ರಾಷ್ಟ್ರೀಯ ಏಕತಾ ದಿನ ಆಚರಣೆ: ಪಟೇಲರ ದೃಢ ಸಂಕಲ್ಪ ಯುವಜನರಿಗೆ ಮಾದರಿಯಾಗಲಿ: – ಡಾ. ಕೆ.ಪಿ. ನಾಗಭೂಷಣ್ ಶೆಟ್ಟಿ

ಚಿತ್ರದುರ್ಗ ಅ. 31

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮೇರಾ ಯುವ ಭಾರತ್ ಪ್ರಜಾ ಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ರಿ) ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾ ವಿದ್ಯಾಲಯ, ಯುವ ರೆಡ್ ಕ್ರಾಸ್ ಘಟಕ ಚಿತ್ರದುರ್ಗ ಸಹಯೋಗದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮದಿನಾಚರಣೆದ ಅಂಗವಾಗಿ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನು ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಆಚರಿಸಲಾಯಿತು

ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ಹಾಕುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ವೆಂಕಟೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಕೆ ಪಿ ನಾಗಭೂಷಣ್ ಶೆಟ್ಟಿ ಮಾತನಾಡುತ್ತ ವಲ್ಲಭಭಾಯಿ ಪಟೇಲ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರು. ಅವರನ್ನು ಪ್ರೀತಿಯಿಂದ ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯಾನಂತರ ಭಾರತವನ್ನು ಒಗ್ಗೂಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು.ಉಕ್ಕಿನ ಸಂಕಲ್ಪ ಮತ್ತು ರಾಜಿಯಿಲ್ಲದ ಕರ್ತವ್ಯ ಕೇವಲ ಅಧಿಕಾರದ ಪೀಠದಲ್ಲಿದ್ದ ಮಾತ್ರಕ್ಕೆ, ಅಥವಾ ನಾನೇ ಅಂತಿಮ ಎಂಬ ಅಹಂಕಾರದಿಂದ ದೇಶವಾಗಲಿ, ಸಮಾಜವಾಗಲಿ ರೂಪುಗೊಳ್ಳುವುದಿಲ್ಲ. ನಾಯಕತ್ವ ಎಂದರೆ ಕೇವಲ ಮೆಚ್ಚಿಸಲು ನೋಡುವುದಲ್ಲ, ಸಂದರ್ಭ ಬಂದಾಗ ಕಠಿಣ ನಿರ್ಧಾರ ಕೈಗೊಳ್ಳುವ ಧೈರ್ಯ. ಇಂದಿನ ಯುವ ಪೀಳಿಗೆ ಮತ್ತು ಆಳುವ ವರ್ಗ ಆಲೋಚಿಸಬೇಕಾದ ಸಂಗತಿಯೆಂದರೆ, ಯಾವಾಗಲೂ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಬದಲಾವಣೆಗಾಗಿ ದೃಢ ಶ್ರದ್ಧೆ ಬೇಕು ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತವನ್ನು ಒಗ್ಗೂಡಿಸುವಾಗ ಎಲ್ಲೆಡೆ ಮೃದು ಧೋರಣೆ ತಾಳಲಿಲ್ಲ.
ಹೈದರಾಬಾದ್‍ನಂತಹ ಸಂಸ್ಥಾನಗಳ ವಿರುದ್ಧ ಆಪರೇಷನ್ ಪೋಲೋ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕಾಯಿತು, ಕೆಲವೆಡೆ ದಂಡೆತ್ತಿ ಹೋಗುವ ಅನಿವಾರ್ಯತೆಯೂ ಬಂತು. ಅಂದರೆ, ಕೇವಲ ಮಾತುಗಳಿಂದ ಅಥವಾ ಕತ್ತಿ ಹಿಡಿಯದ ಮಾತ್ರಕ್ಕೆ ಎಲ್ಲವೂ ಸುಲಭವಾಗಿ ಸಿಗುವುದಿಲ್ಲ. ಬದಲಿಗೆ ಸಮಾಜದ ಹಿತಕ್ಕಾಗಿ, ದೇಶದ ಅಖಂಡತೆಗಾಗಿ ರಾಜಿಯಿಲ್ಲದೆ ಕಠಿಣ ನಿಲುವು ತಾಳುವ ಧೈರ್ಯ ಇರಬೇಕು. ಅಧಿಕಾರಕ್ಕೆ ಅಹಂಕಾರವಲ್ಲ, ಬದಲಿಗೆ ಇದು ನನ್ನ ಕರ್ತವ್ಯ, ಎಲ್ಲರ ಏಳಿಗೆಗಾಗಿ ನಾನು ಇದನ್ನು ಮಾಡಲೇಬೇಕು ಎಂಬ ದೃಢ ಶ್ರದ್ಧೆ ಮತ್ತು ಅಚಲ ನಂಬಿಕೆ ಮುಖ್ಯ. ಕೈಯಲ್ಲಿ ಖಡ್ಗವಿಲ್ಲದಿದ್ದರೂ, ಹೃದಯದಲ್ಲಿ ಇಂತಹ ಉಕ್ಕಿನ ನಿರ್ಧಾರ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಸವಾಲನ್ನೂ ಗೆದ್ದು ಕ್ರಾಂತಿ ಸಾಧಿಸಬಹುದು. ಪಟೇಲರ ಬದುಕು ನಮಗೆ ಹೇಳಿಕೊಡುವ ಪಾಠ ಇದೇ. ನ್ಯಾಯಯುತ ಹೋರಾಟಕ್ಕೆ ಮತ್ತು ದೃಢ ಸಂಕಲ್ಪಕ್ಕೆ ಜಗತ್ತಿನಲ್ಲಿ ಯಾವುದೂ ಸಾಟಿಯಿಲ್ಲ ಎಂದರು.

ಎಸ್. ವಿ ಎಫ್.ಜಿ ಕಾಲೇಜ್ ಉಪ ಪ್ರಾಚಾರ್ಯರಾದ ಖಾಲಿದ್ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪದ್ಮನಾಭ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ್ ಮಳಲಿ ಉಪಸ್ಥಿತರಿದ್ದರು ಪ್ರಶಿಕ್ಷಣಾರ್ಥಿ ಶ್ರೀದೇವಿ ಪ್ರಾರ್ಥಿಸಿದರು ಭಾರ್ಗವಿ ಕೆ ಪಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *