ವರದಿ ಮತ್ತು ಪೋಟೋ ಕೃಪೆ ಸುರೇಶ್ ಪಟ್ಟಣ್,
ಚಿತ್ರದುರ್ಗ ಏ. 28
ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ, ಚಿಕ್ಕ ವಯಸ್ಸಿನಲ್ಲಿಯೆ ಕ್ರೀಡೆಯಲ್ಲಿ ತೊಡಗಿದರೆ ಮುಂದೆ ಉತ್ತಮವಾದ ಪ್ರಯೋಜನ ಇದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕರಾದ ತೋಟಯ್ಯ ತಿಳಿಸಿದರು.
ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಕಳೆದ 30 ದಿನಗಳಿಂದ ಸ್ಟೇಡಿಯಂ ಯೂತ್ ಅಥ್ಲಟಿಕ್ ಅಕಾಡೆಮಿವತಿಯಿಂದ ನಡೆಯುತ್ತಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಉತ್ತಮವಾದ ಆರೋಗ್ಯವನ್ನು ಹೊಂದಲು ಆಹಾರ ಮತ್ತು ಕ್ರೀಡೆ ಸಹಾಯವಾಗಿದೆ, ಇವೆರೆಡು ಉತ್ತಮವಾಗಿ ಇದ್ದಾಗ ಮಾತ್ರ ಮನುಷ್ಯ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ, ಕ್ರೀಡೆ, ವ್ಯಾಯಾಮ, ಯೋಗ ಧ್ಯಾನದ ಮೂಲಕ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ. ಈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಇದನ್ನು ಇಲ್ಲಿಗೆ ನಿಲ್ಲಿಸದೇ ಮುಂದುವರೆಸುವಂತೆ ತಿಳಿಸಿ, ದಿನದ 24 ಗಂಟೆಗಳಲ್ಲಿ 1 ಗಂಟೆ ನಿಮ್ಮ ದೇಹದ ಆರೋಗ್ಯಕ್ಕಾಗಿ ಮೀಸಲಿಡುವಂತೆ ಮನವಿ ಮಾಡಿದರು.
ಅಂತರಾಷ್ಟ್ರೀಯ ಕ್ರೀಡಾಪಟುವಾದ ಸತೀಶ್ ಮಾತನಾಡಿ, ಚಿಕ್ಕ ಮಕ್ಕಳಿಂದಲೇ ಕ್ರೀಡೆಯಲ್ಲಿ ಅಸಕ್ತಿಯನ್ನು ಮೂಡಿಸುವಂತ ಕಾರ್ಯವನ್ನು ಮಾಡಬೇಕಿದೆ, ಈ ಶಿಬಿರದಲ್ಲಿ ಮಕ್ಕಳಿಗೆ ಶಿಕ್ಷೆಯನ್ನು ನೀಡುವುದರ ಮೂಲಕ ಶಿಸ್ತನ್ನು ಕಲಿಸಲಾಗುತ್ತಿದೆ. ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿಯನ್ನು ಮೂಡಿಸುವಂತೆ ಕಾರ್ಯವನ್ನು ಮಾಡುವುದರ ಮೂಲಕ ಆವರನ್ನು ಉತ್ತಮವಾದ ಕ್ರೀಡಾಪಟುಗಳನ್ನಾಗಿ ಮಾಡಬೇಕಿದೆ. ಈ ಶಿಬಿರಕ್ಕೆ ಮಕ್ಕಳ ಪೋಷಕರು ಉತ್ತಮವಾದ ಸಹಕಾರವನ್ನು ನೀಡಿದ್ದಾರೆ. ನಮ್ಮಲ್ಲಿ ತರಬೇತಿಯನ್ನು ಪಡೆದ ಮಕ್ಕಳು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಕ್ರಿಡೆಯನ್ನು ಪ್ರದರ್ಶನ ಮಾಡಿದ್ದಾರೆ ಎಂದರು.


ಹಿರಿಯ ಕ್ರೀಡಾಪಟುವಾದ ನಾಗಭೂಷಣ ಮಾತನಾಡಿ ಮಕ್ಕಳಿಗೆ ಕ್ರೀಡೆಯ ಮೂಲಕ ಸಂಸ್ಕಾರವನ್ನು ಕಲಿಸುವಂತ ಕಾರ್ಯವನ್ನು ಇಲ್ಲಿ ಮಾಡಲಾಗಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಉತ್ತಮವಾಧ ತರಬೇತಿಯನ್ನು ನೀಡಲಾಗಿದೆ ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳು ಪೋಷಕರ ನಡೆ,ನುಡಿಯನ್ನು ಅನುಸರಿಸುತ್ತಾರೆ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ. ಈ ಶಿಬಿರದಲ್ಲಿ ಕಲಿತ ವಿಷಯವನ್ನು ಮಕ್ಕಳು ಮುಂದಿನ ದಿನದಲ್ಲಿ ತಮ್ಮ ಜೀವನದಲ್ಲಿ ಅಳವಡಿಕೆಯನ್ನು ಮಾಡಿಕೊಳ್ಳಬೇಕಿದೆ. ಇದರಿಂದ ಮುಂದೆ ಉತ್ತಮವಾದ ಕ್ರೀಡಾಪಟುವಾಗಲು ಸಾಧ್ಯವಿದೆ. ಪಠ್ಯದಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ಸಹಾ ನೀಡಿದಾಗ ಮಗುವಿನ ಸವೋತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆಯ ಮಾಜಿ ಸದಸ್ಯರಾದ ದೀಪು, ಕೃಷ್ಣಮೂರ್ತಿ, ಕಲಾವಿದರಾದ ನಾಗರಾಜ್ ಬೇದ್ರೇ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಯರಾದ ತಿಪ್ಪೇಸ್ವಾಮಿ, ಪ್ರಸಾದ್, ಶಿವು, ಬಸವರಾಜು, ಸುಹಾಸ್, ಪ್ರತೀಕ್ಷಾ, ಭಾಗವಹಿಸಿದ್ದರು.
ಸುಮಾರು 1 ತಿಂಗಳ ಕಾಲ ನಡೆದ ಬೇಸಿಗೆ ಶಿಬಿರದಲ್ಲಿ ಸುಮಾರು 220 ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

