Daily GK Quiz : ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಹುದಾದ ತುರ್ತು ಪರಿಸ್ಥಿತಿ ಯಾವುದು?

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.

  1. ಕರ್ನಾಟಕ ರಾಜ್ಯದಲ್ಲಿ “Fiscal Responsibility Act” ಜಾರಿಗೆ ಬಂದ ವರ್ಷ ಯಾವುದು?
    ಉತ್ತರ: 2002

2. ಕರ್ನಾಟಕದ ಪ್ರಸ್ತುತ ಒಟ್ಟು ರಾಜ್ಯ ಗೃಹ ಉತ್ಪನ್ನ (GSDP) ಲೆಕ್ಕಾಚಾರಕ್ಕೆ ಬಳಸಲಾಗುತ್ತಿರುವ ಮೂಲ ವರ್ಷ ಯಾವುದು?
ಉತ್ತರ: 2011–12

3. “ಬಜೆಟ್ ಘಾಟು (Fiscal Deficit)” ಎಂದರೆ ಏನು?
ಉತ್ತರ: ಒಟ್ಟು ವೆಚ್ಚ ಮತ್ತು ಒಟ್ಟು ಆದಾಯದ ನಡುವಿನ ಅಂತರ

4. ಕರ್ನಾಟಕ ರಾಜ್ಯದಲ್ಲಿ “Green Energy Corridor” ಯೋಜನೆಯ ಉದ್ದೇಶವೇನು?
ಉತ್ತರ: ನವೀಕರಿಸಬಹುದಾದ ಇಂಧನ ಸಾಗಣೆಗೆ ಮೂಲಸೌಕರ್ಯ ನಿರ್ಮಾಣ

5. ಭಾರತದಲ್ಲಿ 6G ತಂತ್ರಜ್ಞಾನ ಸಂಶೋಧನೆಗೆ ಆರಂಭಿಸಲಾದ ಮಿಷನ್ ಯಾವುದು?
ಉತ್ತರ: Bharat 6G Mission

6. “Li-Fi” ತಂತ್ರಜ್ಞಾನದಲ್ಲಿ ಡೇಟಾ ಪ್ರಸರಣಕ್ಕೆ ಯಾವುದು ಬಳಸಲಾಗುತ್ತದೆ?
ಉತ್ತರ: ದೃಶ್ಯ ಬೆಳಕು (Visible Light)

7. ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಹುದಾದ ತುರ್ತು ಪರಿಸ್ಥಿತಿ ಯಾವುದು?
ಉತ್ತರ: ರಾಷ್ಟ್ರೀಯ ತುರ್ತು ಪರಿಸ್ಥಿತಿ (Article 352)

8. “Judicial Review” ಎಂಬ ತತ್ವವು ಭಾರತಕ್ಕೆ ಯಾವ ದೇಶದ ಸಂವಿಧಾನದಿಂದ ಬಂದಿದೆ?
ಉತ್ತರ: ಅಮೇರಿಕಾ ಸಂಯುಕ್ತ ಸಂಸ್ಥಾನ

9 . “Carbon Border Adjustment Mechanism (CBAM)” ಯಾವ ಸಂಘಟನೆಯ ನೀತಿ?
ಉತ್ತರ: ಯುರೋಪಿಯನ್ ಯೂನಿಯನ್

10. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯವನ್ನು ಉತ್ತೇಜಿಸುವ ಸಂಸ್ಥೆ ಯಾವುದು?
ಉತ್ತರ: IN-SPACe

Leave a Reply

Your email address will not be published. Required fields are marked *