ಚಿತ್ರದುರ್ಗದಲ್ಲಿ ಕ್ವಾರಿ–ಕ್ರಷರ್ ಮಾಲೀಕರ ಅನಿರ್ದಿಷ್ಟಾವಧಿ ಬಂದ್: ಸರ್ಕಾರ ಮಾತುಕತೆಗೆ ಕರೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ.

ಚಿತ್ರದುರ್ಗ ಸೆ. 19

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಾವುಗಳು ಧರಣಿಯನ್ನು ಪ್ರಾರಂಭ ಮಾಡಿ ಎರಡು ದಿನ ಕಳೆದರೂ ಸಹಾ ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ನಮ್ಮ ಸಂಘವನ್ನು ಮಾತುಕಥೆಗೆ ಕರೆದಿಲ್ಲ ಹಿಗೇಯೇ ಮುಂದುವರೆ ನಾವು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಚಿತ್ರದುರ್ಗ ಜಿಲ್ಲಾ ಕ್ವಾರೆ ಮತ್ತು ಕ್ರಷರ್ ಮಾಲಿಕರ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ತಮಟಕಲ್ಲು ಬಳಿ ಇರುವ ತಮ್ಮ ಕ್ರಷರ್ ಮುಂಭಾಗದಲ್ಲಿ ಶನಿವಾರ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ನಡೆಸಿ ಮಾತನಾಡಿದ ಅವರು ಕಳೆದ 18 ರಿಂದ ಕ್ವಾರೆ ಮತ್ತು ಕ್ರಷರ್ ಮಾಲಿಕರು ಮತ್ತು ಸರ್ಕಾರದ ಮಧ್ಯ ತೆರಿಗೆ ಕಟ್ಟುವ ಸಂಬಂಧ ತಿಕ್ಕಾಟ ನಡೆಯುತ್ತಿದೆ. ಸರ್ಕಾರ ಕಂಟ್ರಾಕ್ಟರ್ ಮತ್ತು ಕ್ರಷರ್ ಇಬ್ಬರ ಬಳಿಯೂ ಸರ್ಕಾರ ರಾಯಲ್ಟಿ ಸಂಗ್ರಹಿಸುತ್ತಿದೆ. ಇಂತಹ ದ್ವಿಮುಖ ನೀತಿಯಿಂದ ನಮಗೆ ನಷ್ಟವಾಗುತ್ತಿದೆ. 44 ಎ. ಕಾಯಿದೆಯನ್ನು ಸರ್ಕಾರ ಹಿಂದಕ್ಕೆ ಪಡೆದು ಒಂದೆ ನೀತಿ ಅನುಸರಿಸಲಿ ಆಂಧ್ರ ತಮಿಳುನಾಡಿನಿಂದ ಕರ್ನಾಟಕಕ್ಕೆ ಜೆಲ್ಲಿಗಳು ಬರುತ್ತಿವೆ. ಆದರೆ ಅವರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿ ಯಾಗುತ್ತಿಲ್ಲ. ಸರ್ಕಾರಕ್ಕೆ ಸಂದಾಯವಾಗಬೇಕಾದ ರಾಯಲ್ಟಿ ಎಲ್ಲಾ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ 44 ಎ. ಕಾಯಿದೆಯನ್ನು ಹಿಂದಕ್ಕೆ ಪಡೆದು ನಮ್ಮನ್ನು ಕರೆಸಿ ಕೂಡಲೇ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಬೇಕಿದೆ, ನಮ್ಮ ಪ್ರತಿಭಟನೆಯಿಂದ ರಾಜ್ಯದಲ್ಲಿ ಲಕ್ಷಾಂತರ ಜನತೆ ಮನೆಯನ್ನು ನಿರ್ಮಾಣ ಮಾಡುತ್ತಿರುವವರಿಗೆ ಜಲ್ಲಿ ಹಾಗೂ ಎಂ.ಸಾಂಡಲ್ ಇಲ್ಲದೆ ತೊಂದರೆಯಾಗುತ್ತಿದೆ ಇದರ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ, ಮುಖ್ಯಮಂತ್ರಿ ಇದರ ಬಗ್ಗೆ ಗಮನ ನೀಡದೆ ಮಂಗಳೂರಿನಲ್ಲಿ ಸಚಿವ ಸಂಪುಟದ ಸಭೆಯನ್ನು ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಕಲ್ಲು ಕ್ವಾರಿ, ಕ್ರಷರ್ ಮಾಲೀಕರ ಮುಷ್ಕರ ಶುರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಲೋಕೋ ಪಯೋಗಿ, ಸಾರಿಗೆ ಇಲಾಖೆಗಳು ಪ್ರತ್ಯೇಕವಾಗಿ ರಾಜಧನ ವಸೂಲಿ ಮಾಡುತ್ತಿರುವುದು ಕ್ರಷರ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೇ ಮೂಲ ವಸ್ತುವಿಗೆ (ಕಚ್ಚಾ ಕಲ್ಲು) ಎರಡು ಬೇರೆ ಬೇರೆ ಹಂತಗಳಲ್ಲಿ ದಂಡ ಮತ್ತು ಹೆಚ್ಚಿನ ರಾಜಧನ ವಿಧಿಸುತ್ತಿರು ವುದರಿಂದ ಉದ್ಯಮ ನಡೆಸುವುದು ಕಷ್ಟಕರವಾಗಿದೆ ಎಂದು ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ಈ ಹಿಂದೆ ಸರ್ಕಾರ ನೀಡಿದ್ದ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಬಂದ್ ಕರೆ ನೀಡಲಾಗಿದೆ. ಹಾಗೂ ಖಾಸಗಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‍ಗಳ ಬಂದ್‍ನಿಂದಾಗಿ ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳು ಕಟ್ಟಡ ನಿರ್ಮಾಣಗಳು ಸ್ಥಗಿತಗೊಂಡಿವೆ. ಜಲ್ಲಿ ಕಲ್ಲು ಮತ್ತಿತರ ಪದಾರ್ಥಗಳ ಕೃತಕ ಅಭಾವ ಸೃಷ್ಟಿಯಾಗಿ ಬೆಲೆಗಳು ಶೇ.20 ರಿಂದ ಶೇ.30 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕ್ವಾರಿ ಮತ್ತು ಕ್ರಷರ್ ಘಟಕಗಳ ಬಂದ್‍ನಿಂದ ನಿರ್ಮಾಣ ಕಾಮಗಾರಿಗಳಿಗೆ ಅತ್ಯಗತ್ಯವಾಗಿರುವ ಜಲ್ಲಿ ಕಲ್ಲು ಹಾಗೂ ಎಂ-ಸ್ಯಾಂಡ್ ಪೂರೈಕೆ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ, ಸೇತುವೆ, ವಸತಿ ಕಟ್ಟಡ, ವಾಣಿಜ್ಯ ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಈ ಉತ್ಪನ್ನಗಳು ಪ್ರಮುಖ ಕಚ್ಚಾ ವಸ್ತುಗಳಾಗಿ ರುವುದರಿಂದ ಪೂರೈಕೆ ದೀರ್ಘಕಾಲ ಸ್ಥಗಿತವಾದರೆ ಕಾಮಗಾರಿಗಳ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ರಾಜ್ಯಾದ್ಯಂತ ಜಲ್ಲಿ ಮತ್ತು ಎಂ-ಸ್ಯಾಂಡ್ ಉತ್ಪಾದನೆ ಹಾಗೂ ಪೂರೈಕೆ ಸ್ಥಗಿತಗೊಂಡಿದೆ. ಕೆಎಂಎಂಸಿಆರ್ ನಿಯಮಗಳ ಬಗ್ಗೆಯೂ ಆಕ್ಷೇಪ ಕರ್ನಾಟಕ ಮೈನರ್ ಮಿನರಲ್ ಕನ್ಸೆಷನ್ ರೂಲ್ಸ್ 1-1994ಕ್ಕೆ ಮಾಡಿರುವ ತಿದ್ದುಪಡಿಗಳು ಸಮಸ್ಯೆ ಬಗೆಹರಿಸುವಷ್ಟು ಸಮರ್ಪಕವಾಗಿಲ್ಲ ಎಂದು ಕ್ವಾರಿ -ಕ್ರಷರ್ ಮಾಲೀಕರು ಆಕ್ಷೇಪಿಸಿದ್ದಾರೆ.

