ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷಾ ದಿನಾಂಕಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಮುಂದಿನ ಸಿದ್ಧತೆಗಳನ್ನು ಮತ್ತು ಅಧ್ಯಯನ ಯೋಜನೆಗಳನ್ನು ರೂಪಿಸಿಕೊಳ್ಳಲು ಈ ವೇಳಾಪಟ್ಟಿ ಅನುಕೂಲ ಮಾಡಿಕೊಟ್ಟಿದೆ.
ಪರೀಕ್ಷೆಯ ಪ್ರಮುಖ ಅಂಶಗಳು:
- ದ್ವಿತೀಯ ಪಿಯುಸಿ ಪರೀಕ್ಷೆಗಳು: 2027 ರ ಫೆಬ್ರವರಿ 27 ರಿಂದ ಆರಂಭವಾಗಿ ಮಾರ್ಚ್ 17 ರವರೆಗೆ ನಡೆಯಲಿವೆ.
- ಎಸ್ಎಸ್ಎಲ್ಸಿ ಪರೀಕ್ಷೆಗಳು: 2027 ರ ಮಾರ್ಚ್ 22 ರಿಂದ ಏಪ್ರಿಲ್ 5 ರವರೆಗೆ ಜರುಗಲಿವೆ.
- ಪರೀಕ್ಷಾ ಸಮಯ: ಬಹುತೇಕ ಎಲ್ಲಾ ಮುಖ್ಯ ವಿಷಯಗಳ ಪರೀಕ್ಷೆಗಳು ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗುತ್ತವೆ.
- ಹೆಚ್ಚುವರಿ ಸಮಯ: ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಹೆಚ್ಚುವರಿ ಕಾಲಾವಕಾಶವನ್ನು ನೀಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ – 1 ರ ವೇಳಾಪಟ್ಟಿ (2027)
| ದಿನಾಂಕ | ವಾರ | ವಿಷಯಗಳು | ಪರೀಕ್ಷಾ ಸಮಯ |
|---|---|---|---|
| 27/02/2027 | ಶನಿವಾರ | ಕನ್ನಡ, ಅರೇಬಿಕ್ | ಬೆ. 10:00 ರಿಂದ ಮ. 1:00 |
| 01/03/2027 | ಸೋಮವಾರ | ಇಂಗ್ಲಿಷ್ | ಬೆ. 10:00 ರಿಂದ ಮ. 1:00 |
| 02/03/2027 | ಮಂಗಳವಾರ | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ | ಬೆ. 10:00 ರಿಂದ ಮ. 1:00 |
| 03/03/2027 | ಬುಧವಾರ | ಭೂಗೋಳ ಶಾಸ್ತ್ರ, ಮನಃಶಾಸ್ತ್ರ | ಬೆ. 10:00 ರಿಂದ ಮ. 1:00 |
| 04/03/2027 | ಗುರುವಾರ | ಸಮಾಜಶಾಸ್ತ್ರ, ಭೌತಶಾಸ್ತ್ರ | ಬೆ. 10:00 ರಿಂದ ಮ. 1:00 |
| 05/03/2027 | ಶುಕ್ರವಾರ | ಲೆಕ್ಕಶಾಸ್ತ್ರ | ಬೆ. 10:00 ರಿಂದ ಮ. 1:00 |
| 08/03/2027 | ಸೋಮವಾರ | ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ | ಬೆ. 10:00 ರಿಂದ ಮ. 1:00 |
| 09/03/2027 | ಮಂಗಳವಾರ | ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ | ಬೆ. 10:00 ರಿಂದ ಮ. 1:00 |
| 11/03/2027 | ಗುರುವಾರ | ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ & ಯಂತ್ರಾಂಶ, ಉಡುಪುಗಳ ತಯಾರಿಕೆ, ಐಟಿ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಆಂಡ್ ವೆಲ್ನೆಸ್ | ಬೆ. 10:00 ರಿಂದ ಮ. 12:15 |
| 12/03/2027 | ಶುಕ್ರವಾರ | ವ್ಯವಹಾರ ಅಧ್ಯಯನ, ಗಣಿತ | ಬೆ. 10:00 ರಿಂದ ಮ. 1:00 |
| 13/03/2027 | ಶನಿವಾರ | ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ | ಬೆ. 10:00 ರಿಂದ ಮ. 1:00 |
| 15/03/2027 | ಸೋಮವಾರ | ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ | ಬೆ. 10:00 ರಿಂದ ಮ. 1:00 |
| 16/03/2027 | ಮಂಗಳವಾರ | ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ | ಬೆ. 10:00 ರಿಂದ ಮ. 1:00 |
| 17/03/2027 | ಬುಧವಾರ | ಹಿಂದಿ | ಬೆ. 10:00 ರಿಂದ ಮ. 1:00 |
ಎಸ್ಎಸ್ಎಲ್ಸಿ ಪರೀಕ್ಷೆ – 1 ರ ವೇಳಾಪಟ್ಟಿ (2027)
| ದಿನಾಂಕ | ವಾರ | ವಿಷಯಗಳು | ಪರೀಕ್ಷಾ ಸಮಯ |
|---|---|---|---|
| 22.03.2027 | ಸೋಮವಾರ | ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ | ಬೆ. 10:00 ರಿಂದ ಮ. 1:15 |
| 25.03.2027 | ಗುರುವಾರ | ಕೋರ್ ಸಬ್ಜೆಕ್ಟ್: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ | ಬೆ. 10:00 ರಿಂದ ಮ. 1:15 |
| 27.03.2027 | ಶನಿವಾರ | ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ | ಬೆ. 10:00 ರಿಂದ ಮ. 1:00 |
| 30.03.2027 | ಮಂಗಳವಾರ | ಕೋರ್ ಸಬ್ಜೆಕ್ಟ್: ಗಣಿತ, ಸಮಾಜಶಾಸ್ತ್ರ | ಬೆ. 10:00 ರಿಂದ ಮ. 1:15 |
| 02.04.2027 | ಶುಕ್ರವಾರ | ತೃತೀಯ ಭಾಷೆ: ಹಿಂದಿ (NCERT), ಹಿಂದಿ, ಕನ್ನಡ (ಪುನರಾವರ್ತಿತರಿಗೆ), ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ | ಬೆ. 10:00 ರಿಂದ ಮ. 1:00 |
| 03.04.2027 | ಶನಿವಾರ | ಜೆ.ಟಿ.ಎಸ್. ವಿಷಯಗಳು: ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್, ಮೆಕ್ಯಾನಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI ‘C’, ಅರ್ಥಶಾಸ್ತ್ರ | ಬೆ. 10:00 ರಿಂದ ಮ. 1:15 |
| 05.04.2027 | ಸೋಮವಾರ | ಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನ | ಬೆ. 10:00 ರಿಂದ ಮ. 1:15 |