
ಹೊಸದಿಲ್ಲಿ : ರಾಷ್ಟ್ರಪತಿ ಅಧಿಕಾರವಧಿ ಪೂರೈಸಿ ನಿರ್ಗಮಿಸುತ್ತಿರುವ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಶನಿವಾರ ಸಂಸತ್ ಭವನದಲ್ಲಿ ಏರ್ಪಡಿಸಿದ್ದ ಬ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾವುಕ ವಿದಾಯ ಹೇಳಿದರು. ಇದಕ್ಕೂ ಮುನ್ನ ವಿದಾಯ ಭಾಷಣ ಮಾಡಿದ ರಾಷ್ಟ್ರಪತಿ ಕೋವಿಂದ್, ತಮಗೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸುವ ಅವಕಾಶ ನೀಡಿದ ದೇಶದ ಜನತೆಗೆ ಧನ್ಯವಾದ ಅರ್ಪಿಸಿದರು. ಕೋವಿಂದ್ ಅವರ ಅಧಿಕಾರಾವಧಿ ಭಾನುವಾರ ಜುಲೈ 24ಕ್ಕೆ ಅಂತ್ಯವಾಗಲಿದ್ದು, ಸೋಮವಾರ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮೂರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನಾಳೆ ಮುರ್ಮ ಪ್ರಮಾಣವಚನ :
ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮ ಅವರು ಸೋಮವಾರ ದೇಶದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಡಲಿದ್ದಾರೆ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಲಿರುವ ಮೊದಲ ಬುಡಕಟ್ಟು ಸಮುದಾಯದ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಸಮಾರಂಭದಲ್ಲಿ ನೂತನ ರಾಷ್ಟ್ರಪತಿ ಮುರ್ಮ ವರೆಗೆ ಅಭಿನಂದನೆ ಸಲ್ಲಿಸಿದ ಕೋವಿಂದ್, ಮುರ್ಮ ಅವರಿಗೆ ಮಾರ್ಗದರ್ಶನದಿಂದ ದೇಶಕ್ಕೆ ಒಳಿತಾಗಲಿದೆ ಎಂದರು. ಇದೇ ವೇಳೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ದೇಶದ ಜನತೆಗೆ ಕೋವಿಂದ ಧನ್ಯವಾದ ಅರ್ಪಿಸಿದರು.