ಕಾರ್ಯಕರ್ತರ ಶ್ರಮದಿಂದ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಗೆಲುವು: ಕೆ.ಎಂ. ಸುರೇಶ್.

2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ: ಎಂಎಲ್‌ಸಿ ಕೆ.ಎಂ. ಸುರೇಶ್ ವಿಶ್ವಾಸ.

ಚಿತ್ರದುರ್ಗ ಅ. 30

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಆಗ್ನೇಯ ವಿಧಾನ ಪರಿಷತ್ ಚುನಾವಣೆಯ ಗೆಲುವು ಕಾರ್ಯಕರ್ತರ ಶ್ರಮ ಮತ್ತು ಶಿಸ್ತಿನಿಂದ ಸಾಧ್ಯವಾಗಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ದೃಢ ವಿಶ್ವಾಸವನ್ನು ವಿಧಾನ ಪರಿಷತ್ ಸದಸ್ಯರಾದ ಕೆ.ಎಂ. ಸುರೇಶ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಮೇಲೆ ಪ್ರಥಮ ಬಾರಿಗೆ ಚಿತ್ರದುರ್ಗ ಬಿಜೆಪಿ ಕಚೇರಿಗೆ ಶುಕ್ರವಾರ ಆಗಮಿಸಿದಾಗ ಅವರನ್ನು ಜಿಲ್ಲಾ ಸಮಿತಿಯವತಿಯಿಂದ ನೀಡಿದ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಅವರು, ಕಾರ್ಯಕರ್ತರ ಪರಿಶ್ರಮ ಮತ್ತು ಶಿಸ್ತಿನ ಕಾರ್ಯಕರ್ತರ ಪರಿಶ್ರಮದಿಂದ ಇವತ್ತು ಗೆದ್ದಿದ್ದೇವೆ. ನಾನು ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಗಮನ ಏನು ತರಬೇಕೋ ಅದನ್ನು ತರ್ತೀನಿ ಎಂದು ಅವರು ಭರವಸೆ ನೀಡಿ. ಈ ಚುನಾವಣೆಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ತಮ್ಮ ಗೆಲುವಿಗೆ ಕಾರಣಕರ್ತರಾದ ಎಲ್ಲರಿಗೂ ತಾನು ಅಭಿನಂದಿಸುವುದಾಗಿ ತಿಳಿಸಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮನಸ್ಸಿಗೆ ತೆಗೆದುಕೊಂಡು ಹೋಗಬೇಕಾಗಿದೆ, 2028ಕ್ಕೆ ಎನ್‍ಡಿಎ ಸರ್ಕಾರ ಬರುವುದು ಶತಸಿದ್ಧ ಎಂದು ನುಡಿದರು.

ಮಾಜಿ ಶಾಸಕರಾಧ ಎಸ್.ಕೆ.ಬಸವರಾಜನ್ ಮಾತನಾಡಿ, ಪಕ್ಷ ನೀಡಿದ ಜವಾಬ್ದಾರಿಯನ್ನು ನಾವೆಲ್ಲರೂ ಚಾಚೂ ತಪ್ಪದೆ ನಿಭಾಯಿಸಿದ್ದು, ಒಬ್ಬ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯನ್ನು ಇವತ್ತು ನಾವು ಗೆಲಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈಗ ಇನ್ನೊಬ್ಬ ಹೊಸ ಎಂಎಲ್ಸಿ ಗೆದ್ದು ನಮ್ಮ ಜಿಲ್ಲೆಗೆ ಬಲ ಕೊಟ್ಟಿದೆ ಇದೇ ರೀತಿ ಮುಂಬರುವ ಹಿರಿಯೂರು ಉಪಚುನಾವಣೆಗೆ ರಾಜ್ಯದಲ್ಲಿ ಎಂಎಲ್ಸಿ ನಾಲ್ಕು ಪರಿಷತ್ತು ಚುನಾವಣೆಗಳನ್ನು ಯಾವ ರೀತಿ ಗೆಲುವೋ, ಅದೇ ರೀತಿ ಹಿರಿಯೂರು ಬರುವಂತಹ ಉಪಚುನಾವಣೆನಲ್ಲೂ ಇದೇ ರೀತಿ ಚಿತ್ರದುರ್ಗದ ಆರು ತಾಲೂಕಿನ ಕಾರ್ಯಕರ್ತರು ಶ್ರಮಪಟ್ಟು ಹಿರಿಯೂರು ಉಪಚುನಾವಣೆ ನಾವು ಗೆಲಿಸಬೇಕಾಗಿದೆ ನಮ್ಮ ಮೇಲೆ ಇದರ ಜವಾಬ್ದಾರಿ ಇದೆ ಈ ಚುನಾವಣೆಯ ಗೆಲುವಿನಿಂದ ಎನ್‍ಡಿಎ ಮೈತ್ರಿಗೆ ಬಲ ಬಂದಂತೆ ಆಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಡಾ.ಮಂಜುನಾಥ್, ಕಾರ್ಯದರ್ಶಿ ಶ್ರೀಮತಿ ರೇಖಾ, ಶ್ರೀಮತಿ ರಜನಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮದಾಸ್, ನಗರ ಕಾರ್ಯದರ್ಶಿ ಬಸವೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಜೆಡಿಎಸ್‍ನ ಯುವ ಘಟಕದ ಪ್ರತಾಪ್ ಜೋಗಿ ನ್ಯಾಯವಾದಿ ಅನಿಲ್ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *