Daily Horoscope,20 June :ಈ ದಿನ ಯಾವ ರಾಶಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ? ಇಲ್ಲಿದೆ ಸಂಪೂರ್ಣ ವಿವರ

ಪ್ರತಿಯೊಬ್ಬರ ದಿನಚರಿಯಲ್ಲೂ ಗ್ರಹಗತಿಗಳ ಪ್ರಭಾವ ವಿಭಿನ್ನವಾಗಿರುತ್ತದೆ. ಜೂನ್ 20ರ ಈ ದಿನ ನಿಮ್ಮ ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಹಾಗೂ ಆರೋಗ್ಯದ ದೃಷ್ಟಿಯಿಂದ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದಿನ ಪಂಚಾಂಗ (ಜೂನ್ 20)

  • ಸಂವತ್ಸರ: ಪರಾಭವ
  • ಆಯನ: ಉತ್ತರಾಯಣ
  • ಋತು: ಗ್ರೀಷ್ಮ
  • ಮಾಸ: ಜ್ಯೇಷ್ಠ
  • ಪಕ್ಷ: ಕೃಷ್ಣ
  • ತಿಥಿ: ಷಷ್ಠೀ
  • ನಕ್ಷತ್ರ: ಮಘಾ (ಮಹಾನಕ್ಷತ್ರ: ಮೃಗಶಿರಾ)
  • ಯೋಗ: ಧ್ರುವ
  • ಕರಣ: ತೈತಿಲ
  • ಸೂರ್ಯೋದಯ: ಬೆಳಿಗ್ಗೆ 05:55
  • ಸೂರ್ಯಾಸ್ತ: ಸಂಜೆ 06:46

ಶುಭಾಶುಭ ಸಮಯಗಳು:

  • ರಾಹುಕಾಲ: ಬೆಳಿಗ್ಗೆ 09:48 ರಿಂದ 10:45 ರವರೆಗೆ
  • ಯಮಗಂಡ ಕಾಲ: ಮಧ್ಯಾಹ್ನ 01:58 (13:58) ರಿಂದ 03:34 (15:34) ರವರೆಗೆ
  • ಗುಳಿಕ ಕಾಲ: ಬೆಳಿಗ್ಗೆ 05:56 ರಿಂದ 07:32 ರವರೆಗೆ

ದ್ವಾದಶ ರಾಶಿಗಳ ಇಂದಿನ ಭವಿಷ್ಯ

  • ಮೇಷ ರಾಶಿ: ಕಚೇರಿ ಅಥವಾ ಮನೆಯಲ್ಲಿ ಸಹೋದ್ಯೋಗಿಗಳು ಮತ್ತು ಕುಟುಂಬದವರೊಂದಿಗೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ. ಯಾವುದೇ ವಿಚಾರದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಮಾತನಾಡಿ ಇತರರ ಮನಸ್ಸು ನೋಯಿಸದಿರಿ. ಶಿಸ್ತಿನಿಂದ ಕೆಲಸ ಮಾಡಿದರೆ ನಿಮ್ಮ ದೊಡ್ಡ ಕನಸುಗಳು ನನಸಾಗುವ ಕಾಲವಿದು.
  • ವೃಷಭ ರಾಶಿ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ವಿವೇಚನೆ ಇರಲಿ. ಹಿರಿಯರ ಅಥವಾ ಪಿತ್ರಾರ್ಜಿತ ಆಸ್ತಿ ನಿಮ್ಮ ಕೈಸೇರುವ ಯೋಗವಿದೆ. ನಿಮ್ಮಲ್ಲಿ ಸಹಾಯ ಕೇಳಿ ಬಂದವರಿಗೆ ಇಲ್ಲವೆನ್ನದೆ, ಕೈಲಾದಷ್ಟು ದಾನ ಮಾಡಿ. ವ್ಯಾಪಾರಸ್ಥರಿಗೆ ಆರ್ಥಿಕ ಲಾಭದ ನಿರೀಕ್ಷೆ ಇದೆ.
  • ಮಿಥುನ ರಾಶಿ: ಸತತ ಪ್ರಯತ್ನವಿದ್ದರೆ ಮಾತ್ರ ಯಶಸ್ಸು ಒಲಿಯುತ್ತದೆ, ತಾಳ್ಮೆಯಿಂದ ಕಾಯಿರಿ. ನಿಮ್ಮ ಬೆನ್ನ ಹಿಂದಿರುವ ಶತ್ರುಗಳ ಬಗ್ಗೆ ಎಚ್ಚರವಿರಲಿ. ಇತರರ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿ, ದೈವ ಭಕ್ತಿಯತ್ತ ಗಮನಹರಿಸಿದರೆ ಮಾನಸಿಕ ನೆಮ್ಮದಿ ಸಿಗಲಿದೆ.
  • ಕರ್ಕಾಟಕ ರಾಶಿ: ಆಸ್ತಿ ವಿಚಾರದಲ್ಲಿ ಮಕ್ಕಳಿಂದ ಮಾನಸಿಕ ಒತ್ತಡ ಎದುರಾಗುವ ಸಾಧ್ಯತೆ ಇದೆ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ. ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಒಳಿತು ಮತ್ತು ನಿಮ್ಮ ಮಿತಿಯಲ್ಲಿ ನೀವಿರುವುದು ಕ್ಷೇಮ.
  • ಸಿಂಹ ರಾಶಿ: ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಹಾಗೂ ಬುದ್ಧಿಮತ್ತೆಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಲಿದೆ. ಕೇವಲ ಹಣ ಉಳಿಸುವ ಭರದಲ್ಲಿ ಅಮೂಲ್ಯವಾದದ್ದನ್ನು ಕಳೆದುಕೊಳ್ಳದಿರಿ. ಸುತ್ತಮುತ್ತಲಿನ ಹಿತಶತ್ರುಗಳ ಕಾಟವಿರಲಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಿ.
  • ಕನ್ಯಾ ರಾಶಿ: ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದಾಯಕ ದಿನ. ಆದಾಯದ ಹೊಸ ಮೂಲಗಳನ್ನು ಕಂಡುಕೊಳ್ಳಲಿದ್ದೀರಿ. ಹೊಸ ವಾಹನ ಖರೀದಿಸುವ ಯೋಗವಿದ್ದು, ಆಸ್ತಿ ಮಾರಾಟದ ಬಗ್ಗೆಯೂ ಒಲವು ತೋರುವಿರಿ. ಬರಬೇಕಾದ ಹಣ ವಿಳಂಬವಾದರೂ ಚಿಂತೆ ಬೇಡ.
  • ತುಲಾ ರಾಶಿ: ಸಂಬಂಧಿಕರ ಚುಚ್ಚುಮಾತುಗಳು ಬೇಸರ ತರಿಸಬಹುದು. ಆಪ್ತರಿಗೆ ಸಾಲ ನೀಡಲು ಹೋಗಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿಕೊಳ್ಳದಿರಿ. ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದ್ದು, ಕುಟುಂಬ ಹಾಗೂ ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ.
  • ವೃಶ್ಚಿಕ ರಾಶಿ: ಅನಿರೀಕ್ಷಿತವಾಗಿ ದೂರದ ಪ್ರಯಾಣ ಮಾಡಬೇಕಾಗಿ ಬರಬಹುದು. ಹಲವು ದಿನಗಳ ಹಳೆಯ ಸಮಸ್ಯೆಗಳಿಗೆ ಇಂದು ಸೂಕ್ತ ಪರಿಹಾರ ದೊರೆಯಲಿದೆ. ನಿಮ್ಮ ಮನಸ್ಸಿನ ಭಾರವನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಸಂಗಾತಿಯ ಹೆಸರಿನಲ್ಲಿ ಆಸ್ತಿ ಖರೀದಿಸಲು ಇದು ಸಕಾಲ.
  • ಧನು ರಾಶಿ: ಹೂಡಿಕೆಗಳಿಂದ ಉತ್ತಮ ಲಾಭ ಬರಲಿದ್ದು, ಸೃಜನಶೀಲ ವ್ಯಕ್ತಿಗಳಿಗೆ ಹೊಸ ಅವಕಾಶಗಳು ಒದಗಿಬರಲಿವೆ. ದಂಪತಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಕೊಂಚ ಕೋಪ ಬರಬಹುದು.
  • ಮಕರ ರಾಶಿ: ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಹೊಸ ಸ್ನೇಹಿತರು ಪರಿಚಯವಾಗಲಿದ್ದಾರೆ. ನಿರೀಕ್ಷಿತ ಧನಲಾಭವಾಗಲಿದ್ದು, ಮಕ್ಕಳಿಂದಲೂ ಖುಷಿ ಸಿಗಲಿದೆ. ವ್ಯಾಪಾರದಲ್ಲಿ ಆಲಸ್ಯ ತೋರದೆ, ಚುರುಕಿನಿಂದ ಕಾರ್ಯನಿರ್ವಹಿಸಿದರೆ ಲಾಭ ಖಚಿತ.
  • ಕುಂಭ ರಾಶಿ: ಇತರರಿಗೆ ಸಾಲವಾಗಿ ನೀಡಿದ ಹಣ ಮರಳಿ ಬರುವ ಸಾಧ್ಯತೆ ಕಡಿಮೆ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ ನಿಮ್ಮದಾಗಲಿದೆ. ಪ್ರತಿಯೊಂದಕ್ಕೂ ಇತರರ ಸೂಚನೆ ಕಾಯದೆ, ಸ್ವಂತ ನಿರ್ಧಾರ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ಇಂದು ಮಿಶ್ರಫಲ ಪ್ರಾಪ್ತಿ.
  • ಮೀನ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ರಾಜಕೀಯ ವ್ಯಕ್ತಿಗಳ ಒಡನಾಟ ಬೆಳೆಯಲಿದೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *