ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್ ಯುಜಿ 2026ರ ಮರು ಪರೀಕ್ಷೆಗೆ (NEET UG Re-Exam) ಹಾಜರಾದ ಅಭ್ಯರ್ಥಿಗಳ ಒಎಂಆರ್ (OMR) ಶೀಟ್ಗಳು ಮತ್ತು ದಾಖಲಾದ ಪ್ರತಿಕ್ರಿಯೆಗಳನ್ನು (Recorded Responses) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಅಭ್ಯರ್ಥಿಗಳು ತಮ್ಮ OMR ಪ್ರತಿಗಳನ್ನು ಪರಿಶೀಲಿಸಿ, ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಆಕ್ಷೇಪಣೆ ಸಲ್ಲಿಸಲು NTA ಅವಕಾಶ ಕಲ್ಪಿಸಿದೆ.
OMR ಶೀಟ್ ಮತ್ತು ಪ್ರತಿಕ್ರಿಯೆಗಳನ್ನು ವೀಕ್ಷಿಸುವುದು ಹೇಗೆ?
- NTA ಯ ಅಧಿಕೃತ ವೆಬ್ಸೈಟ್ neet.nta.nic.in ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಅಪ್ಲಿಕೇಶನ್ ಸಂಖ್ಯೆ (Application Number) ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- ಲಾಗಿನ್ ಆದ ಬಳಿಕ OTP ಪರಿಶೀಲನೆ ಪೂರ್ಣಗೊಳಿಸಿ.
- ನಂತರ, ನಿಮ್ಮ ‘OMR ಶೀಟ್’ ಮತ್ತು ‘ಸ್ಕ್ಯಾನ್ ಮಾಡಿದ ಪ್ರತಿಕ್ರಿಯೆಗಳನ್ನು’ (Scanned Responses) ವೀಕ್ಷಿಸಬಹುದು.
- ಪರೀಕ್ಷೆಯ ಸಮಯದಲ್ಲಿ ನೀವು ಯಾವ ಆಯ್ಕೆಯನ್ನು ಗುರುತಿಸಿದ್ದೀರೋ, ಸ್ಕ್ಯಾನರ್ ಅದನ್ನೇ ನಿಖರವಾಗಿ ದಾಖಲಿಸಿದೆಯೇ ಎಂಬುದನ್ನು ಇಲ್ಲಿ ಎಚ್ಚರಿಕೆಯಿಂದ ಪರಿಶೀಲಿಸಿಕೊಳ್ಳಿ.
ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಮತ್ತು ಶುಲ್ಕದ ವಿವರ:
ಸ್ಕ್ಯಾನರ್ನಿಂದ ದಾಖಲಿಸಲ್ಪಟ್ಟ ಉತ್ತರವು ನಿಮ್ಮ ನಿಜವಾದ ಉತ್ತರಕ್ಕಿಂತ ಭಿನ್ನವಾಗಿದೆ (ಉದಾಹರಣೆಗೆ, ನೀವು ‘A’ ಎಂದು ಗುರುತಿಸಿದ್ದು, ಸಿಸ್ಟಮ್ ‘B’ ಎಂದು ಗ್ರಹಿಸಿದ್ದರೆ) ಎಂದು ನಿಮಗೆ ಖಚಿತವಾದರೆ, ಆ ನಿರ್ದಿಷ್ಟ ಪ್ರಶ್ನೆಯನ್ನು ಆಯ್ಕೆ ಮಾಡಿ ನೀವು ಆನ್ಲೈನ್ನಲ್ಲಿ ಆಕ್ಷೇಪಣೆ ಸಲ್ಲಿಸಬಹುದು.
- ಶುಲ್ಕ: ಆಕ್ಷೇಪಣೆ ಸಲ್ಲಿಸಲು ಪ್ರತಿ ಪ್ರಶ್ನೆಗೆ ₹200 ಗಳಂತೆ ಆನ್ಲೈನ್ ಮೂಲಕ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ) ಪಾವತಿಸಬೇಕು.
- ಮರುಪಾವತಿ (Refund): ಒಂದು ವೇಳೆ ಅಭ್ಯರ್ಥಿಯ ಆಕ್ಷೇಪಣೆ ಸರಿಯಾಗಿದ್ದರೆ, ಪ್ರತಿ ಪ್ರಶ್ನೆಗೆ ಪಾವತಿಸಿದ್ದ ₹200 ಶುಲ್ಕವನ್ನು ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುತ್ತದೆ.
- ರಶೀದಿ ಕಡ್ಡಾಯ: ಶುಲ್ಕ ಪಾವತಿಯಾಗದ ಆಕ್ಷೇಪಣೆಗಳನ್ನು NTA ಪರಿಗಣಿಸುವುದಿಲ್ಲ. ಆಕ್ಷೇಪಣೆ ಸಲ್ಲಿಸಿದ ಬಳಿಕ ಆನ್ಲೈನ್ ರಶೀದಿ (Acknowledgement) ಅಥವಾ ಸ್ವೀಕೃತಿಯನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿ ಸೇವ್ ಮಾಡಿಕೊಳ್ಳಿ.
ಪ್ರಮುಖ ದಿನಾಂಕಗಳು ಮತ್ತು ಗಮನಿಸಬೇಕಾದ ಅಂಶಗಳು:
- ಕೊನೆಯ ದಿನಾಂಕ: ಆಕ್ಷೇಪಣೆ ಸಲ್ಲಿಸಲು ಜುಲೈ 15, 2026 ರವರೆಗೆ ಮಾತ್ರ ಅವಕಾಶವಿದೆ. ನಿಗದಿತ ಗಡುವಿನ ನಂತರ ಬರುವ ಯಾವುದೇ ಮನವಿಯನ್ನು ಸ್ವೀಕರಿಸುವುದಿಲ್ಲ.
- ಕೊನೆಯ ನಿಮಿಷದ ಸರ್ವರ್ ದಟ್ಟಣೆಯನ್ನು (Server Issue) ತಪ್ಪಿಸಲು, ಅಭ್ಯರ್ಥಿಗಳು ಆದಷ್ಟು ಬೇಗ ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ NTA ಸೂಚಿಸಿದೆ.
- ಈ ಪ್ರಕ್ರಿಯೆಯು ಕೇವಲ OMR ಶೀಟ್ ಮತ್ತು ದಾಖಲಾದ ಪ್ರತಿಕ್ರಿಯೆಗಳಿಗೆ (Recorded Responses) ಮಾತ್ರ ಸೀಮಿತವಾಗಿದೆ. ‘ಕೀ ಆನ್ಸರ್’ (Answer Key) ಆಕ್ಷೇಪಣೆ ಸಲ್ಲಿಕೆ ದಿನಾಂಕ ಈಗಾಗಲೇ ಮುಕ್ತಾಯಗೊಂಡಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಸಹಾಯವಾಣಿ (Helpdesk) ಮಾಹಿತಿ:
ಲಾಗಿನ್ ಆಗುವಾಗ, ಒಎಂಆರ್ ಡೌನ್ಲೋಡ್ ಮಾಡುವಾಗ ಅಥವಾ ಆಕ್ಷೇಪಣೆ ಸಲ್ಲಿಸುವಾಗ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾದರೆ, ಅಭ್ಯರ್ಥಿಗಳು ಈ ಕೆಳಗಿನ NTA ಸಹಾಯವಾಣಿಗಳನ್ನು ಸಂಪರ್ಕಿಸಬಹುದು:
- ದೂರವಾಣಿ ಸಂಖ್ಯೆ: 011-40759000 ಅಥವಾ 011-69227700
- ಇ-ಮೇಲ್: neetug2026@nta.ac.in
ಶಿಕ್ಷಣ, ಉದ್ಯೋಗ ಮಾಹಿತಿ ಮತ್ತು ಪ್ರಮುಖ ಸುದ್ದಿಗಳ ನಿರಂತರ ಅಪ್ಡೇಟ್ಗಳಿಗಾಗಿ samagrasuddi.co.in ಗೆ ಭೇಟಿ ನೀಡಿ.