ಚಿತ್ರದುರ್ಗ: ಶ್ರೀ ಗುರು ಕಬೀರಾನಂದ ಆಶ್ರಮದಲ್ಲಿ ನ. 26ರಿಂದ ಡಿ. 2ರವರೆಗೆ ಪುಣ್ಯಾರಾಧನೆ ಮಹೋತ್ಸವ ಹಾಗೂ ಪ್ರವಚನ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ನವೆಂಬರ್ 24: ನಗರದ ಕಬೀರಾನಂದ ನಗರದಲ್ಲಿರುವ ಶ್ರೀ ಗುರು ಕಬೀರಾನಂದ ಆಶ್ರಮದ ಆವರಣದಲ್ಲಿ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 70ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳವರ 60ನೇ ಪುಣ್ಯಾರಾಧನೆ ಮಹೋತ್ಸವವನ್ನು ನವೆಂಬರ್ 26ರಿಂದ ಡಿಸೆಂಬರ್ 2ರವರೆಗೆ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನದ ಧಾರ್ಮಿಕ ಕಾರ್ಯಕ್ರಮಗಳು ಪುಣ್ಯಾರಾಧನೆ ಅಂಗವಾಗಿ ನವೆಂಬರ್ 26ರಿಂದ ಡಿಸೆಂಬರ್ 2ರವರೆಗೆ ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಆರೂಢ ಮೇರು’ ಜೀವನ ಚರಿತ್ರೆಯ ಪಾರಾಯಣ ಹಾಗೂ ಪ್ರವಚನ ಕಾರ್ಯಕ್ರಮ ಜರುಗಲಿದೆ.

ಕಾರ್ತಿಕ ಬಹುಳ ನವಮಿಯ ದಿನವಾದ ಡಿಸೆಂಬರ್ 2ರಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನೆರವೇರಲಿದ್ದು, ಸಂಜೆ ಮಹಾ ಮಂಗಳಾರತಿ ನಡೆಯಲಿದೆ.

ಸಮಾರೋಪ ಸಮಾರಂಭ ಹಾಗೂ ಸನ್ಮಾನ ಡಿಸೆಂಬರ್ 2ರಂದು ಸಂಜೆ 7 ಗಂಟೆಗೆ ಪುಣ್ಯಾರಾಧನೆ ಮಹೋತ್ಸವದ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.

  • ಸಾನಿಧ್ಯ: ಶ್ರೀ ಗುರು ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು.
  • ಅಧ್ಯಕ್ಷತೆ: ಶ್ರೀ ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಶ್ರೀ ಸ್ವಾಮಿ ಬ್ರಹ್ಮನಿಷ್ಠಾನಂದಜೀ.
  • ಉಪನ್ಯಾಸ: ಹಿರಿಯ ಸಾಹಿತಿ ಪ್ರೊ. ಎಚ್. ಲಿಂಗಪ್ಪ.

ಇದೇ ವೇದಿಕೆಯಲ್ಲಿ ರಂಗಭೂಮಿ ಕಲಾವಿದರು ಹಾಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಿ.ಡಿ. ತಿಮ್ಮಯ್ಯ ಮತ್ತು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹುರಳಿ ಎಂ. ಬಸವರಾಜು ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು.

ಮುಖ್ಯ ಅತಿಥಿಗಳು ಸಮಾರಂಭದಲ್ಲಿ ನಿವೃತ್ತ ಇಂಜಿನಿಯರ್ ಸಿ.ಕೆ. ತ್ಯಾಗರಾಜ್, ಬಿಜೆಪಿ ಮುಖಂಡರಾದ ಶ್ರೀಮತಿ ಜಿ.ಎಸ್. ಅನಿತಾ, ಕರ್ನಾಟಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಎನ್.ಬಿ. ಪ್ರಹ್ಲಾದ್, ನಗರಸಭೆ ಮಾಜಿ ಸದಸ್ಯ ವೆಂಕಟೇಶ್, ಜಿಲ್ಲಾ ಪಂಚಾಯಿತಿ ನಿವೃತ್ತ ವ್ಯವಸ್ಥಾಪಕ ನಾಗರಾಜ್ ಸಂಗಂ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಓಂಕಾರ್ ಅವರು ಭಾಗವಹಿಸಲಿದ್ದಾರೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *