ನಟಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು! ಹೀಗಿದೆ ಆರೋಗ್ಯ ಸ್ಥಿತಿ..

Entertainment:  ನಟಿ ಮಾಳವಿಕಾ ಅವಿನಾಶ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಫೋಟೋಗಳನ್ನು ಖುದ್ದು ಮಾಳವಿಕಾ ಅವರೇ ಹಂಚಿಕೊಂಡಿದ್ದಾರೆ.

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಆರೋಗ್ಯದ ಸಮಸ್ಯೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ರೀತಿಯ ಸಮಸ್ಯೆ ಬಂದಾಗ ನಿರ್ಲಕ್ಷ್ಯ ಮಾಡಬೇಡಿ ಎಂದು ಫ್ಯಾನ್ಸ್‌ಗೆ ಸಲಹೆ ನೀಡಿದ್ದಾರೆ.

ಮಾಳವಿಕಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದು, ಇದನ್ನು ಯಾರೂ ಹಗುರವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ. ಸುಮ್ಮನೆ ತಲೆ ನೋವು ಎಂದುಕೊಂಡರೆ ನನ್ನಂತೆ ಆಸ್ಪತ್ರೆಗೆ ಸೇರಬೇಕಾಹಬಹುದು ಎಂದು ಸಣ್ಣ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. 

ಆಸ್ಪತ್ರೆಯ ಬೆಡ್ ಮೇಲಿರುವ ಸೆಲ್ಫಿಯನ್ನು ಮಾಳವಿಕಾ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ತಮ್ಮ ಆರೋಗ್ಯ ಸ್ಥಿತಿಯ ಅಪ್‌ಡೇಟ್‌ ನೀಡಿದ್ದು, ಚೇತರಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಫೋಟೋದಲ್ಲಿರುವವರು ನಿಜವಾಗಿಯೂ ಅವರೇ ಎಂದು ಅನುಮಾನಿಸುವಷ್ಟು ಮಾಳವಿಕಾ ಮುಖ ಬದಲಾಗಿದೆ. ಇದು ಅವರ ಅಭಿಮಾಣಿಗಳ ಆತಂಕಕ್ಕೆ ಕಾರಣವಾಗಿದೆ. 

ಮಾಳವಿಕಾ ಶೀಘ್ರ ಗುಣಮುಖರಾಗಿ ಮನೆಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ಹಾಗೂ ಹಿರಿತೆರೆಯಲ್ಲಿ ಅನೇಕ ಸಿನಿಮಾಗಳಲ್ಲಿ ಮಾಳವಿಕಾ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರುವ ಮೂಲಕ ರಾಜಕಾರಣಿಯಾಗಿಯೂ ಮಾಳವಿಕಾ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿಯೂ ಮಾಳವಿಕಾ ಅಭಿನಯಿಸಿದ್ದಾರೆ.  

Source: https://zeenews.india.com/kannada/entertainment/actress-malavika-avinash-admitted-to-hospital-129032

Leave a Reply

Your email address will not be published. Required fields are marked *