Dewald Brevis: 6,6,6,6,6,6,6: ‘ಬೇಬಿ ಎಬಿ’ ಪರಾಕ್ರಮಕ್ಕೆ ಮಕಾಡೆ ಮಲಗಿದ ಶ್ರೀಲಂಕಾ..!

ಶ್ರೀಲಂಕಾದಲ್ಲಿ ನಡೆದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ 7 ಸಿಕ್ಸರ್ ಸಹಿತ ಅಜೇಯ 98 ರನ್ ಬಾರಿಸಿ ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದಾರೆ. ಈ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಎ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 264 ರನ್ ಗಳಿಸಿತು. ಹೀಗಾಗಿ ದಕ್ಷಿಣ ಆಫ್ರಿಕಾ ಎ ತಂಡಕ್ಕೆ 265 ರನ್‌ಗಳ ಗುರಿ ಸಿಕ್ಕಿತು. ಆದರೆ ಈ ಗುರಿ ಬೆನ್ನಟ್ಟಿದ ಆಫ್ರಿಕಾ ಎ ತಂಡದ 6 ಬ್ಯಾಟ್ಸ್‌ಮನ್‌ಗಳು ಕೇವಲ 155 ರನ್‌ಗಳಿಗೆ ಪೆವಿಲಿಯನ್‌ ಸೇರಿಕೊಂಡರು.ಅಂತಹ ಪರಿಸ್ಥಿತಿಯಲ್ಲಿ, ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಬೇಬಿ ಎಬಿ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು, ಕೊನೆಯವರೆಗೂ ಅಜೇಯರಾಗಿ ಉಳಿದಿದ್ದಲ್ಲದೆ ದಕ್ಷಿಣ ಆಫ್ರಿಕಾ ಎ ತಂಡವನ್ನು ಗೆಲುವಿನ ದಡ ಸೇರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 71 ಎಸೆತಗಳನ್ನು ಎದುರಿಸಿದ ಬ್ರೆವಿಸ್ ಅಜೇಯ 98 ರನ್ ಸಿಡಿಸಿದರು. ಇದರಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ಕೂಡ ಸೇರಿದ್ದವು.ಬ್ರೆವಿಸ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ದಕ್ಷಿಣ ಆಫ್ರಿಕಾ ಎ ತಂಡ, ಶ್ರೀಲಂಕಾ ಎ ತಂಡವನ್ನು ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋಲಿಸಿತು. ಲಂಕಾ ನೀಡಿದ 265 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಎ ಕೇವಲ 41.1 ಓವರ್‌ಗಳಲ್ಲಿ ಸಾಧಿಸಿತು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಎ ತಂಡದ ಪರ ಆರಂಭಿಕ ನಿಶಾನ್ ಮಧುಶಂಕ 68 ರನ್ ಬಾರಿಸಿದರೆ, ಜನಿತ್ ಲಿಯಾನಗೆ ಅಜೇಯ 76 ರನ್ ಬಾರಿಸಿದರು. ಬ್ಯಾಟಿಂಗ್​ಗೂ ಮುನ್ನ ಬೌಲಿಂಗ್​ನಲ್ಲೂ ಕಮಾಲ್ ಮಾಡಿದ ಬ್ರೆವಿಸ್ 6 ಓವರ್ ಬೌಲ್ ಮಾಡಿ 40 ರನ್  ನೀಡಿ, 1 ವಿಕೆಟ್ ಪಡೆದರು.

source https://tv9kannada.com/photo-gallery/cricket-photos/sa-a-vs-sl-a-dewald-brevis-smashes-98-as-south-africa-a-down-sri-lanka-a-in-pallekele-psr-594322.html

Leave a Reply

Your email address will not be published. Required fields are marked *