ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಪ್ರವೇಶ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಹಾಗೂ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಕೆಇಎ ನಡೆಸುವ ಯಾವುದೇ ಪರೀಕ್ಷೆಗಳಿಗೆ ಪದೇ ಪದೇ ಅರ್ಜಿ ತುಂಬುವ ಅಥವಾ ದಾಖಲೆಗಳನ್ನು ಅಪ್ಲೋಡ್ ಮಾಡುವ ಅಗತ್ಯವಿಲ್ಲ. ಬದಲಾಗಿ ಸುಧಾರಿತ ‘ಒನ್ ಟೈಮ್ ರಿಜಿಸ್ಟ್ರೇಷನ್’ (One Time Registration – OTR) ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಾಧಿಕಾರ ಸಜ್ಜಾಗಿದೆ.
ಸಿಇಟಿ (CET), ಸ್ನಾತಕೋತ್ತರ ಪದವಿ (PG) ಪ್ರವೇಶಾತಿ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಿಗೆ ಪ್ರತಿ ಬಾರಿಯೂ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳನ್ನು ನೀಡಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾದ ಅನಿವಾರ್ಯತೆ ಇತ್ತು. ಈ ಹಳೆಯ ಪದ್ಧತಿಗೆ ಮುಕ್ತಿ ಹಾಡಲು ಕೆಇಎ ಆಧಾರ್ ಆಧಾರಿತ ಒಂದೇ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.


ಹೇಗೆ ಕೆಲಸ ಮಾಡಲಿದೆ ಈ ಹೊಸ OTR ವ್ಯವಸ್ಥೆ? ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳು ಒಮ್ಮೆ ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಿಕೊಂಡರೆ ಸಾಕು. ಆಗ ಪ್ರತಿಯೊಬ್ಬ ಅಭ್ಯರ್ಥಿಗೂ ಒಂದು ‘ಯೂನಿಕ್ ನಂಬರ್’ (Unique Number) ಸೃಷ್ಟಿಯಾಗುತ್ತದೆ. ಇದರಲ್ಲಿ ಅಭ್ಯರ್ಥಿಯ ಎಲ್ಲಾ ಶೈಕ್ಷಣಿಕ ಹಾಗೂ ವೈಯಕ್ತಿಕ ದಾಖಲೆಗಳು ಸೇರ್ಪಡೆಯಾಗಿ ಒಂದು ಶಾಶ್ವತ ಪ್ರೊಫೈಲ್ (Permanent Profile) ಕ್ರಿಯೇಟ್ ಆಗುತ್ತದೆ.
ಹೊಸ ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು:
- ಅರ್ಜಿ ಸಲ್ಲಿಕೆ ಅತ್ಯಂತ ಸರಳ: ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷೆಗೆ ಅರ್ಜಿ ಕರೆಯಲಿ, ಅಭ್ಯರ್ಥಿಗಳು ಕೇವಲ ತಮ್ಮ ಆಧಾರ್ ಸಂಖ್ಯೆ, ಯೂನಿಕ್ ನಂಬರ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ ನೇರವಾಗಿ ಅರ್ಜಿ ಸಲ್ಲಿಸಬಹುದು.
- ದಾಖಲೆಗಳ ಮರು-ಅಪ್ಲೋಡ್ ಕಿರಿಕಿರಿ ಇಲ್ಲ: ಒಮ್ಮೆ ಪ್ರೊಫೈಲ್ನಲ್ಲಿ ಅಪ್ಲೋಡ್ ಮಾಡಿದ ದಾಖಲೆಗಳು ಶಾಶ್ವತವಾಗಿ ಸೇವ್ ಆಗಿರುತ್ತವೆ. ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಹಾಗೂ ಸೀಟು ಹಂಚಿಕೆಯ ಕೌನ್ಸೆಲಿಂಗ್ ಪ್ರಕ್ರಿಯೆಗೂ ಇದೇ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ.
- ಸಮಯದ ಉಳಿತಾಯ: ಪ್ರತಿ ಬಾರಿಯೂ ತಂದೆ-ತಾಯಿಯ ಹೆಸರು, ವಿಳಾಸ, ಅಂಕಗಳ ವಿವರಗಳನ್ನು ಮತ್ತೆ ಮತ್ತೆ ಟೈಪ್ ಮಾಡುವ ಶ್ರಮ ಹಾಗೂ ಸಮಯ ಉಳಿಯುತ್ತದೆ.
ನಕಲಿ ಅರ್ಜಿ ಹಾಗೂ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಈ ನೂತನ ತಂತ್ರಜ್ಞಾನದ ಅತಿ ದೊಡ್ಡ ಲಾಭವೆಂದರೆ ಪಾರದರ್ಶಕತೆ. ಆಧಾರ್ ಆಧಾರಿತ ವ್ಯವಸ್ಥೆ ಇರುವುದರಿಂದ ಒಬ್ಬನೇ ಅಭ್ಯರ್ಥಿ ನಕಲಿ ಹೆಸರುಗಳಲ್ಲಿ ಅಥವಾ ಬೇರೆ ಬೇರೆ ದಾಖಲೆಗಳನ್ನು ಸೃಷ್ಟಿಸಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ಇಂತಹ ನಕಲಿ ಅರ್ಜಿಗಳನ್ನು ಸಿಸ್ಟಮ್ ತಾನಾಗಿಯೇ ಪತ್ತೆಹಚ್ಚಿ ರಿಜೆಕ್ಟ್ ಮಾಡುತ್ತದೆ. ಇದರಿಂದ ಪರೀಕ್ಷಾ ಅಕ್ರಮಗಳಿಗೆ ಪರಿಣಾಮಕಾರಿಯಾಗಿ ಬ್ರೇಕ್ ಬೀಳಲಿದೆ.
ಮುಂಬರುವ ಸಿಇಟಿಯಿಂದಲೇ ಆರಂಭ ಮುಂಬರುವ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಅರ್ಜಿ ಪ್ರಕ್ರಿಯೆಯಿಂದಲೇ ಈ ‘ಒನ್ ಟೈಮ್ ರಿಜಿಸ್ಟ್ರೇಷನ್’ ವ್ಯವಸ್ಥೆಯನ್ನು ಜಾರಿಗೆ ತರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭರದಿಂದ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅತ್ಯಂತ ಸುಲಭ ಮತ್ತು ಪಾರದರ್ಶಕ ಸೇವೆ ಒದಗಿಸಲು ಕೆಇಎ ಮುಂದಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು