ಚಿತ್ರದುರ್ಗ|ಅಲೆಮಾರಿ ಸಮುದಾಯಗಳಿಗೆ ನಿವೇಶನ, ಮನೆ ಹಾಗೂ ಮೂಲಸೌಕರ್ಯ ಒದಗಿಸಿ: ಸಚಿನ್ ಒತ್ತಾಯ

ಚಿತ್ರದುರ್ಗ ಆ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಲೆಮಾರಿ, ಅರೆಅಲೆಮಾರಿ ಸಮುದಾಯದವರಿಗೆ ನಿವೇಶನ, ಮನೆ, ಮೂಲ ಭೂತ ಸೌಲಭ್ಯಗಳನ್ನು ನೀಡುವಂತೆ ಸರ್ಕಾರವನ್ನು ಅಲೆಮಾರಿ ಬುಡಕಟ್ಟ ಮಹಾಸಭಾ ಗೌರವಾಧ್ಯಕ್ಷರು ಜಿಲ್ಲಾ ಸುಡುಗಾಡು ಸಿದ್ದರ ಸಂಘದ ಅಧ್ಯಕ್ಷರಾದ ಸಚಿನ್ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳ ಆಗುತ್ತಾ ಬಂದರೂ ಸಹ ಇನ್ನು ಸಹ ಅಲೆಮಾರಿಗಳಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ.ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರು ಸಹ ಯಾವುದೇ ಪ್ರಯೋಜನಾಗುತ್ತಿಲ್ಲ.ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಅಲೆಮಾರಿ ಸಮುದಾಯದ ಜನಾಂಗದವರಿದ್ದೇವೆ. ನಮಗೆ ಏಕೆ ಪ್ರಾತಿನಿಧ್ಯತೆ ಕೊಡುತ್ತಿಲ್ಲ…? ಎಂದು ಪ್ರಶ್ನಿಸಿದರು.

ಅಖಿಲ ಕರ್ನಾಟಲ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ಜಿಲ್ಲೆಯ 6 ತಾಲ್ಲೂಕುಗಳಲ್ಲಿ 10000 ಕ್ಕೂ ಹೆಚ್ಚು ಜನಸಂಖ್ಯೆ ಇರುತ್ತಾರೆ. ಇವರುಗಳು ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಕಡೆ ವಲಸೆ ಹೋಗಿ ಜೀವನ ಸಾಗಿಸುತ್ತಿದ್ದು, ಈ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಇದುವರೆಗೂ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಾಗಲೀ, ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಉದ್ದೇಶಗಳಿಗೆ ಸಾಲ ಸಹಾಯ ಧನವಾಗಲೀ ನಮ್ಮ ಸಮುದಾಯಕ್ಕೆ ಸಿಗುತ್ತಿಲ್ಲ.ಹಾಗೂ ನಮ್ಮ ಸಮುದಾಯವು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿರುತ್ತಾರೆ.ಚುನಾಯಿತ ಪ್ರತಿನಿಧಿಗಳು ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ.. ಚುನಾಯಿತ ಪ್ರತಿನಿಧಿಗಳಿಂದ ನಮಗೆ ನ್ಯಾಯ ಒದಗಿಸಲಿಕ್ಕೆ ಸಾಧ್ಯವಿಲ್ಲ. ನಿಗಮದ ಅಧ್ಯಕ್ಷರಾದ ಪಲ್ಲವಿ ರವರು ಯಾವಾಗಲೂ ಒಮ್ಮೆ ಪರಿಶೀಲನಾ ಸಭೆ ನಡೆಸುತ್ತಾರೆ. ಅದು ಯಾವುದೇ ರೀತಿಯ ಪ್ರಯೋಜವಾಗುವುದಿಲ್ಲ. ಅವರು ವಾಸ್ತವಕ್ಕೆ ಬಂದು ಅಲೆಮಾರಿ ಸಮುದಾಯಗಳಿಗೆ ಬಲ ತುಂಬಬೇಕಾಗಿದೆ.ಚಳ್ಳಕೆರೆ ತಾಲ್ಲೂಕಿನ ರಂಗವ್ವನಹಳ್ಳಿಯಲ್ಲಿ ಹೆಚ್ಚು ಅಲೆಮಾರಿಗಳಿದ್ದೇವೆ ಆದರೆ ಅಲ್ಲಿನ ಶಾಸಕರು (ಸಚಿವರು)ನಮ್ಮ ಬಳಿ ಬಂದು ಯಾರು ನೀವು ಎಂದು ಕೇಳುತ್ತಿದ್ದಾರೆ. ಅಲ್ಲಿನ ಅಲೆಮಾರಿಗಳಿಗೆ ಮೂಲ ಭೂತ ಸೌಕರ್ಯಗಳಿಲ್ಲ.ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡುವ ಬದಲು 49 ಉಪಜಾತಿಗಳಿರುವ ವರ್ಗಕ್ಕೆ ನಮ್ಮನ್ನು ಸೇರಿಸಿದ್ದಾರೆ… ನಾವು ಶೈಕ್ಷಣಿಕವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಂತಹ ಸಮುದಾಯರಾಗಿದ್ದು ಈ ಮೀಸಲಾತಿಯನ್ನು ಪಡೆಯಲು ಸಹ ನಾವು ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

ಅಲೆಮಾರಿ ಸಮುದಾಯಗಳು ಟೆಂಟ್ ಹಾಕಿಕೊಂಡು ಕುಲ ಕಸಬುಗಳನ್ನು ಮಾಡಿಕೊಂಡು ಜೀವನ ನಡೆಸು ತ್ತಿದ್ದಾರೆ.. ಈ ದೇಶದ ಮೂಲ ನಿವಾಸಿಗಳು ಅಲೆಮಾರಿಗಳು ಇವರಿಗೆ ಸ್ವಂತ ಸೂರಿಲ್ಲ.ಇವರು ತಮ್ಮ ಉಪ ಕಸುಬುಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಅವರಿಗೆ ಮೂಲಭೂತ ಸೌಕರ್ಯಗಳ ಒದಗಿಸಬೇಕು. ಜನಪ್ರತಿನಿಧಿಗಳು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಟೆಂಟ್‍ಗಳಿಗೆ ಭೇಟಿ ನೀಡುತ್ತಾರೆ ನಂತರ ಯಾರು ಸಹ ಆ ಕಡೆ ಭೇಟಿ ನೀಡುವುದಿಲ್ಲ ಎಂದ ಅವರು, ಈ ಸಮುದಾಯಕ್ಕೆ ಇದುವರೆಗೂ ನಿವೇಶನವಾಗಲೀ, ಮನೆಗಳಾಗಲೀ ಸರ್ಕಾರದಿಂದಾಗಲೀ, ಜಿಲ್ಲಾಡಳಿತದಿಂದಾಗಲೀ ವ್ಯವಸ್ಥೆ ಮಾಡಿರು ವುದಿಲ್ಲ. ಟೆಂಟ್‍ಗಳಲ್ಲಿ, ರಸ್ತೆ ಬದಿಗಳಲ್ಲಿ ತಾಡ್‍ಪಾಲ್ ಷೆಡ್‍ಗಳನ್ನು ಹಾಕಿ ಕೊಂಡು ವಾಸಿಸುತ್ತಿದ್ದು, ಇಂತಹ ಕುಟುಂಬಗಳಿಗೆ ಇದುವರೆಗೂ ಮೂಲಭೂತ ಸೌಲಭ್ಯಗಳು ಸಿಕ್ಕಿರುವುದಿಲ್ಲ. ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆದರೂ ಈ ಸಮುದಾಯವನ್ನು ಗುರುತಿಸದೇ ಚುನಾವಣೆ ಸಮಯದಲ್ಲಿ ಆಶ್ವಾಸನೆ ನೀಡು ವುದು ಅಷ್ಟೇ ಹೊರತು ನಂತರ ಈ ಭಾಗಕ್ಕೆ ಬರುವುದಿಲ್ಲ, ಇದರಿಂದ ನಮ್ಮ ಸಮುದಾಯವು ಎಲ್ಲಾ ಸೌಲಭ್ಯ ಗಳಿಂದ ವಂಚಿತರಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರವು ನಮ್ಮ ಸಮುದಾಯ ವನ್ನು ಗುರುತಿಸಿ ಅವರುಗಳಿಗೆ ವಾಸಿಸಲು ನಿವೇಶನ, ಮನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡು ವುದು, ಆರ್ಥಿಕವಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಅಲೆಮಾರಿ ಸಂಘದ ಅಧ್ಯಕ್ಷರಾದ ಲಕ್ಷ್ಮೀಕಾಂತ್, ಜಿಲ್ಲಾ ಸುಡುಗಾಡು ಸಿದ್ದರ ಸಂಘದ ಉಪಾಧ್ಯಕ್ಷರಾದ ಗುರುಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಗಂಗಪ್ಪ, ಮುಂಚೂಣಿ ಘಟಕದ ನಾಯಕರಾದ ಕುಮಾರ್, ರಂಗಪ್ಪ, ಬಾಬುರಾವ್, ಮಹಂತೇಶ್, ಕೃಷ್ಣಪ್ಪ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *