Daily Horoscope, June 04: ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಆರ್ಥಿಕ, ವೃತ್ತಿ ಹಾಗೂ ಕೌಟುಂಬಿಕ ಭವಿಷ್ಯ

ಇಂದಿನ ಗ್ರಹಗತಿಗಳ ಪ್ರಕಾರ ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ, ಸ್ವಾವಲಂಬನೆಯೆಡೆಗೆ ಒಲವು ಹಾಗೂ ಕೆಲವು ಅನಿರೀಕ್ಷಿತ ತಿರುವುಗಳು ಕಂಡುಬರಲಿವೆ. ಗುರುವಾರದ ಈ ದಿನ ಮೇಷದಿಂದ ಮೀನ ರಾಶಿಯವರೆಗಿನ ದೈನಂದಿನ ಭವಿಷ್ಯ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಇಂದಿನ ಪಂಚಾಂಗ

  • ಶಾಲಿವಾಹನ ಶಕೆ: ೧೯೪೯ ಪರಾಭವ ಸಂವತ್ಸರ
  • ಋತು ಹಾಗೂ ಅಯನ: ಗ್ರೀಷ್ಮ ಋತು, ಉತ್ತರಾಯಣ
  • ಮಾಸ ಹಾಗೂ ಪಕ್ಷ: ಅಧಿಕ ಜ್ಯೇಷ್ಠ ಮಾಸ, ಕೃಷ್ಣ ಪಕ್ಷ
  • ತಿಥಿ: ಚತುರ್ಥೀ
  • ವಾರ: ಗುರುವಾರ
  • ನಕ್ಷತ್ರ: ಉತ್ತರಾಷಾಢಾ (ನಿತ್ಯನಕ್ಷತ್ರ), ರೋಹಿಣೀ (ಮಹಾನಕ್ಷತ್ರ)
  • ಯೋಗ: ಶುಭ
  • ಕರಣ: ಬಾಲವ
  • ಸೂರ್ಯೋದಯ: ಬೆಳಿಗ್ಗೆ 05:56
  • ಸೂರ್ಯಾಸ್ತ: ಸಂಜೆ 06:49

ಶುಭಾಶುಭ ಕಾಲಗಳು:

  • ರಾಹು ಕಾಲ: 13:59 ರಿಂದ 15:36
  • ಯಮಗಂಡ ಕಾಲ: 05:56 ರಿಂದ 07:33
  • ಗುಳಿಕ ಕಾಲ: 09:09 ರಿಂದ 10:46

ಇಂದಿನ ರಾಶಿ ಭವಿಷ್ಯ

ಮೇಷ ರಾಶಿ ದಾಂಪತ್ಯ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳು ದೂರವಾಗಲಿವೆ. ಹಿಂದಿನ ಕಳಂಕಗಳಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ಮಾಡುವಿರಿ. ಕಚೇರಿಯಲ್ಲಿ ಕೆಲಸದ ಒತ್ತಡವಿದ್ದರೂ ಅದನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಅನಗತ್ಯ ಮಾತುಗಳಿಗೆ ಕಡಿವಾಣ ಹಾಕಿ. ಅನಿರೀಕ್ಷಿತ ಸುದ್ದಿಯೊಂದು ನಿಮ್ಮನ್ನು ತಲುಪಬಹುದು. ಆಪ್ತರ ಮೇಲಿನ ನಂಬಿಕೆಯಲ್ಲಿ ಎಚ್ಚರಿಕೆ ಇರಲಿ.

ವೃಷಭ ರಾಶಿ ಪ್ರತಿಯೊಂದು ವಿಚಾರದಲ್ಲೂ ಸ್ಪಷ್ಟತೆ ಇರಲಿ ಹಾಗೂ ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸಗಳನ್ನೇ ಮಾಡಿ. ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ. ಕೆಲವು ಕಾರ್ಯಗಳಲ್ಲಿ ವಿಳಂಬವಾದರೂ, ಕೆಲಸಗಳು ನಿರಂತರವಾಗಿ ಸಾಗಲಿವೆ. ಹಿರಿಯರ ಮಾರ್ಗದರ್ಶನದಿಂದ ಒಳಿತಾಗಲಿದೆ. ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ಹಾಗೂ ಹೊಸ ವಸ್ತುಗಳ ಖರೀದಿಯ ಯೋಗವಿದೆ.

ಮಿಥುನ ರಾಶಿ ಸಾಲ ನೀಡಿದವರಿಂದ ಕಟುವಾದ ಮಾತುಗಳನ್ನು ಎದುರಿಸಬೇಕಾದೀತು. ಆದರೆ ನಿಮ್ಮ ಶ್ರಮ ಯಶಸ್ಸು ತಂದುಕೊಡಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೌಟುಂಬಿಕ ಜವಾಬ್ದಾರಿ ಹೆಚ್ಚಲಿದ್ದು, ಹಣಕಾಸಿನ ನಿರ್ವಹಣೆ ಬಹಳ ಮುಖ್ಯ. ಸಹೋದರರೊಂದಿಗೆ ಮಾತನಾಡುವಾಗ ಸಂಯಮವಿರಲಿ. ರಾಜಕೀಯ ಕ್ಷೇತ್ರದವರು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ.

ಕರ್ಕಾಟಕ ರಾಶಿ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳಿ. ಕೆಲಸದಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ದೂರದ ಸಂಬಂಧಿಕರಿಂದ ಶುಭವಾರ್ತೆ ಕೇಳುವಿರಿ. ಆರ್ಥಿಕವಾಗಿ ಸ್ವಲ್ಪ ಒತ್ತಡವಿದ್ದರೂ ಮಕ್ಕಳಿಂದ ಸಕಾರಾತ್ಮಕ ಪ್ರೇರಣೆ ಸಿಗಲಿದೆ. ವ್ಯಕ್ತಿ ದ್ವೇಷ ಮಾಡುವುದನ್ನು ತಪ್ಪಿಸಿ.

ಸಿಂಹ ರಾಶಿ ಹಳೆಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆ ಇದೆ, ಆದರೆ ಧೈರ್ಯದಿಂದ ಎದುರಿಸಿದರೆ ಪರಿಹಾರ ಖಚಿತ. ನಿಮ್ಮ ಮೃದು ಮಾತು ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಇಷ್ಟವಾಗದ ವಿಚಾರಗಳ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸುವಿರಿ. ವೈವಾಹಿಕ ಬದುಕಿನಲ್ಲಿ ಸ್ವಲ್ಪ ಹೊಂದಾಣಿಕೆ ಅಗತ್ಯ. ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಇತರರ ಮೆಚ್ಚುಗೆಗೆ ಪಾತ್ರರಾಗುವಿರಿ.

ಕನ್ಯಾ ರಾಶಿ ಮಾತಿನ ಮೇಲೆ ಹಿಡಿತವಿರಲಿ, ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಯಂತ್ರಿಸಿ. ಆಸ್ತಿ ವಿಚಾರದಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಭವಿಷ್ಯದ ಯೋಜನೆಗಳ ಬಗ್ಗೆ ಗಂಭೀರವಾಗಿ ಚಿಂತಿಸಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಶಂಸೆ, ಹೂಡಿಕೆಯಲ್ಲಿ ಉತ್ತಮ ಲಾಭ ಸಿಗಲಿದೆ. ಇಂದಿನ ಪ್ರಯಾಣವು ಕೊಂಚ ನಿರಾಸೆ ಮೂಡಿಸುವ ಸಾಧ್ಯತೆ ಇದೆ.

ತುಲಾ ರಾಶಿ ಅನಿರೀಕ್ಷಿತ ವಿಚಾರಗಳು ನಿಮ್ಮೆದುರು ಪ್ರಸ್ತಾಪವಾಗಲಿವೆ. ನಡವಳಿಕೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿದರೆ ನಷ್ಟ ಕಟ್ಟಿಟ್ಟ ಬುತ್ತಿ. ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳಿ. ಇತರರಿಂದ ಅನಿರೀಕ್ಷಿತ ಸಹಾಯ ದೊರೆಯಲಿದೆ. ಮಿತಭಾಷಿಯಾಗಿರುವುದು ಇಂದಿನ ಮಟ್ಟಿಗೆ ಅತ್ಯುತ್ತಮ.

ವೃಶ್ಚಿಕ ರಾಶಿ ಸೋಮಾರಿತನವನ್ನು ಬದಿಗೊತ್ತಿ ಉತ್ಸಾಹದಿಂದ ಕೆಲಸ ಮಾಡಿ. ವೃತ್ತಿಜೀವನದಲ್ಲಿ ನಿಖರತೆ ಅಗತ್ಯ. ಆದಾಯ ಹೆಚ್ಚಳಕ್ಕೆ ದಾರಿ ಕಂಡುಕೊಳ್ಳುವಿರಿ. ಸಣ್ಣಪುಟ್ಟ ಆರ್ಥಿಕ ಏರುಪೇರುಗಳು ಚಿಂತೆಗೀಡುಮಾಡಬಹುದು. ಪ್ರಬಲ ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ನಿಮಗಿದೆ. ಹೂಡಿಕೆ ವಿಚಾರದಲ್ಲಿ ಸ್ನೇಹಿತರ ಸಲಹೆ ಪಡೆಯಿರಿ. ಮಕ್ಕಳಿಗೆ ಜವಾಬ್ದಾರಿ ವಹಿಸಿ ನಿರಾಳರಾಗುವಿರಿ.

ಧನು ರಾಶಿ ಸಮಯದ ಸದುಪಯೋಗ ಮಾಡಿಕೊಳ್ಳಿ. ಆರೋಗ್ಯದಲ್ಲಿ ಏರುಪೇರಾಗುವ ಮುನ್ನ ಪ್ರಮುಖ ಕೆಲಸಗಳನ್ನು ಮುಗಿಸಿಕೊಳ್ಳಿ. ಕುಟುಂಬದಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಐಷಾರಾಮಿ ವಸ್ತುಗಳು ಹಾಗೂ ಬಟ್ಟೆಬರೆ ಖರೀದಿಗೆ ಹೆಚ್ಚು ಹಣ ಖರ್ಚು ಮಾಡುವಿರಿ. ಸಂಗಾತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ತುಸು ಕಷ್ಟವಾಗಬಹುದು.

ಮಕರ ರಾಶಿ ಅವಕಾಶಗಳಿಗಾಗಿ ಕಾಯುವ ಬದಲು, ನೀವೇ ಮುನ್ನುಗ್ಗಿ. ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ. ಲೆಕ್ಕಾಚಾರಗಳು ಕೊಂಚ ತಪ್ಪುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಂತಸದ ಸಮಯ ಕಳೆಯುವಿರಿ. ಮೇಲಧಿಕಾರಿಗಳೊಂದಿಗಿನ ಅಸಮಾಧಾನವನ್ನು ಬಗೆಹರಿಸಿಕೊಳ್ಳಿ. ಆರ್ಥಿಕ ಯೋಜನೆಗಳು ಮತ್ತು ಆರೋಗ್ಯದ ಕಡೆ ಗಮನಹರಿಸಿ. ಓಡಾಟದಲ್ಲಿ ಅಡೆತಡೆಗಳಿರಬಹುದು.

ಕುಂಭ ರಾಶಿ ಇಂದು ನಿಮ್ಮ ನೈಜ ಸಾಮರ್ಥ್ಯ ಅನಾವರಣಗೊಳ್ಳಲಿದೆ, ಆದರೆ ಅಹಂಕಾರಕ್ಕೆ ಜಾಗ ಕೊಡಬೇಡಿ. ನಿಮ್ಮ ಉತ್ಸಾಹ ಇತರರಿಗೂ ಪ್ರೇರಣೆಯಾಗಲಿದೆ. ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ಮತ್ತು ಹೆಚ್ಚಿನ ಲಾಭ ಸಿಗಲಿದೆ. ಸ್ನೇಹಿತರ ಬೆಂಬಲವಿರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ವೈಯಕ್ತಿಕ ಹಣಕಾಸು ವಹಿವಾಟುಗಳಲ್ಲಿ ಪಾರದರ್ಶಕತೆ ಇರಲಿ.

ಮೀನ ರಾಶಿ ತಾಳ್ಮೆಯೇ ಇಂದಿನ ನಿಮ್ಮ ಪ್ರಮುಖ ಅಸ್ತ್ರ. ಸಮಾರಂಭಗಳಲ್ಲಿ ಭಾಗವಹಿಸುವ ಯೋಗವಿದೆ. ಕೋಪದಿಂದ ವರ್ತಿಸಿ ನಗೆಪಾಟಲಿಗೀಡಾಗಬೇಡಿ. ನಾಯಕತ್ವ ವಹಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ಜವಾಬ್ದಾರಿಗಳನ್ನು ಬೇಸರ ಮಾಡಿಕೊಳ್ಳದೆ, ಸಂತೋಷದಿಂದ ಹಾಗೂ ಸಮಯಕ್ಕೆ ಸರಿಯಾಗಿ ನಿಭಾಯಿಸಿ.

Leave a Reply

Your email address will not be published. Required fields are marked *