ಚಿತ್ರದುರ್ಗ ಅ. 30
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಹಾಗೂ ವಿವಿಧ ರೋಟರಿ ಕ್ಲಬ್‍ಗಳ ಸಹಯೋಗದಲ್ಲಿ ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‍ನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿದ 2ನೇ ಆವೃತ್ತಿಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಸಮಾರಂಭದಲ್ಲಿ ನರೇಂದ್ರ ಎಸ್.ಎಂ. ಅವರಿಗೆ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಹಾಗೂ ಯೋಗಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಅಂತರರಾಷ್ಟ್ರೀಯ ಯೋಗ ಶಿಕ್ಷಕನಾಗಿ, ಹಾಗೂ ಯೋಗಾಚಾರ್ಯನಾಗಿ ಯೋಗ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ನಿರಂತರ ಸೇವೆಯನ್ನು ಗುರುತಿಸಿ, ಈ ಉನ್ನತ ಯೋಗ ಶಿಕ್ಷಕರ ಪ್ರಶಸ್ತಿ ಹಾಗೂ ಯೋಗಶ್ರೀ ಅವಾರ್ಡ್-2026 ಗೌರವ ನೀಡಿರುವುದು ಅತ್ಯಂತ ಸಂಭ್ರಮ ಹಾಗೂ ಹೆಮ್ಮೆಯ ವಿಷಯವಾಗಿದೆ.



ಈ ಅದ್ಭುತ ಕಾರ್ಯಕ್ರಮದಲ್ಲಿ ಅಮೆರಿಕದ ಯೋಗ ಯೂನಿವರ್ಸಿಟಿಯ ವೈಸ್ ಚಾನ್ಸಲರಾದ ಡಾ. ಯೋಗಿ ದೇವರಾಜ್ ಗುರೂಜಿ, ಡಾ. ವಿಶ್ವಬಂಧು ನಾಗೇಶ್ ಜಿ, ಡಾ. ಎಸ್.ಎಸ್. ಹಿರೇಮಠ್, ರೋಟೇರಿಯನ್ ಶರತ್ ಕುಮಾರ್ ಹಾಗೂ ದೇಶದ ಅತ್ಯುನ್ನತ ಪದವಿ ಹೊಂದಿರುವ ಹಲವಾರು ದಿಗ್ಗಜರು ಭಾಗವಹಿಸಿದ್ದರು.
ನರೇಂದ್ರ ಎಸ್.ಎಂ.ರವರು 10ಕ್ಕೂ ಹೆಚ್ಚು ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಿರಿ ಯೋಗ, ಮತ್ತು SPಙSS ತರಬೇತಿಯನ್ನು ಸಹ ನೀಡಿದ್ದಾರೆ. ಅಲ್ಲದೆ, ಸಾರ್ವಜನಿಕರಲ್ಲಿ ಯೋಗ ಮತ್ತು ಪ್ರಾಣಯಾಮ ಕುರಿತು ಅರಿವು ಮೂಡಿಸುತ್ತಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು