ಗುಳೇದಗುಡ್ಡದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಪೋಕ್ಸೋ ಹಾಗೂ ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನ.

ವರದಿ ಮತ್ತು ಫೋಟೋ ಕೃಪೆ ಕುಮಾರ್‌ ಜಿ ಎನ್ ಮೊ : 9945712918

ಗುಳೇದಗುಡ್ಡ (ನವೆಂಬರ್ 3): ಮಕ್ಕಳ ಸುರಕ್ಷತೆ, ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೋ) ಹಾಗೂ ಬಾಲ್ಯವಿವಾಹ ನಿರ್ಮೂಲನೆ ಕುರಿತು ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವು ಗುಳೇದಗುಡ್ಡದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಜರುಗಿತು.

ರಾಷ್ಟ್ರೀಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (NALSA), ಶಿಕ್ಷಣ ಇಲಾಖೆ ಹಾಗೂ ಬಾಗಲಕೋಟೆಯ ರೀಚ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ‘ಸುರಕ್ಷಿತ್ ಬಚ್‌ಪನ್ ಅಭಿಯಾನ–2026’ರ ಅಡಿಯಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರೀಚ್ ಸಂಸ್ಥೆಯ ಮುತ್ತಕ್ಕ ಹಡಪದ ಅವರು ಮಾತನಾಡಿ, “ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲ್ಯವಿವಾಹ ತಡೆಗಟ್ಟಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು. ಮಕ್ಕಳಿಗೆ ‘ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ’ದ ಬಗ್ಗೆ ಅರಿವು ಮೂಡಿಸಿದ ಅವರು, ಅಪಾಯದ ಸಂದರ್ಭದಲ್ಲಿ ‘ನಿಲ್ಲಿಸಿ–ಓಡಿ–ತಿಳಿಸಿ’ (NO–GO–TELL) ಎಂಬ ಸುರಕ್ಷತಾ ಸೂತ್ರವನ್ನು ಪಾಲಿಸುವಂತೆ ಕಿವಿಮಾತು ಹೇಳಿದರು. ಇದೇ ವೇಳೆ ಜಾಗೃತಿ ಮೂಡಿಸುವ ‘ಕೋಮಲ್’ ಎಂಬ ಅನಿಮೇಷನ್ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಗುಳೇದಗುಡ್ಡ ವಲಯದ ಇ.ಸಿ.ಒ. ಎಂ.ಸಿ. ನಾಲತವಾಡ ಹಾಗೂ ಬಿ.ಆರ್.ಪಿ. ಎಸ್.ಎಸ್. ಯಗೂರ ಅವರು ಪೋಕ್ಸೋ (POCSO) ಕಾಯ್ದೆ–2012ರ ಕುರಿತು ವಿಸ್ತೃತ ಮಾಹಿತಿ ನೀಡಿದರು. 18 ವರ್ಷದೊಳಗಿನ ಎಲ್ಲರನ್ನೂ ಮಕ್ಕಳೆಂದು ಪರಿಗಣಿಸಲಾಗುತ್ತಿದ್ದು, ಅವರ ಮೇಲಿನ ದೌರ್ಜನ್ಯ ಗಂಭೀರ ಶಿಕ್ಷಾರ್ಹ ಅಪರಾಧವಾಗಿದೆ. ಹಾಗೆಯೇ, ಹೆಣ್ಣುಮಕ್ಕಳಿಗೆ 18 ಹಾಗೂ ಗಂಡುಮಕ್ಕಳಿಗೆ 21 ವರ್ಷ ತುಂಬುವ ಮುನ್ನ ವಿವಾಹ ಮಾಡುವುದು ಕಾನೂನುಬಾಹಿರವಾಗಿದ್ದು, ಇದನ್ನು ತಡೆಯುವುದು ಪೋಷಕರು ಹಾಗೂ ಸಮುದಾಯದ ಜವಾಬ್ದಾರಿ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಆನ್‌ಲೈನ್ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ತುರ್ತು ಸಂದರ್ಭಗಳಿಗಾಗಿ ಮಕ್ಕಳ ಸಹಾಯವಾಣಿ-1098, ತುರ್ತು ಸೇವೆ-112 ಮತ್ತು ಸೈಬರ್ ಕ್ರೈಮ್ ಸಹಾಯವಾಣಿ-1930 ಸಂಖ್ಯೆಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಲೈಲಾ ಮಾಡಿವಾಳ, ಮಕ್ಕಳ ಸಹಾಯವಾಣಿಯ ಶಾರದಾ ಭಜಂತ್ರಿ, ಬಿ.ಆರ್.ಪಿ. ಜಗದೀಶ ಬುಳ್ಳಾ, ಉಪನ್ಯಾಸಕರು, ಶಿಕ್ಷಕರು, ಪೋಷಕರು ಹಾಗೂ 800ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಉಪನ್ಯಾಸಕ ಎಸ್.ವಿ. ಮರೂಟಗಿ ಕಾರ್ಯಕ್ರಮ ನಿರೂಪಿಸಿದರು. ಬಾಲ್ಯವಿವಾಹ ಮುಕ್ತ ಭಾರತ ನಿರ್ಮಾಣದ ಸಾಮೂಹಿಕ ಪ್ರತಿಜ್ಞಾ ವಿಧಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *