2027ರ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷಾ ದಿನಾಂಕಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಮುಂದಿನ ಸಿದ್ಧತೆಗಳನ್ನು ಮತ್ತು ಅಧ್ಯಯನ ಯೋಜನೆಗಳನ್ನು ರೂಪಿಸಿಕೊಳ್ಳಲು ಈ ವೇಳಾಪಟ್ಟಿ ಅನುಕೂಲ ಮಾಡಿಕೊಟ್ಟಿದೆ.

ಪರೀಕ್ಷೆಯ ಪ್ರಮುಖ ಅಂಶಗಳು:

  • ದ್ವಿತೀಯ ಪಿಯುಸಿ ಪರೀಕ್ಷೆಗಳು: 2027 ರ ಫೆಬ್ರವರಿ 27 ರಿಂದ ಆರಂಭವಾಗಿ ಮಾರ್ಚ್ 17 ರವರೆಗೆ ನಡೆಯಲಿವೆ.
  • ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು: 2027 ರ ಮಾರ್ಚ್ 22 ರಿಂದ ಏಪ್ರಿಲ್ 5 ರವರೆಗೆ ಜರುಗಲಿವೆ.
  • ಪರೀಕ್ಷಾ ಸಮಯ: ಬಹುತೇಕ ಎಲ್ಲಾ ಮುಖ್ಯ ವಿಷಯಗಳ ಪರೀಕ್ಷೆಗಳು ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗುತ್ತವೆ.
  • ಹೆಚ್ಚುವರಿ ಸಮಯ: ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಹೆಚ್ಚುವರಿ ಕಾಲಾವಕಾಶವನ್ನು ನೀಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ – 1 ರ ವೇಳಾಪಟ್ಟಿ (2027)

ದಿನಾಂಕವಾರವಿಷಯಗಳುಪರೀಕ್ಷಾ ಸಮಯ
27/02/2027ಶನಿವಾರಕನ್ನಡ, ಅರೇಬಿಕ್ಬೆ. 10:00 ರಿಂದ ಮ. 1:00
01/03/2027ಸೋಮವಾರಇಂಗ್ಲಿಷ್ಬೆ. 10:00 ರಿಂದ ಮ. 1:00
02/03/2027ಮಂಗಳವಾರತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ಬೆ. 10:00 ರಿಂದ ಮ. 1:00
03/03/2027ಬುಧವಾರಭೂಗೋಳ ಶಾಸ್ತ್ರ, ಮನಃಶಾಸ್ತ್ರಬೆ. 10:00 ರಿಂದ ಮ. 1:00
04/03/2027ಗುರುವಾರಸಮಾಜಶಾಸ್ತ್ರ, ಭೌತಶಾಸ್ತ್ರಬೆ. 10:00 ರಿಂದ ಮ. 1:00
05/03/2027ಶುಕ್ರವಾರಲೆಕ್ಕಶಾಸ್ತ್ರಬೆ. 10:00 ರಿಂದ ಮ. 1:00
08/03/2027ಸೋಮವಾರರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತಬೆ. 10:00 ರಿಂದ ಮ. 1:00
09/03/2027ಮಂಗಳವಾರಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರಬೆ. 10:00 ರಿಂದ ಮ. 1:00
11/03/2027ಗುರುವಾರಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ & ಯಂತ್ರಾಂಶ, ಉಡುಪುಗಳ ತಯಾರಿಕೆ, ಐಟಿ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಆಂಡ್ ವೆಲ್‌ನೆಸ್ಬೆ. 10:00 ರಿಂದ ಮ. 12:15
12/03/2027ಶುಕ್ರವಾರವ್ಯವಹಾರ ಅಧ್ಯಯನ, ಗಣಿತಬೆ. 10:00 ರಿಂದ ಮ. 1:00
13/03/2027ಶನಿವಾರಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನಬೆ. 10:00 ರಿಂದ ಮ. 1:00
15/03/2027ಸೋಮವಾರರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರಬೆ. 10:00 ರಿಂದ ಮ. 1:00
16/03/2027ಮಂಗಳವಾರಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರಬೆ. 10:00 ರಿಂದ ಮ. 1:00
17/03/2027ಬುಧವಾರಹಿಂದಿಬೆ. 10:00 ರಿಂದ ಮ. 1:00

ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1 ರ ವೇಳಾಪಟ್ಟಿ (2027)

ದಿನಾಂಕವಾರವಿಷಯಗಳುಪರೀಕ್ಷಾ ಸಮಯ
22.03.2027ಸೋಮವಾರಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತಬೆ. 10:00 ರಿಂದ ಮ. 1:15
25.03.2027ಗುರುವಾರಕೋರ್ ಸಬ್ಜೆಕ್ಟ್: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತಬೆ. 10:00 ರಿಂದ ಮ. 1:15
27.03.2027ಶನಿವಾರದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡಬೆ. 10:00 ರಿಂದ ಮ. 1:00
30.03.2027ಮಂಗಳವಾರಕೋರ್ ಸಬ್ಜೆಕ್ಟ್: ಗಣಿತ, ಸಮಾಜಶಾಸ್ತ್ರಬೆ. 10:00 ರಿಂದ ಮ. 1:15
02.04.2027ಶುಕ್ರವಾರತೃತೀಯ ಭಾಷೆ: ಹಿಂದಿ (NCERT), ಹಿಂದಿ, ಕನ್ನಡ (ಪುನರಾವರ್ತಿತರಿಗೆ), ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿಬೆ. 10:00 ರಿಂದ ಮ. 1:00
03.04.2027ಶನಿವಾರಜೆ.ಟಿ.ಎಸ್. ವಿಷಯಗಳು: ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್, ಮೆಕ್ಯಾನಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI ‘C’, ಅರ್ಥಶಾಸ್ತ್ರಬೆ. 10:00 ರಿಂದ ಮ. 1:15
05.04.2027ಸೋಮವಾರಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನಬೆ. 10:00 ರಿಂದ ಮ. 1:15

Leave a Reply

Your email address will not be published. Required fields are marked *