ವರದಿ ಮತ್ತು ಪೋಟೋ ಕೃಪೆ, ಸುರೇಶ್ ಪಟ್ಟಣ್
ಚಿತ್ರದುರ್ಗ ಏ. 29
ಯಡಿಯೂರಪ್ಪರವರು ಅಧಿಕಾರಕ್ಕಾಗಿ ಬಂದವರಲ್ಲ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರುತ್ತೇನೆ ಎಂಬ ಹಠದಲ್ಲಿ ರಾಜ್ಯದಲ್ಲಿ ಪ್ರವಾಸವನ್ನು ಮಾಡುವುದರ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದರು ಇವರು ಅದೃಷ್ಟದ ಮುಖ್ಯಮಂತ್ರಿಗಳಲ್ಲ ಪರಿಶ್ರಮದ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಗಳಾಗಿದ್ಧಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 50 ವರ್ಷದ ರಾಜಕೀಯ ಜೀವನದ ಹಿನ್ನಲೆಯಲ್ಲಿ ಮೇ. 9 ರಂದು ಚಿತ್ರದುರ್ಗ ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಅಭೀಮಾನೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರೀಶೀಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಯುವ ರಾಜಕಾರಣಿಗಳಿಗೆ ಹಾಗೂ ಯುವ ಪೀಳಿಗೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಾರಿ ದೀಪವಾಗಿದ್ದಾರೆ. ಅವರ 50 ವರ್ಷದ ರಾಜಕೀಯ ಜೀವನ ಬೇರೆಯವರಿಗೆ ಮಾರ್ಗದರ್ಶನ ವಾಗಬೇಕಿದೆ ಯಡಿಯೂರಪ್ಪರವರೆಂದರೆ ರಾಜ್ಯದಲ್ಲಿ ಹೋರಾಟವನ್ನು ನಡೆಸುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಿಎಸ್.ವೈ ಎಂದರೆ ಹೋರಾಟ ಎಂಬ ಮನೋಭಾವ ಎಲ್ಲರಲ್ಲೂ ಸಹಾ ಮೂಡಿದೆ ಎಂದರು.
ಜನ ಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿ ಇಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದು ಸಹಾ ಹೋರಾಟವನ್ನು ಮಾಡಲಿಲ್ಲ, ಬಡವರ ಕಣ್ಣಿರನ್ನು ಒರೆಸುವ ಸಲುವಾಗಿ ಕೆಲಸವನ್ನು ಮಾಡಿದ್ದಾರೆ 50 ವರ್ಷ ಬಡವರ ಪರವಾಗಿ ಕೆಲಸವನ್ನು ಮಾಡಿದ್ದಾರೆ ಸೈಕಲ್ ಮೇಲೆ ರಾಜ್ಯ ಪ್ರವಾಸ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಹೋರಾಟ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದ್ದು ಜನರ ಪ್ರೀತಿ ವಿಶ್ವಾಸದ ಮೂಲಕ ಅಧಿಕಾರವನ್ನು ಹಿಡಿಯುವ ಪ್ರಯತ್ನವನ್ನು ಮಾಡಿದ್ದಾರೆ ಎಂದ ಅವರು ಮೇ. 8ರಂದು ಮೈಸೂರು ಆನೆಗಳ ರೀತಿಯಲ್ಲಿ ವಿವಿಧ ಜಾನಪದ ಕಲಾ ತಂಡದೊಂದಿಗೆ ಯಡೆಯೂರಪ್ಪರವರ ಪುರ ಪ್ರವೇಶವಾಗಲಿದೆ. ಈ ಸಮಯದಲ್ಲಿ ವಿವಿಧ ರೀತಿಯ ಜಾನಪದ ಕಲಾ ಮೇಳಗಳು, ಸ್ಥಬ್ದ ಚಿತ್ರಗಳು ಇರಲಿದ್ದು, ಮೇ.9 ರಂದು ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಉದ್ಘಾಟನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ನೆರವೇರಿಸಿ ಯಡಿಯೂರಪ್ಪರವರನ್ನು ಸನ್ಮಾನಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಬರುವವರಿಗೆ ಬೆಳಿಗ್ಗೆಯಿಂದಲೇ ಉಪಹಾರ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಇಂದು ಸಹಾ ಕೊಪ್ಪಳ, ವಿಜಯನಗರ, ಬಳ್ಳಾರಿಯ ಮುಖಂಡರು ಶ್ರೀಗಳನ್ನು ಬೇಟಿ ಮಾಡಿ ಕಾರ್ಯಕ್ರಮಕ್ಕ ಆಹ್ವಾನವನ್ನು ನೀಡಲಾಗಿದೆ ಈ ಮೂರು ಜಿಲ್ಲೆಗಳಿಂದಲೇ ಸುಮಾರು 1.50 ಲಕ್ಷ ಜನ ಬರುವವರಿದ್ದಾರೆ ಎಂದ ಅವರು, ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪರವರ ಪ್ರಾರಂಭದಲ್ಲಿ ಬಳಸಿದ ಅಂಬಾಸಿಡರ್ ಕಾರು ಸಿಕೆಆರ್ 45 ಇಲ್ಲಿಗೆ ತರಲಾಗುವುದು ಇದನ್ನು ಜನತೆ ನೊಡಲು ಅವಕಾಶವನ್ನು ಕಲ್ಪಿಸಲಾಗಿದೆ. ಇಂದು ಬಿಜೆಪಿ ಯಡಿಯೂರಪ್ಪರವರ ಅಭಿಮಾನಿಗಳ ಹಾಗೂ ಹಿರಿಯರು ಸೇರಿಕೊಂಡು ಅಭೀಮಾನದಿಂದ ಮಾಡುತ್ತಿರುವ ಕಾರ್ಯಕ್ರಮವಾಗಿದೆ ಇದರಲ್ಲಿ ಜೆಡಿಎಸ್‍ನ ಕುಮಾರಸ್ವಾಮಿ ಸಹಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಈ ಕಾರ್ಯಕ್ರಮಕ್ಕೆ ಅಮಿತಾ ಷಾರವರಿಗೆ ಗೋ ಬಾಕ್ ಎಂಬ ಮಾತು ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬರುತ್ತಿದೆ ಎಂಬ ಮಾತಿಗೆ ಇಂದು ಕಾಂಗ್ರೆಸ್ ರವರಿಂದ ಪ್ರೇರಿತವಾದ ಕಾರ್ಯವಾಗಿರಬಹುದು ಅಮಿತಾ ಷಾರವರು ಭರವಸೆಯನ್ನು ನೀಡಿದ್ದಾರೆ ಎಂದರೆ ಅದನ್ನು ಈಡೇರಿಸುತ್ತಾರೆ ಎಂಬ ಭರವಸೆ ನನಗೆ ಇದು, ಇದರಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕೆ.ಟಿ.ಕುಮಾರಸ್ವಾಮಿ, ಖನಿಜ ನಿಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ರಾಜ್ಯ ಕಾರ್ಯದರ್ಶಿ ರಮೇಶ್ ಗೌಡ್ರು, ವಿಭಾಗ ಸಹಾ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ವೆಂಕಟೇಶ್ ಯಾದವ್, ಮೋಹನ್ ಕುಮಾರ್, ವೀರಶೈವ ಬ್ಯಾಂಕ್ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ನಗರಸಭೆಯ ಮಾಜಿ ಸದಸ್ಯರಾದ ಬಿ. ಸುರೇಶ್, ಮಾಜಿ ಪ್ರಧಾನ ಕಾರ್ಯದರ್ಶಿ ಗಳಾದ ಸಂಪತ್‍ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ನಂದಿ ನಾಗರಾಜ್, ರಾಜ್ಯ ರೈತ ಮೋರ್ಚಾದ ಮಲ್ಲಿಕಾರ್ಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.

