ಚಿತ್ರದುರ್ಗ ಜು. 07
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಪ್ರದೇಶ ಕುರುಬರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಎಲ್. ತಿಪ್ಪೇಸ್ವಾಮಿ ಗೋಡೆ (57) ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿನ್ನೆ ಹೃದಯಾಘಾತದಿಂದ ಮೃತ ಪಟ್ಟಿದ್ದು ಶ್ರೀಯುತರ ನಿಧನದ ಹಿನ್ನಲೆಯಲ್ಲಿ ಮಂಗಳವಾರ ಚಿತ್ರದುರ್ಗ ಜಿಲ್ಲಾ ಕುರುಬರ ಸಂಘದಲ್ಲಿ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ. ಜಗದೀಶ್ ಗೋಡೆ ತಿಪ್ಪೇಸ್ವಾಮಿ ನನಗೆ ತುಂಬ ಹತ್ತಿರದ ಒಡನಾಡಿಗಳಾಗಿದ್ದವರು ಅವರ ಅಕಾಲಿಕ ಮರಣ ನನಗೆ ತುಂಬಾ ನೋವನ್ನು ತಂದಿದೆ, ಶ್ರೀಯುತರು ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಸೇವೆ ಸಲ್ಲಿಸಿದವರು ಒಂದು ಬಾರಿ ಹಿರಿಯೂರು ಪಿ.ಎಲ್.ಡಿ ಬ್ಯಾಂಕ್ ನ ಅಧ್ಯಕ್ಷರಾಗಿ,ಎರಡುಬಾರಿ ಡಿ.ಎಸ್.ಎಮ್ ಎಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಕರ್ನಾಟಕ ನಾರು ಮತ್ತು ಸೆಣಬು ಮಂಡಳಿಯ ಉಪಾಧ್ಯಕ್ಷರಾಗಿ ಮತ್ತು ಹಂಗಾಮಿ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದರು ಹಾಗೂ ನಮ್ಮ ಸಮಾಜದ ಸಂಘಟನೆ ಮತ್ತು ಸೇವೆಯಲ್ಲೂ ಅವರ ಪರಿಶ್ರಮವನ್ನು ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ನೆನೆದು ಕಣ್ಣಿರಿಟ್ಟರು ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿ ದೊರಕಲಿ ಅಕಾಲಿಕ ಮರಣದಿಂದ ಅವರ ಕುಟುಂಬವರ್ಗಕ್ಕಾದ ದುಃಖ ಮತ್ತು ನೋವನ್ನು ಭರಿಸವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಸಂಘದ ಅಧ್ಯಕರಾದ ಶ್ರೀರಾಮ್ ಮಾತನಾಡಿ ಅವರು ಸಮಾಜಕ್ಕೆ ಸಲ್ಲಿಸಿದ್ದನ್ನು ನೆನೆಯುತ ಭಾವುಕರಾದರು ಅವರು ಸೇವನೆಯನ್ನು ಸ್ಮರಿಸಿ ಅವರ ಸಮಾಜಮುಖಿ ಚಿಂತನೆಗಳನ್ನು ಮುಂದುವರೆಸುವ ಮುಖಾಂತರ ಅವರ ಆತ್ಮಕ್ಕೆ ಶಾಂತಿ ಕೋರೋಣ ಅವರ ನಿಧನದಿಂದಾದ ಕುಟುಂಬಕ್ಕಾದ ದುಃಖವನ್ನು ಭರಿಸುವಂತ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಹೆಚ್.ಮಂಜಪ್ಪ, ಖಾಜಾಂಚಿ ಆರ್ ಮೃತ್ಯುಂಜಯ (ಮುತ್ತು) ಮುಖಂಡರಾದ ಎಮ್.ವಿ. ಮಾಲತೇಶ್ ಕೆ.ಪ್ರಾಣೇಶ್, ರಂಗನಾಥ್, ಮೋಹನ್ (ಕೋನಸಾಗರ) ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ರೇವಣ್ಣ ದಾವಣಗೆರೆ, ನಿವೃತ್ತ ನೌಕರರ ಸಂಘದ ಗುರುರಾಜ್, ಮುರುಗೇಂದ್ರಪ್ಪ ಜಿ.ಟಿ.ಮಂಜುನಾಥ್ ಮಣಿ ಮಹೇಶ್, ದೇವರಾಜ್ ಇನ್ನೂ ಮುಂತಾದವರು ಭಾಗವಹಿಸಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j