ಚಿತ್ರದುರ್ಗ, ಜು. 2:
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ನಗರದ ಕೋಟೆ ರಸ್ತೆಯ ಸರ್ಕಾರಿ ಮಾಧ್ಯಮಿಕ ಪಾಠಶಾಲೆಯ ವ್ಯಾಪ್ತಿಯ ಬೂತ್ ಸಂಖ್ಯೆ 123 ಹಾಗೂ 124ರಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಸಂಬಂಧಿತ ಅರ್ಜಿಗಳ ವಿತರಣಾ ಕಾರ್ಯ ನಡೆಯಿತು.

ಒಟ್ಟು 800 ಎಸ್ಐಆರ್ ಫಾರ್ಮ್ಗಳನ್ನು ವಿತರಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 180 ಫಾರ್ಮ್ಗಳನ್ನು ಮತದಾರರಿಗೆ ವಿತರಿಸಲಾಯಿತು. ಮತದಾರರ ಪಟ್ಟಿಯ ಮಾಹಿತಿಯನ್ನು ಸಮರ್ಪಕವಾಗಿ ಪರಿಷ್ಕರಿಸುವ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ.
ಈ ಕಾರ್ಯದಲ್ಲಿ ಬಿಎಲ್ಒಗಳಾದ ಬಂಗಾರಮ್ಮ, ಎನ್.ಡಿ. ಕುಮಾರ್ ಹಾಗೂ ಸೈಯದ್ ಭಾಷಾ ಸಕ್ರಿಯವಾಗಿ ಪಾಲ್ಗೊಂಡರು. ಜೊತೆಗೆ ಸೂಪರ್ವೈಸರ್ ಜಯಣ್ಣ ಅವರು ಸ್ಥಳದಲ್ಲಿದ್ದು ವಿತರಣಾ ಕಾರ್ಯದ ಮೇಲ್ವಿಚಾರಣೆ ನಡೆಸಿದರು.
ಮತದಾರರು ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.