ರಾಜಧನ ಸಂಗ್ರಹಕ್ಕೆ ರಾಜ್ಯಾದ್ಯಂತ ಏಕರೂಪ ವ್ಯವಸ್ಥೆ ಜಾರಿಗೆ ತರಬೇಕು, ಸಮೀಕ್ಷೆ ಮತ್ತು ಲೆಕ್ಕಾಚಾರಕ್ಕೆ ಸ್ಪಷ್ಟ ಮಾನದಂಡ ರೂಪಿಸಬೇಕು ಹಾಗೂ ಇದುವರೆಗೆ ಕಲ್ಲು ಗಣಿಗಾರಿಕೆ ವಲಯದಿಂದ ಸಂಗ್ರಹಿಸಿರುವ ರಾಜಧನದ ಕುರಿತು ಶ್ವೇತಪತ್ರ ಪ್ರಕಟಿಸಬೇಕು ಎಂಬ ಬೇಡಿಕೆಗಳನ್ನು ಕಲ್ಲು ಕ್ವಾರಿ, ಕ್ರಷರ್‍ಗಳ ಮಾಲೀಕರು ಸರ್ಕಾರದ ಮುಂದಿಟ್ಟಿದ್ದಾರೆ.

ಮೆದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್, ಕಾರ್ಯದರ್ಶಿ ಜಿ.ಬಿ.ಶೇಖರ್, ಸಂದೀಪ್ ಗುಂಡಾರ್ಪಿ ಅಭಿಷೇಕ್ ಹಾಜರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40

Leave a Reply

Your email address will not be published. Required fields are marked *