ವಿಶ್ವಾದ್ಯಂತ ಭುಗಿಲೆದ್ದ ಜನಾಕ್ರೋಶ: ಬೆಲೆ ಏರಿಕೆ, ಶಿಕ್ಷಣ ವ್ಯವಸ್ಥೆ ವಿರುದ್ಧ ಯುರೋಪ್ ಸೇರಿ ಹಲವೆಡೆ ಬೃಹತ್ ಪ್ರತಿಭಟನೆ.

ಅ, 19: ಇತ್ತೀಚಿನ ದಿನಗಳಲ್ಲಿ ಸರ್ಕಾರ ಹಾಗೂ ವ್ಯವಸ್ಥೆಗಳ ವಿರುದ್ಧ ಜನಾಂದೋಲನಗಳು ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿವೆ. ಕೇವಲ ಶ್ರೀಲಂಕಾ, ಬಾಂಗ್ಲಾದೇಶವಷ್ಟೇ ಅಲ್ಲದೆ, ಪ್ರಸ್ತುತ ಯುರೋಪ್, ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಹಣದುಬ್ಬರ, ದುಬಾರಿ ಜೀವನ ವೆಚ್ಚ ಹಾಗೂ ಶಿಕ್ಷಣ ನಿರ್ಲಕ್ಷ್ಯವನ್ನು ಖಂಡಿಸಿ ಜನರು ಬೀದಿಗಿಳಿದಿದ್ದಾರೆ. ವಿಶೇಷವಾಗಿ ಹಲವು ದೇಶಗಳಲ್ಲಿ ವಿದ್ಯಾರ್ಥಿ ಸಮುದಾಯವೇ ಈ ಪ್ರತಿಭಟನೆಗಳ ನೇತೃತ್ವ ವಹಿಸಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ. ವಿಶ್ವಾದ್ಯಂತ ನಡೆಯುತ್ತಿರುವ ಪ್ರಮುಖ ಪ್ರತಿಭಟನೆಗಳ ಸಮಗ್ರ ವರದಿ ಇಲ್ಲಿದೆ:

ಫ್ರಾನ್ಸ್: ಐತಿಹಾಸಿಕ ಟೌನ್ ಹಾಲ್‌ಗೆ ಬೆಂಕಿ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹೆಚ್ಚಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರಂಭಿಸಿದ ಪ್ರತಿಭಟನೆ, ಇದೀಗ ಹಣದುಬ್ಬರದ ವಿರುದ್ಧದ ಬೃಹತ್ ಹಿಂಸಾಚಾರವಾಗಿ ಮಾರ್ಪಟ್ಟಿದೆ. ಪ್ಯಾರಿಸ್‌ನಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಹಳೆಯ ಐತಿಹಾಸಿಕ ಟೌನ್ ಹಾಲ್ ಕಟ್ಟಡಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಸರ್ಕಾರದ ಮಾಹಿತಿಯಂತೆಯೇ ಸುಮಾರು ಐದೂವರೆ ಲಕ್ಷಕ್ಕೂ ಹೆಚ್ಚು ಜನರು ಫ್ರಾನ್ಸ್‌ನಾದ್ಯಂತ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಲ್ಜಿಯಂ: ಶುಲ್ಕ ಪಾವತಿಸಲು ವಿದ್ಯಾರ್ಥಿಗಳ ನಕಾರ ಯುರೋಪ್‌ನ ಶ್ರೀಮಂತ ರಾಷ್ಟ್ರವಾದ ಬೆಲ್ಜಿಯಂನಲ್ಲೂ ಬೆಲೆ ಏರಿಕೆ ಬಿಸಿ ತಟ್ಟಿದೆ. ವಿಶ್ವವಿದ್ಯಾಲಯಗಳ ದುಬಾರಿ ನೋಂದಣಿ ಶುಲ್ಕ ಪಾವತಿಸಲು ನಿರಾಕರಿಸಿದ ವಿದ್ಯಾರ್ಥಿಗಳು ಮೊದಲಿಗೆ ಪ್ರತಿಭಟನೆ ಆರಂಭಿಸಿದರು. ತದನಂತರ ಹಣದುಬ್ಬರದಿಂದ ಕಂಗೆಟ್ಟ ಜನಸಾಮಾನ್ಯರೂ ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.

ಪೋರ್ಚುಗಲ್ ಮತ್ತು ಇಟಲಿ: ವೇತನ-ವಸತಿಗಾಗಿ ಆಗ್ರಹ ಪೋರ್ಚುಗಲ್‌ನಲ್ಲಿ ಗಗನಕ್ಕೇರುತ್ತಿರುವ ಜೀವನ ವೆಚ್ಚ, ದುಬಾರಿ ಮನೆ ಬಾಡಿಗೆ ಹಾಗೂ ಕಡಿಮೆ ವೇತನವನ್ನು ಖಂಡಿಸಿ ಜನರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವಂತ ಮನೆ ಹೊಂದುವುದು ಅಸಾಧ್ಯವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇತ್ತ ಇಟಲಿಯಲ್ಲೂ ಸಹ ಕಾರ್ಮಿಕರು ವೇತನ ಪರಿಷ್ಕರಣೆ ಕೊರತೆ ಹಾಗೂ ಏರುತ್ತಿರುವ ಹಣದುಬ್ಬರದ ವಿರುದ್ಧ ಮುಷ್ಕರ ಹೂಡಿದ್ದಾರೆ.

ಆಲ್ಬೇನಿಯಾ ಮತ್ತು ಟರ್ಕಿ: ಉದ್ಯೋಗ, ಪಿಂಚಣಿಗಾಗಿ ಹೋರಾಟ ಆಲ್ಬೇನಿಯಾದಲ್ಲಿ ಮೂಲಸೌಕರ್ಯವಿಲ್ಲದ ವಿಶ್ವವಿದ್ಯಾಲಯಗಳು, ದುಬಾರಿ ಶಿಕ್ಷಣ, ಆರ್ಥಿಕ ನೆರವಿನ ಕೊರತೆ ಹಾಗೂ ಪದವಿ ನಂತರ ಉದ್ಯೋಗ ಸಿಗದಿರುವ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೆಲವೆಡೆ ಹಿಂಸಾಚಾರವೂ ನಡೆದಿದೆ. ಮತ್ತೊಂದೆಡೆ ಟರ್ಕಿಯಲ್ಲಿ ಜೀವನ ವೆಚ್ಚಕ್ಕೆ ತಕ್ಕಂತೆ ಸೂಕ್ತ ಪಿಂಚಣಿ ಸಿಗುತ್ತಿಲ್ಲ ಎಂದು ಆರೋಪಿಸಿ ನಿವೃತ್ತ ನೌಕರರು ಹಾಗೂ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಇಳಿದಿವೆ.

ಅಮೆರಿಕ ಮತ್ತು ಅರ್ಜೆಂಟೀನಾ: ಸರ್ಕಾರದ ನೀತಿಗಳ ವಿರುದ್ಧ ಜನಾಕ್ರೋಶ ಅಮೆರಿಕದಲ್ಲಿ ನೂತನ ಸರ್ಕಾರದ ಟ್ಯಾರಿಫ್ (ಸುಂಕ) ನೀತಿಗಳನ್ನು ವಿರೋಧಿಸಿ ‘ನೋ ಕಿಂಗ್ಸ್’ ನೆಟ್‌ವರ್ಕ್ ವತಿಯಿಂದ ದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತ ದಕ್ಷಿಣ ಅಮೆರಿಕದ ಅರ್ಜೆಂಟೀನಾದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ಕಾರ್ಮಿಕರು ಒಗ್ಗೂಡಿ ಬೃಹತ್ ಮುಷ್ಕರ ನಡೆಸುತ್ತಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *