ಕಾಂಗ್ರೆಸ್ ‘ಸಂಘಟನೆ ಸೃಜನ್ ಅಭಿಯಾನ’: ಕರ್ನಾಟಕದ 34 ಜಿಲ್ಲೆಗಳಿಗೆ ಎಐಸಿಸಿ ವೀಕ್ಷಕರ ನೇಮಕ, ಇಲ್ಲಿದೆ ಸಂಪೂರ್ಣ ಪಟ್ಟಿ

ನವದೆಹಲಿ: ‘ಸಂಘಟನೆ ಸೃಜನ್ ಅಭಿಯಾನ’ದ ಅಡಿಯಲ್ಲಿ ಪಕ್ಷದ ತಳಮಟ್ಟದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಮಹತ್ವದ ಹೆಜ್ಜೆ ಇಟ್ಟಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಐಸಿಸಿ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಜುಲೈ 10ರಂದು ಈ ನೂತನ ವೀಕ್ಷಕರ ಅಧಿಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ. ಕರ್ನಾಟಕ ರಾಜ್ಯದ ಮಟ್ಟಿಗೆ ಒಟ್ಟು 34 ಸಂಘಟನಾ ಜಿಲ್ಲೆಗಳಿಗೆ 34 ಪ್ರತ್ಯೇಕ ವೀಕ್ಷಕರನ್ನು ನೇಮಿಸಲಾಗಿದೆ. ಜಿಲ್ಲಾಧ್ಯಕ್ಷರ ಬದಲಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವುದು ಹಾಗೂ ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸುವುದು ಈ ವೀಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ.

ಕರ್ನಾಟಕದ ಜೊತೆಗೆ ಚಂಡೀಗಢ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ, ಲಕ್ಷದ್ವೀಪ ಹಾಗೂ ಲಡಾಖ್ ಪ್ರದೇಶಗಳಿಗೂ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಕರ್ನಾಟಕದ ಜಿಲ್ಲಾವಾರು ಎಐಸಿಸಿ ವೀಕ್ಷಕರ ಸಂಪೂರ್ಣ ಪಟ್ಟಿ:

ಕ್ರ.ಸಂಎಐಸಿಸಿ ವೀಕ್ಷಕರ ಹೆಸರುಹಂಚಿಕೆ ಮಾಡಲಾದ ಸಂಘಟನಾ ಜಿಲ್ಲೆ(ಗಳು)
1ಬೆಳ್ಳಯ್ಯ ನಾಯಕ್ಬಾಗಲಕೋಟೆ
2ಮತಿ ರೋಸ್ಲಿನಾ ಟಿರ್ಕಿಉತ್ತರ ಕನ್ನಡ
3ಲಕ್ಷ್ಮೀಕಾಂತ್ ರಾವ್ರಾಯಚೂರು
4ಡಾ. ಕೆ. ಜಯಕುಮಾರ್ಚಿಕ್ಕೋಡಿ
5ಕ್ರಿಸ್ಟೋಫರ್ ತಿಲಕ್ಬೆಂಗಳೂರು ದಕ್ಷಿಣ
6ನೀರಜ್ ಡಾಂಗಿಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ರಾಮನಗರ
7ರಾಜೇಶ್ ಲಲೋತಿಯಬೀದರ್
8ಕುಮಾರಿ ಪ್ರಣಿತಿ ಶಿಂಧೆಕಲಬುರಗಿ
9ಅರುಣ್ ಯಾದವ್ಬಳ್ಳಾರಿ ಗ್ರಾಮಾಂತರ
10ಕುಮಾರಿ ಆರ್. ಸುಧಾಹಾಸನ
11ರಿಪುನ್ ಬೋರಾಚಿತ್ರದುರ್ಗ
12ರಾಹುಲ್ ಬಾಲ್ದಾವಣಗೆರೆ
13ಹಿಮ್ಮತ್ ಸಿಂಗ್ ಪಟೇಲ್ಉಡುಪಿ
14ಕುಮಾರಿ ಪಾಲಕ್ ವರ್ಮಾಚಿಕ್ಕಬಳ್ಳಾಪುರ
15ಚರಣ್ ಸಿಂಗ್ ಸಪ್ರಾಬೆಂಗಳೂರು ಪಶ್ಚಿಮ
16ಕುಮಾರಿ ಜೆಬಿ ಮಥಾರ್ತುಮಕೂರು
17ಅಮೀನ್ ಪಟೇಲ್ವಿಜಯಪುರ
18ಅಜ್ಮತುಲ್ಲಾ ಹುಸೇನಿಧಾರವಾಡ ಗ್ರಾಮಾಂತರ, ಹುಬ್ಬಳ್ಳಿ ನಗರ
19ನದೀಮ್ ಜಾವೇದ್ಬಳ್ಳಾರಿ ನಗರ
20ಶೇಖ್ ಮಸ್ತಾನ್ ವಾಲಿಹಾವೇರಿ
21ಬೆನ್ನಿ ಬೆಹನನ್ಬೆಂಗಳೂರು ಪೂರ್ವ
22ಡೀನ್ ಕುರಿಯಾಕೋಸ್ದಕ್ಷಿಣ ಕನ್ನಡ
23ಸೈಮನ್ ಅಲೆಕ್ಸ್ಮಂಡ್ಯ
24ರಾಮಕಿಶನ್ ಓಜಾಕೋಲಾರ
25ಸಬರಿನಾಥ್ಚಾಮರಾಜನಗರ
26ಎಸ್. ಶರತ್ಶಿವಮೊಗ್ಗ
27ರಾಜಮೋಹನ್ ಉಣ್ಣಿತಾನ್ಕೊಡಗು, ಮೈಸೂರು ನಗರ
28ಬಿಸ್ವರಂಜನ್ ಮೊಹಂತಿಚಿಕ್ಕಮಗಳೂರು
29ವಿವೆಲ್ ಬನ್ಸಾಲ್ಗದಗ, ಕೊಪ್ಪಳ
30ರಾಜೇಶ್ ಠಾಕೂರ್ಮೈಸೂರು ಗ್ರಾಮಾಂತರ
31ಹರ್ಕಲ ವೇಣುಗೋಪಾಲ್ ರಾವ್ವಿಜಯನಗರ
32ಮನೋಜ್ ಚೌಹಾಣ್ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ
33ಬಿ. ಪಿ. ಸಿಂಗ್ಬೆಂಗಳೂರು ಉತ್ತರ
34ಜೆಟ್ಟಿ ಕುಸುಮ್ ಕುಮಾರ್ಯಾದಗಿರಿ

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *