆಣ್ಣು ಮನಸ್ಸು ಮಾಡಿದರೆ ಏನ್ನನಾದರೂ ಯಾವ ವಯಸ್ಸ್‍ನಲ್ಲಿ ಆದರೂ ಸಹಾ ಸಾಧನೆಯನ್ನು ಮಾಡಬಹುದು ಎಂಬುದನ್ನು ಶ್ರೀಮತಿ ಶೃತಿ ಎಸ್ ಹೆಗಡೆಯವರು ಉದಾಹರಣೆಯಾಗಿ ಸಾಧನೆ ಮಾಡಿ ತೋರಿದ್ದಾರೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಅವರ ಸಾಧನೆಯನ್ನು ಪ್ರಶಂಸಿದ್ದಾರೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಧನ ಸಹಾಯದಡಿಯಲ್ಲಿ ನಗರದ ಪತ್ರಿಕಾ ಭವನದ ಬಿ.ವಿ.ವೃಕುಂಠರಾಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನದಲ್ಲಿ ಶ್ರೀಮತಿ ಶೃತಿ ಎಸ್ ಹೆಗಡೆ ಯವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಚಿತ್ರ ಕಲರವವನ್ನು ವೀಕ್ಷಣೆ ಮಾಡಿ ಮಾತನಾಡಿದ ಶ್ರೀಗಳು, ಚಿತ್ರಕಲೆ, ಸಾಹಿತ್ಯ ಮತ್ತು ಸಂಗೀತದಂತಹ ಕಲೆಗಳು ಎಲ್ಲರಿಗೂ ಸಾಧ್ಯವಲ್ಲ. ಅವು ಮನದಾಳದ ಭಾವನೆಗಳಿಗೆ ಭೌತಿಕ ರೂಪ ನೀಡುವ ಮಹತ್ವದ ಕಾರ್ಯವಾಗಿದ್ದು, ಚಿತ್ರಕಲೆ ಎಂದರೆ ಒಂದು ರೀತಿಯ ತಪ್ಪಸ್ಸು ಇದ್ದಂತೆ, ಅಂತರಂಗದ ಭಾವನೆಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿದರೆ ಸಾಹಿತ್ಯ, ಬಣ್ಣಗಳ ಮೂಲಕ ಮೂಡಿಸಿದರೆ ಚಿತ್ರಕಲೆ. ಆದರೆ ಚಿತ್ರಕಲೆ ಕೇವಲ ಭಾವ ಮತ್ತು ಬಣ್ಣಗಳ ಮಿಲನವಲ್ಲ. ಕಲಾವಿದನ ನಂತರವೂ ಆತನ ಕಲಾ ಕೃತಿಗಳು ಆತನನ್ನು ಅಮರನಾಗಿಸುತ್ತೇವೆ. ಕಲೆಗೆ ಕಲಾವಿದರು ಪಡುವ ಪರಿಶ್ರಮ ಹಾಗೂ ಮುಡಿಪಾಗುವ ಪ್ರಕ್ರಿಯೆಯಿಂದಾಗಿ ಅದ್ಬುತ ಕಲಾವಿದರ ಸದಾ ಸ್ಮರಣೆಯರಾಗಿ ಉಳಿಯುತ್ತಾರೆ ಎಂದರು.

ಚಿತ್ರಕಲವರವನ್ನು ವೀಕ್ಷಣೆ ಮಾಡಿದ ಮತ್ತೋರ್ವ ಶ್ರೀಗಳಾದ ಸಿದ್ಧಯ್ಯನಕೋಟೆ ಮಠದ ಪೀಠಾಧಿಪತಿಗಳಾದ ಶ್ರೀ ಬಸವಲಿಂಗ ಶ್ರೀಗಳು ಮಾತನಾಡಿ, ಕಲೆ ಕೇವಲ ಮನರಂಜನೆಯಲ್ಲ. ಅದು ಸಮಾಜದ ಪ್ರತಿಬಿಂಬ ವಾಗಿದ್ದು, ಸಮಾಜಕ್ಕೆ ಸಂದೇಶವನ್ನೂ ನೀಡುತ್ತದೆ. ಬಣ್ಣಗಳ ಮೂಲಕ ಕುಂಚದಲ್ಲಿ ಭಾವನೆಗಳನ್ನು ಮೂಡಿಸು ವುದು ಅತ್ಯಂತ ಸೂಕ್ಷ್ಮ, ಸಂವೇದನಾಶೀಲಾ ಹಾಗೂ ಕ್ರಿಯಾಶೀಲ ಕಾರ್ಯವಾಗಿದೆ. ಕಲೆಗೆ ಬೆಲೆ ಕಟ್ಟಲಾಗದು. ಎಲ್ಲರಿಗೂ ಕಲೆ ಸಿದ್ಧಿಸುವುದಿಲ್ಲ. ಚಿತ್ರಕಲೆಯಲ್ಲಿ ಒಂದೇ ಚಿತ್ರದಲ್ಲಿ ಹಲವು ಅರ್ಥಗಳು ಸ್ಪುರಿಸುತ್ತವೆ. ಬಳಸಿರುವ ಬಣ್ಣಗಳಲ್ಲಿ ಕಲಾವಿದರ ಭಾವನೆಗಳ ಜತೆಗೆ ಸಾಮಾಜಿಕ ಮತ್ತು ಸಾಂಸ್ಕøತಿಕ ಪ್ರಭಾವವು ಅಡಗಿರುತ್ತದೆ. ಒಂದೊಂದು ಚಿತ್ರವೂ ನೂರಾರು ಕಥೆಗಳನ್ನು ಹೇಳುತ್ತವೆ. ಒಂದು ಚಿತ್ರ ಇಡೀ ಸಮಾಜದ ಕಥೆಯಾಗಿ, ಕಲಾವಿದನ ಪರಿಶ್ರಮದಿಂದ ಜನಿಸಿದ ಶಿಶುವಿನಂತಿರುತ್ತದೆ. ಈ ಚಿತ್ರಕಲಾ ಪ್ರದರ್ಶನವೂ ಯುವ ಕಲಾವಿದರಿಗೆ ಪ್ರೇರಣೇ ಮತ್ತು ಸ್ಪೂತಿಯಾಗಲಿ ಶೃತಿ ಹೆಗಡೆಯವರು ಜಿಲ್ಲೆಯ ಉತ್ತಮ ಚಿತ್ರ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಕಲ್ಪನೆಗಳಿಗೆ ಚಿತ್ರದ ರೂಪ ನೀಡುವಲ್ಲಿ ನಿಸ್ಸೀಮರಾಗಿದ್ದಾರೆ ಕಲೆ ಹಾಗೂ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಕಲೆ ಭಾಷಾತೀತವಾಗಿದೆ. ಕಲಾವಿದನಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವಿದ್ದು, ಚಿತ್ರಕಲೆಯನ್ನು ಅನಕ್ಷರಸ್ಥನು ಸಹ ಅದರಲ್ಲಿನ ಭಾವನೆಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಶ್ರೀಗಳು ತಿಳಿಸಿದರು.

ಚಿತ್ರಕಲಾವಿದೆ ಶ್ರೀಮತಿ ಶೃತಿ ಹೆಗಡೆ ಮಾತನಾಡಿ ನಾನು ಹುಟ್ಟು ಕಲಾವಿದೆ ಅಲ್ಲ ಕೇವಲ 3 ರಿಂದ 4 ವರ್ಷದ ಹಿಂದೆ ಚಿತ್ರಕಲೆಯನ್ನು ಬರೆಯಲು ಆರಂಭ ಮಾಡಿದೆ, ಇದಕ್ಕೆ ನನ್ನ ಮನೆಯವರು ತುಂಬಾ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಿದ್ದರ ಪರಿಣಾಮ ಇಂದು ನಾನು ಚಿತ್ರಕಲಾವಿದೆಯಾಗಿ ಈ ರೀತಿಯ ಪ್ರದರ್ಶನವನ್ನು ಮಾಡಲು ಅನುಕೂಲವಾಗಿದೆ. ಆರಂಭದಲ್ಲಿ ನನಗೂ ಸಹಾ ಭಯವಾಯಿತು ನನ್ನಿಂದ ಇದು ಸಾಧ್ಯವಾ ಎಂದು ಆದರೆ ಬರೆಯುತ್ತಾ ಹೋದಾಗ ನನಗೆ ನನ್ನ ಮೇಲೆ ನಂಬಿಕೆ ಬಂತು ಇದ್ದಲ್ಲದೆ ಹಲವಾರು ಚಿತ್ರ ಕಲಾವಿದರು ನನಗೆ ಪ್ರೋತ್ಸಾಹವನ್ನು ನೀಡಿ ನೀವು ಬರೆಯಿರಿ ಆಗುತ್ತದೆ ಎಂದು ದೈರ್ಯವನ್ನು ತುಂಬಿದ ಪರಿಣಾಮ ಇಂದು ಈ ಚಿತ್ರ ಕಲರವ ಪ್ರದರ್ಶನ ಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಬಾಲಚಂದ್ರ ದೀಕ್ಷಿತ್, ವಿದ್ಯಾ ಬಿ.ದಿಕ್ಷೀತ್, ಜಯದೇವ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *