ಚಿತ್ರದುರ್ಗ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 35 ಸಾಧಕರನ್ನು ಈ ಬಾರಿಯ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ರಮ್ಯ ಅಧಿಕೃತವಾಗಿ ಪ್ರಕಟಿಸಿದ್ದಾರೆ.ಕಾಂತರಾಜ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ಸುದೀರ್ಘ ಚರ್ಚೆ ನಡೆಸಿ ಅರ್ಹ ಸಾಧಕರ ಪಟ್ಟಿಯನ್ನು ಅಂತಿಮಗೊಳಿಸಿದೆ. ನವೆಂಬರ್ 1ರಂದು ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತದ ವತಿಯಿಂದ ಈ ಎಲ್ಲ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು.ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ:
ಪ್ರಶಸ್ತಿಗೆ ಭಾಜನರಾದ ಸಾಧಕರ ವಿವರಗಳು ಹೀಗಿವೆ:
- ರಂಗಭೂಮಿ ಕ್ಷೇತ್ರ:
- ಎಸ್. ಬಿ. ನರಸಿಂಹಮೂರ್ತಿ (ಸಿದ್ಧೇಶ್ವರನ ದುರ್ಗದ ಕ್ಯಾದಿಗುಂಟೆ, ಚಳ್ಳಕೆರೆ ತಾಲೂಕು)
- ಗದಿಗಯ್ಯ ಕಿತ್ತೂರುಮಠ (ಎಂ.ಕೆ. ಹಟ್ಟಿ, ಚಿತ್ರದುರ್ಗ ತಾಲೂಕು)
- ಸಿ. ಚಂದ್ರಪ್ಪ (ಉಪ್ಪನಾಯಕನಹಳ್ಳಿ, ಚಿತ್ರದುರ್ಗ ತಾಲೂಕು)
- ಸಾಹಿತ್ಯ ಕ್ಷೇತ್ರ:
- ಎಚ್. ನಾಗೇಂದ್ರಪ್ಪ (ತ್ಯಾಗರಾಜನಗರ, ಚಳ್ಳಕೆರೆ ತಾಲೂಕು)
- ಹುರುಳಿ ಎಂ. ಬಸವರಾಜ್ (ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ)
- ಶಿವಪ್ರಕಾಶ್ ಆರ್. ಕುಂಬಾರ (ಕಡೂರು ಗ್ರಾಮ, ಹೊಳಲ್ಕೆರೆ ತಾಲೂಕು)
- ಕೆ. ನರಸಿಂಹಪ್ಪ (ತುರುವನೂರು, ಚಿತ್ರದುರ್ಗ ತಾಲೂಕು)
- ಜಡೇಲಿಂಗಪ್ಪ ಮಂಜುನಾಥ್ (ಜಡೇಕುಂಟೆ ಗ್ರಾಮ, ಚಳ್ಳಕೆರೆ ತಾಲೂಕು)
- ಸಂಗೀತ ಮತ್ತು ಜಾನಪದ ಕ್ಷೇತ್ರ:
- ಎಚ್. ಜಿ. ನಾಗರಾಜಪ್ಪ (ಹೊನ್ನೇಕೆರೆ ಗ್ರಾಮ, ಹೊಸದುರ್ಗ ತಾಲೂಕು)
- ಜಿ. ಪಿ. ಜಯಪ್ರಕಾಶ್ (ಶ್ರೀರಾಂಪುರ ಗ್ರಾಮ, ಹೊಸದುರ್ಗ ತಾಲೂಕು)
- ಜಿ. ಎನ್. ಗೋಂದಾಳಪ್ಪ (ಐಯ್ಯನಹಳ್ಳಿ ಆಯಿತೋಳು ಗ್ರಾಮ, ಚಿತ್ರದುರ್ಗ ತಾಲೂಕು)
- ಗೌಸ್ ಪೀರ್ (ಚಿತ್ರದುರ್ಗ)
- ಮುತ್ತುರಾಜ್ (ನಲಗೇತನಹಟ್ಟಿ ಗ್ರಾಮ, ಚಳ್ಳಕೆರೆ ತಾಲೂಕು)
- ವೆಂಕಟೇಶ್ ನಾಯ್ಕ್ (ಬೇವಿನಹಳ್ಳಿ ಗ್ರಾಮ, ಚಿತ್ರದುರ್ಗ ತಾಲೂಕು) – ಜಾನಪದ ನಗಾರಿ ವಾದ್ಯ, ಎಂ. ನಿಂಗರಾಜ್ – ಕೀಲುಕುದುರೆಯಲ್ಲಿ (ಚಿತ್ರದುರ್ಗ )
- ಮರುಳಸಿದ್ದಪ್ಪ (ಚಿತ್ರದುರ್ಗ) – ಜಾನಪದ ಉರುಮೆ ವಾದ್ಯ,
- ಕ್ರೀಡೆ ಮತ್ತು ಯೋಗ ಕ್ಷೇತ್ರ:
- ಸುಭದ್ರ ಶಂಕರನಾಥ ಶೆಟ್ಟಿ (ವಿದ್ಯಾನಗರ, ಚಿತ್ರದುರ್ಗ) – ಯೋಗ ಕ್ಷೇತ್ರ
- ಯು. ಸತೀಶ್ ಕುಮಾರ್ (ಚಿತ್ರದುರ್ಗ ನಗರ) – ಕ್ರೀಡಾ ಕ್ಷೇತ್ರ
- ಚಿತ್ರಕಲೆ ಹಾಗೂ ವೈದ್ಯಕೀಯ ಕ್ಷೇತ್ರ:
- ವಿ. ನಾರಾಯಣರಾವ್ (ಕಾಟಪ್ಪನಹಟ್ಟಿ, ಚಳ್ಳಕೆರೆ ತಾಲೂಕು) – ಚಿತ್ರಕಲೆ
- ಡಾ. ಡಿ. ಎಸ್. ಶ್ವೇತಾ (ತುರುವನೂರು, ಚಿತ್ರದುರ್ಗ ತಾಲೂಕು) – ಚಿತ್ರಕಲೆ
- ಡಾ. ಚಂದ್ರು (ಕಡಿವಾಣಕಟ್ಟೆ ಗ್ರಾಮ, ಹೊಸದುರ್ಗ ತಾಲೂಕು) – ಚಿತ್ರಕಲೆ
- ಡಾ. ಎಫ್. ವಿ. ನಂದಿನಿ (ಚಳ್ಳಕೆರೆ) – ವೈದ್ಯಕೀಯ ಕ್ಷೇತ್ರ
- ಲಾವಣ್ಯ (ಚಿತ್ರದುರ್ಗ ನಗರ) – ವೈದ್ಯಕೀಯ ಕ್ಷೇತ್ರ
- ಟಿ. ಮಂಜುನಾಥ್ (ಚಿತ್ರದುರ್ಗ ನಗರ) – ವೈದ್ಯಕೀಯ ಕ್ಷೇತ್ರ
- ಶಿಕ್ಷಣ ಹಾಗೂ ಸಮಾಜ ಸೇವೆ ಕ್ಷೇತ್ರ:
- ಸಂಗೇನಹಳ್ಳಿ ಅಶೋಕ್ ಕುಮಾರ್ (ಚಿತ್ರದುರ್ಗ) – ಶಿಕ್ಷಣ ಕ್ಷೇತ್ರ
- ಅನಿತಾ ಲಕ್ಷ್ಮಿ (ಕೂನಬೇವು ಗ್ರಾಮ) – ಶಿಕ್ಷಣ ಕ್ಷೇತ್ರ
- ನಾಗರಾಜ (ಚಿಕ್ಕೋಬನಹಳ್ಳಿ, ಮೊಳಕಾಲ್ಮುರು ತಾಲೂಕು) – ಸಮಾಜ ಸೇವೆ ಕ್ಷೇತ್ರ
- ಡಿ. ಎಚ್. ನಟರಾಜ (ಚಿತ್ರದುರ್ಗ ನಗರ) – ಸಮಾಜ ಸೇವೆ ಕ್ಷೇತ್ರ
- ಕೃಷಿ ಕ್ಷೇತ್ರ:
- ನರಸಿಂಹಮೂರ್ತಿ (ಚಳ್ಳಕೆರೆ)
- ಕೆ. ಎಂ. ಕಾಂತರಾಜ್ (ಹುಣಸೆಕಟ್ಟೆ ಗ್ರಾಮ, ಚಿತ್ರದುರ್ಗ ತಾಲೂಕು)
- ಸಂಕೀರ್ಣ ವಿಭಾಗ:
- ಬಿ. ಬಸವರಾಜಪ್ಪ (ಚಿತ್ರದುರ್ಗ ನಗರ)
- ಮಾಧ್ಯಮ ಕ್ಷೇತ್ರ (ದೃಶ್ಯ ಹಾಗೂ ಪತ್ರಿಕೋದ್ಯಮ):
- ಎಸ್. ಸಿದ್ದರಾಜು (ಜಿಲ್ಲಾ ವರದಿಗಾರರು, ಪಬ್ಲಿಕ್ ಟಿವಿ, ಚಿತ್ರದುರ್ಗ) – ದೃಶ್ಯ ಮಾಧ್ಯಮ
- ಡಾ. ಎ. ವೀರಣ್ಣ (ಧರ್ಮಪುರ ಹೋಬಳಿ, ಹಿರಿಯೂರು ತಾಲೂಕು) – ಪತ್ರಿಕಾ ಮಾಧ್ಯಮ
- ಡಿ. ಪಿ. ನಾಗರಾಜ ಶ್ರೇಷ್ಠಿ (ಅರಳಿಕರೆ ಗ್ರಾಮ, ಪತ್ರಕರ್ತರು) – ಪತ್ರಿಕಾ ಮಾಧ್ಯಮ
- ಕೆ. ಶಿವಣ್ಣ (ಸೊಂಡೆಕೆರೆ ಗ್ರಾಮ, ಹಿರಿಯೂರು ತಾಲೂಕು) – ಪತ್ರಿಕಾ ಮಾಧ್ಯಮ
- ಟಿ. ಜೆ. ತಿಪ್ಪೇಸ್ವಾಮಿ (ಗಾಂಧಿ ನಗರ, ಚಳ್ಳಕೆರೆ) – ಪತ್ರಿಕಾ ಮಾಧ್ಯಮ
- ಸಿ. ಪಿ. ಮಾರುತಿ (ಕೆಳಗೋಟೆ, ಚಿತ್ರದುರ್ಗ ನಗರ) – ಪತ್ರಿಕಾ ಮಾಧ್ಯಮ
ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಹಿರಿಮೆಗೆ ಸಾಕ್ಷಿಯಾಗಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭವು ಇಡೀ ಜಿಲ್ಲೆಯ ಜನತೆಯಲ್ಲಿ ಹರ್ಷ ಮೂಡಿಸಿದೆ. ಎಲ್ಲಾ ಸಾಧಕರಿಗೂ ಜಿಲ್ಲಾಡಳಿತದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು