ಚಿತ್ರದುರ್ಗ ನ. 02
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ಹಾಲಿನ ದರ ಹೆಚ್ಚಳವನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ರೂಪ ವಿನಯಕುಮಾರ್ ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗಳಷ್ಟು ಹೆಚ್ಚಳ ಮಾಡಿದೆ. ಆದರೆ ರೈತರಿಗೆ ಸಿಗುತ್ತಿರುವ ಕೇವಲ ಏಳು ರೂಪಾಯಿಗಳು ಮಾತ್ರ ವಿವಿಧ ಪ್ಯಾಕೆಟ್‍ಗಳ ಬೆಲೆಯನ್ನು ಬೇರೆ ಬೇರೆ ರೀತಿಯಲ್ಲಿ ಹೆಚ್ಚಿಸಿ ಹೆಣ್ಣು ಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ. ನಿತ್ಯ ಜೀವನದಲ್ಲಿ ಹಾಲಿನ ಬಳಕೆ ಅತ್ಯಂತ ಅನಿವಾರ್ಯವಾಗಿದ್ದು, ದರ ಏರಿಕೆಯಿಂದ ಮಧ್ಯಮ ವರ್ಗದವರು ಮತ್ತು ಬಡವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮೊಸರಿನ ದರವನ್ನು ಹದಿನಾಲ್ಕು ರೂಪಾಯಿಗಳಷ್ಟು ಹೆಚ್ಚಿಸಿರುವುದು ಮಹಿಳೆಯರ ಸಂಸಾರದ ನಿರ್ವಹಣೆಗೆ ಮತ್ತಷ್ಟು ಹೊರೆಯಾಗಿದೆ ಕೂಡಲೇ ರಾಜ್ಯ ಸರ್ಕಾರವು ಹಾಲಿನ ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜೊತೆಗೆ, ಬಸ್ ಪಾಸ್‍ಗಳಿಂದ ಹಿಡಿದು ಜನನ ಮತ್ತು ಡೆತ್ ಸರ್ಟಿಫಿಕೇಟ್ ವರೆಗಿನ ಎಲ್ಲ ಸೇವೆಗಳ ಶುಲ್ಕ ಹಾಗೂ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಸಹ ಜಾಸ್ತಿ ಮಾಡಲಾಗಿದೆ ಗೃಹಲಕ್ಷ್ಮಿ ಹಣ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರವು ಇಂದಿಗೂ ಅನೇಕ ಮಹಿಳೆಯರಿಗೆ ಆ ಹಣವನ್ನು ತಲುಪಿಸಿಲ್ಲ ಎಂದು ಅವರು ಈ ಸರ್ಕಾರವು ಬಡವರ ಪರವಾಗಿಲ್ಲ ಹಾಗೂ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಸೂಕ್ತ ಸ್ಥಾನಮಾನವನ್ನು ನೀಡಿಲ್ಲ ಎಂದು ವಾಗ್ದಾಳಿ ನಡೆಸಿ ಹಾಲಿನ ದರವನ್ನು ಕೂಡಲೇ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ದಿವಾಳಿ ಸರ್ಕಾರವು ಗ್ಯಾರಂಟಿಗಳ ಹೆಸರಿನಲ್ಲಿ ಜನಸಾಮಾನ್ಯರಿಗೆ ನಿತ್ಯ ವಂಚನೆ ಮಾಡುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಾಲಿನ ದರ ಮತ್ತು ವಿದ್ಯುತ್ ಶುಲ್ಕವನ್ನು ಹೆಚ್ಚಿಸುತ್ತಿರುವುದನ್ನು ಖಂಡನೀಯ, ಸರ್ಕಾರವು ತಕ್ಷಣವೇ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಹೆಸರಿನಲ್ಲಿ ಉಚಿತವಾಗಿ ಕೊಡುವುದಾಗಿ ಹೇಳಿ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿದೆ ಒಂದು ತಿಂಗಳಲ್ಲಿ ಮೂರು ಬಾರಿ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ ನಿನ್ನೆ ಕೂಡ ಪ್ರತಿ ಹಾಲಿಗೆ ಲೀಟರ್‍ಗೆ 8 ರೂಪಾಯಿ ಬೆಲೆ ಏರಿಕೆಯನ್ನು ಸರ್ಕಾರ ಘೋಷಿಸಿದೆ. ರೈತರಿಗೆ ಪ್ರತಿ ಲೀಟರ್‍ಗೆ 8 ರೂಪಾಯಿ ಬೆಂಬಲ ಬೆಲೆ ನೀಡುವುದು ಒಳ್ಳೆಯದೆ, ಆದರೆ ಅದನ್ನು ಸರ್ಕಾರ ತನ್ನ ಬೆಂಬಲ ಬೆಲೆಯಿಂದ ಘೋಷಿಸಿ ಕೊಡಬೇಕು ವಿನಃ ಸಾರ್ವಜನಿಕರ ಮೇಲೆ ಬೆಲೆ ಏರಿಕೆ ಮಾಡಬಾರದು. ರಾಜ್ಯ ಸರ್ಕಾರ ಏರಿಕೆ ಮಾಡಿರುವ ಹಾಲಿನ ದರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಬಂದಾಗಿನಿಂದ ಹಾಲಿನಿಂದ ಹಿಡಿದು ವಿದ್ಯುತ್ ವರೆಗೂ, ಹಾಗೂ ಪ್ರಯಾಣದಿಂದ ಪ್ರಮಾಣಪತ್ರದ ವರೆಗೂ ಎಲ್ಲಾ ಸೇವೆಗಳ ದರಗಳು ಏರಿಕೆಯಾಗುತ್ತಿವೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುವ ಸರ್ಕಾರ ಇಲ್ಲಿಗೆ ನಾಲ್ಕು ಬಾರಿ ಕೆಎಸ್‍ಆರ್‍ಟಿಸಿ ದರವನ್ನು ಏರಿಕೆ ಮಾಡಿದೆ ಜನನ ಮತ್ತು ಮರಣ ಪ್ರಮಾಣಪತ್ರಗಳ ಶುಲ್ಕವನ್ನು 5 ರೂಪಾಯಿಯಿಂದ 50 ರೂಪಾಯಿಗೆ ಹೆಚ್ಚಿಸಲಾಗಿದೆ ಇದರೊಂದಿಗೆ ಚಾಪಾ ಕಾಗದದ ಬೆಲೆಯೂ ಕೂಡ 20-50 ರೂಪಾಯಿಯಿಂದ ಈಗ 100 ರೂಪಾಯಿಗೆ ಏರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿಗೆ 8 ರೂ. ಹಾಗೂ ಮೊಸರಿಗೆ 14 ರೂ. ಹೆಚ್ಚಳವಾಗಿದ್ದು, ದಿನನಿತ್ಯ ಬಳಸುವ ಪ್ರತಿಯೊಂದು ವಸ್ತುವಿನ ಮೇಲೂ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಮಹಿಳಾ ಮೋರ್ಚಾದ ವತಿಯಿಂದ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾದ ಎಚ್ಚರಿಕೆಯನ್ನು ನೀಡಲಾಗಿದ್ದು, ಕೂಡಲೇ ಹಾಲಿನ ದರ ಮತ್ತು ವಿದ್ಯುತ್ ದರವನ್ನು ಕಡಿಮೆ ಮಾಡಬೇಕು,ತಪ್ಪಿದ್ದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ತಂಡದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮತ್ತೋರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ಸ ರ್ಕಾರವು ಹಾಲಿನ ದರವನ್ನು ರೂ. 8 ಹಾಗೂ ಮೊಸರಿನ ದರವನ್ನು ರೂ. 14 ಹೆಚ್ಚಳ ಮಾಡಿ ಬಡವರ ಮತ್ತು ಮಧ್ಯಮ ವರ್ಗದವರ ಜೀವನವನ್ನು ದುಸ್ತರ ಸ್ಥಿತಿಗೆ ತಂದಿದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದ್ದು, ರಾಜ್ಯದ ರೈತರ ಜೀವನವನ್ನು ಬೀದಿಗೆ ತಂದು, ಅವರಿಗೆ ಘೋಷಣೆ ಮಾಡಲಾದ ಪರಿಹಾರವನ್ನು ಬಿಡುಗಡೆ ಮಾಡದೆ ಸಂಕಷ್ಟಕ್ಕೆ ಸಿಲುಕಿಸಿದೆ
ತಾಲೂಕು ಆಫೀಸ್, ಜಿಲ್ಲಾಧಿಕಾರಿ ಕಚೇರಿ ಹಾಗೂ ಕೃಷಿ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಂತ್ರಿಗಳ ಕಚೇರಿಯಲ್ಲಾಗಲಿ ಅಥವಾ ಮುಖ್ಯಮಂತ್ರಿಗಳ ಕಚೇರಿಯ ಲ್ಲಾಗಲಿ ಯಾವುದೇ ಕೆಲಸಗಳು ಕಂಟ್ರೋಲ್‍ನಲ್ಲಿಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿವೆ. ಗೃಹ ಮಂತ್ರಿಗಳು ದಿನಬೆಳಗಾ ದರೆ ಬೇರೆ ಕೆಲಸಗಳನ್ನು ಮಾಡುತ್ತಿಲ್ಲ ಎಂದು ದೂರಲಾಗಿದೆ.
ಮಹಿಳೆಯರಿಗೆ ರೂ. 2,000 ನೀಡಲು ಗತಿಯಿಲ್ಲದೆ ಬೇರೆ ಕಡೆಯಿಂದ ತಂದು ಹೆಣ್ಣುಮಕ್ಕಳ ಖಾತೆಗೆ ಹಾಕುವ ಕೆಲಸ ಮಾಡಲಾಗಿದೆ ಹೊರತು ಯಾವುದೇ ಸೂಕ್ತ ಹಣ ನೀಡಲಾಗಿಲ್ಲ ಕಾಂಗ್ರೆಸ್ ಸರ್ಕಾರವು ಜನಪರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದ್ದು, ಇನ್ನುಮುಂದೆಯೂ ಭ್ರಷ್ಟಾಚಾರ ರಹಿತ ಆಡಳಿತ ನೀಡದಿದ್ದರೆ ಮಹಿಳೆಯರೆಲ್ಲರೂ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಶ್ಯಾಮಲಾ, ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷರಾದ ವಿಜಯಲಕ್ಷ್ಮೀ, ಸುಮಾ ಕವಿತಾ, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷರಾಧ ಶೈಲಜರೆಡ್ಡಿ, ಜಿಲ್ಲಾ ಕಾರ್ಯದರ್ಶಿ ರೇಖಾ, ರಜನಿ, ಜಿಲ್ಲಾ ವಕ್ತಾರ ನಾಗರಾಜಕ್ ಬೇದ್ರೇ, ಯುವ ಮೋರ್ಚಾ ಅಧ್ಯಕ್ಷ ಅರುಣ್, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್ ಲೀಲಾವತಿ, ದಗ್ಗೆ ಶಿವಪ್ರಕಾಶ್, ಚಂದ್ರಿಕ ಲೋಕನಾಥ್, ಬಸಮ್ಮ, ಕವನ, ವೀಣಾ, ದೇವಿಕ ಸರ್ವ ಮಂಗಳ ಲಕ್ಷ್ಮೀ, ಶುಭ ಪ್ರತ್ವೀರಾಜ್, ಶಾಂತಮ್ಮ, ಮಂಜುಳಮ್ಮ ಪ್ರಶಾಂತ ಕಿರಣ್ ಯಶವಂತ ಸೇರಿದಂತೆ ವಿವಿಧ ಮೋರ್ಚಾದ ಪದಾಧಿಕಾರಿಗಳು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು