ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಚಂದ್ರಪ್ಪ ಆಕ್ರೋಶ: ಸಿಎಂ, ಸಾರಿಗೆ ಸಚಿವರ ರಾಜೀನಾಮೆಗೆ ಆಗ್ರಹ.

ಚಿತ್ರದುರ್ಗ ನ. 5

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕೆಎಸ್‍ಆರ್‍ಟಿಸಿ ಇತಿಹಾಸದಲ್ಲಿಯೇ ಎಂದೂ ಕಾಣದ ರೀತಿಯಲ್ಲಿ ಶೇಕಡಾ 35 ರಿಂದ 40 ರಷ್ಟು ದರವನ್ನು ಹೆಚ್ಚಿಸಲಾಗಿದೆ ಇದರಿಂದ ಮಧ್ಯಮ ಹಾಗೂ ಬಡ ಜನರಿಗೆ ಆನಾನುಕೂಲವಾಗಲಿದೆ ನಾನು ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷನಾಗಿದ್ದಾಗ ಪ್ರಯಾಣಿಕರಿಗೆ ಹೊರೆಯಾಗದಂತೆ ದರವನ್ನು ಏರಿಕೆ ಮಾಡಿಲ್ಲ ಅಲ್ಲದೆ ನೌಕರರ ಕಲ್ಯಾಣ ಮತ್ತು ಪ್ರಯಾಣಿಕರ ಸೌಕರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕಾರ್ಯನಿರ್ವಹಿಸಿರುವುದಾಗಿ ಕೆಎಸ್‍ಆರ್‍ಟಿಸಿ ನಿಗಮದ ಮಾಜಿ ಅಧ್ಯಕ್ಷರು, ಶಾಸಕರಾದ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಸುಮಾರು ಮೂರೂವರೆ ವರ್ಷಗಳ ಕಾಲ ಕೆಎಸ್‍ಆರ್‍ಟಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ, ಕೇವಲ 6 ಕೋಟಿ ರೂಪಾಯಿಗಳಷ್ಟಿದ್ದ ದಿನನಿತ್ಯದ ವರಮಾನವನ್ನು ವ್ಯವಸ್ಥಿತ ಕ್ರಮಗಳ ಮೂಲಕ ಪ್ರತಿದಿನವೂ ಸುಮಾರು 13 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಕೋವಿಡ್ ಸಾಂಕ್ರಾಮಿಕದಂತಹ ಕಷ್ಟದ ಸಂದರ್ಭದಲ್ಲೂ ಪ್ರಯಾಣಿಕರಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಿಸಿ ಹೊರೆ ಮಾಡಲಿಲ್ಲ. ಬದಲಾಗಿ, ನಷ್ಟವಾಗುತ್ತಿದ್ದ ಮಾರ್ಗಗಳನ್ನು ಸರಿಪಡಿಸಿ ಹಾಗೂ ಸೋರಿಕೆಯನ್ನು ತಡೆಗಟ್ಟಿ ನಿಗಮಕ್ಕೆ ನಿತ್ಯವೂ ಅಧಿಕ ಆದಾಯ ಬರುವಂತೆ ಕ್ರಮ ಕೈಗೊಳ್ಳಲಾಯಿತು. ತಮಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನವಿದ್ದರೂ, ಯಾವುದೇ ಸೌಲಭ್ಯವನ್ನು ಪಡೆಯದೇ ಪ್ರತಿ ತಿಂಗಳ 1 ನೇ ತಾರೀಕಿನಂದು ತಪ್ಪದೆ ನೌಕರರಿಗೆ ವೇತನ ಹಾಗೂ ಭತ್ಯೆಗಳು ದೊರೆಯುವಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿತ್ತು.

ಕರ್ತವ್ಯದಲ್ಲಿದ್ದಾಗ ಮೃತಪಡುವ ನೌಕರರ ಕುಟುಂಬಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಮೆ ಮಾಡಿಸುವುದರ ಜೊತೆಗೆ, ನಿಗಮದ ವತಿಯಿಂದಲೂ ಲಕ್ಷಾಂತರ ರೂಪಾಯಿಗಳ ಪರಿಹಾರ ಧನವನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಯಿತು.

ಪ್ರೀಮಿಯಂ ಹಣವನ್ನು ಕಟ್ಟಲಾಗದ ಸಂಕಷ್ಟದಲ್ಲೂ ನಿಗಮವೇ ಆ ಜವಾಬ್ದಾರಿಯನ್ನು ಹೊತ್ತುಕೊಂಡು ನೌಕರರಿಗೆ ಆಸರೆಯಾಯಿತು. ಬಸ್‍ಗಳ ನಿರ್ವಹಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವೋಲ್ವೋ, ಪವರ್ À್ಲಸ್ ಮತ್ತು ಲೈಲ್ಯಾಂಡ್ ಸೇರಿದಂತೆ ಅತ್ಯುತ್ತಮ ಗುಣಮಟ್ಟದ ಹೊಸ ಬಸ್‍ಗಳನ್ನು ಖರೀದಿಸಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಕಠಿಣ ಆರ್ಥಿಕ ಸವಾಲುಗಳು ಮತ್ತು ಕೋವಿಡ್‍ನಂತಹ ಸನ್ನಿವೇಶಗಳ ನಡುವೆಯೂ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಿಗಮದಲ್ಲಿ ಯಾವುದೇ ಸೋರಿಕೆಗೆ ಅವಕಾಶ ನೀಡದೆ ಪಾರದರ್ಶಕ ಆಡಳಿತ ನಡೆಸಿದ್ದರ ಫಲವಾಗಿ ಅಂದು ಕೆಎಸ್‍ಆರ್‍ಟಿಸಿಯನ್ನು ಲಾಭದಾಯಕ ಹಾದಿಗೆ ಕೊಂಡೊಯ್ಯಲು ಸಾಧ್ಯವಾಯಿತು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಸರ್ಕಾರದ ನೀತಿಯಿಂದಾಗಿ ನಿಗಮಕ್ಕೆ ತೀವ್ರ ನಷ್ಟ ಉಂಟಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳು ಮಹಿಳೆಯರ ಉಚಿತ ಪ್ರಯಾಣದ ಬಾಕಿ ಹಣವನ್ನು ಸರ್ಕಾರದಿಂದ ಸಂಪೂರ್ಣವಾಗಿ ಪಡೆಯದೆ ಸಂಕಷ್ಟ ಎದುರಿಸುತ್ತಿವೆ. ಗ್ರಾಹಕರಿಂದ (ಪುರುಷ ಪ್ರಯಾಣಿಕರಿಂದ) ಬರುವ ಶೇಕಡಾ 30 ರಿಂದ 35 ರಷ್ಟು ಆದಾಯವನ್ನು ಮಹಿಳೆಯರ ಪ್ರಯಾಣದ ಬಾಕಿ ಹಣಕ್ಕೆ ಸರಿದೂಗಿಸಲು ಬಳಸಲಾಗುತ್ತಿದ್ದು, ಇದರಿಂದ ಕೆಎಸ್‍ಆರ್‍ಟಿಸಿಗೆ ತೀವ್ರ ನಷ್ಟವಾಗುತ್ತಿದೆ ತಮ್ಮ ಆಡಳಿತಾವಧಿಯಲ್ಲಿ ಆಯಿಲ್ ಅಥವಾ ಇಂಧನ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುವುದು ಮತ್ತು ಬಸ್‍ಗಳ ಕಾರ್ಯಾಚರಣೆಯನ್ನು ಸರಾಗವಾಗಿ ನಡೆಸಿಕೊಂಡು ಬರಲಾಗುತ್ತಿ, ಶ್ರೀಮಂತರು ಅಥವಾ ಉದ್ಯಮಿಗಳು ಸ್ವಂತ ವಾಹನಗಳಲ್ಲಿ ಓಡಾಡುತ್ತಾರೆ, ಆದರೆ ಬಸ್‍ಗಳನ್ನು ಅವಲಂಬಿಸಿರುವವರು ಬಡವರು ಹಾಗೂ ಮಧ್ಯಮ ವರ್ಗದವರಾಗಿದ್ದಾರೆ. ಹೀಗಾಗಿ ಬಡವರ ಮೇಲಿನ ಈ ದರ ಏರಿಕೆಯ ಹೊರೆ ಸರಿಯಲ್ಲ ಎಂದರು.

ಸರ್ಕಾರದ ಬಳಿ ಡೀಸೆಲ್ ಹಾಕಲು ಹಣವಿಲ್ಲ, ಯಾವುದೇ ಅಭಿವೃದ್ಧಿ ಕೆಲಸಗಳಿಗೂ ಹಣವಿಲ್ಲ. ಹಾಗಾಗಿ ಮಧ್ಯಮ ವರ್ಗ ಹಾಗೂ ಬಡವರ ಮೇಲೆ ಗದಪ್ರಹಾರ ಮಾಡಿ ಶೇಕಡಾ 35 ರಿಂದ 40 ರಷ್ಟು ಹೆಚ್ಚುವರಿ ಭಾರ ಹೊರೆಸಲಾಗಿದೆ. ಬಡವರಿಗೆ ಅನ್ಯಾಯ ಮಾಡುತ್ತಿರುವ ಈ ಸರ್ಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂದು ಕಿಡಿಕಾರಿ, ಬಸ್ ದರ ಏರಿಕೆ ನಿರ್ಧಾರದ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಿ, ಸಾರ್ವಜನಿಕರ ಕ್ಷಮೆ ಕೋರಿ ಜನತೆಯ ಮುಂದೆ ಹೋಗಬೇಕು ಎಂದು ಆಗ್ರಹಿಸಿದರು.

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಕೆಎಸ್‍ಆರ್‍ಟಿಸಿ ನಿಗಮವು ತೀವ್ರ ನಷ್ಟ ಅನುಭವಿಸುತ್ತಿದ್ದು, ಸರ್ಕಾರವು ತಕ್ಷಣವೇ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಈ ಜನವಿರೋಧಿ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಕೇಂದ್ರ ಹಾಗೂ ತಾಲೂಕು ಮಟ್ಟದಲ್ಲಿ ದೊಡ್ಡ ಮಟ್ಟದ ಉಗ್ರ ಹೋರಾಟವನ್ನು ನಡೆಸಿ ಸಾರ್ವಜನಿಕರಿಂದ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *