ಶ್ರೀಮಂತರ ಪಟ್ಟಿಯಿಂದ ಅದಾನಿ ಔಟ್..!

ಕಳೆದ ಕೆಲವು ದಿನಗಳಿಂದ ಅದಾನಿ ಗ್ರೂಪ್ ಶೇರು ಮಾರ್ಕೆಟ್ ನೆಲ ಕಚ್ಚುತ್ತಿದೆ. ಅದಕ್ಕೆ ಬಂಡವಾಳ ಹಾಕಿದ್ದ ಬಂಡವಾಳ ಶಾಹಿಗಳಿಗೆಲ್ಲಾ ಶಾಕ್ ಆಗಿದೆ. ಶ್ರೀಮಂತರ ಪಟ್ಟಿಯಲ್ಲಿ ಹಿಂದಕ್ಕೆ ಬಿದ್ದಿದ್ದಾರೆ. ಈ ಮೊದಲು ಶ್ರೀಮಂತರ ಟಾಪ್ 10 ರಲ್ಲಿ ಇದ್ದ ಗೌತಮ್ ಅದಾನಿ ಇದೀಗ ದಿಢೀರನೆ ಕುಸಿದ್ದಾರೆ.

ಅದಾನಿ ಗ್ರೂಪ್ ಗೆ ಹಾಕಿದ್ದ ಎಲ್ಐಸಿ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿಕೊಂಡಿದೆ. ಇದೀಗ ಅದಾನಿ ಗ್ರೂಪ್, ಅದಾನಿ ಪೋರ್ಟ್ಸ್, ಅದಾನಿ ಎಂಟರ್ ಪ್ರೈಸಸ್, ಅಂಬುಜಾ ಸಿಮೆಂಟ್ಸ್ ಹೀಗೆ ಅದಾನಿ ಗ್ರೂಪ್ ನ ಎಲ್ಲಾ ಷೇರುಗಳು ಶೇಕಡಾ 20ಕ್ಕೂ ಹೆಚ್ಚಿನ ಮಟ್ಟದಲ್ಲಿ ಕುಸಿತ ಕಂಡಿದೆ.

ಅದಾನಿ ಗ್ರೂಪ್ ಬಗ್ಗೆ ಹಿಂಡನ್ ಬರ್ಗ್ ರಿಸರ್ಚ್ ವರದಿ ಮಾಡಿದೆ. ಆ ವರದಿ ಬಹಿರಂಗವಾದ ಬೆನ್ನಲ್ಲೇ ಶ್ರೀಮಂತರ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿದೆ. 10 ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ.

The post ಶ್ರೀಮಂತರ ಪಟ್ಟಿಯಿಂದ ಅದಾನಿ ಔಟ್..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/Txvgaef
via IFTTT

Leave a Reply

Your email address will not be published. Required fields are marked *